ರತನ್ ಟಾಟಾ ಇವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ !

ಎಡದಿಂದ (ಎರಡನೇ) ರತನ್ ಟಾಟಾ

ನವದೆಹಲಿ – ವಿಶ್ವವಿಖ್ಯಾತ ಉದ್ಯಮಿ ಮತ್ತು ಟಾಟಾ ಸನ್ಸ್ ನ ಗೌರವಾನ್ವಿತ ಅಧ್ಯಕ್ಷರಾದ ರತನ ಟಾಟಾ ಇವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ದಿಂದ ಗೌರವಿಸಲಾಯಿತು. ಭಾರತದಲ್ಲಿನ ಆಸ್ಟ್ರೇಲಿಯಾದ ರಾಯಭಾರಿ ಬೈರಿ ಓ ಫೈರೆಲ್ ಇವರು ಈ ಸಂದರ್ಭದಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದರು.

ಫೈರೆಲ್ ಇವರು, ಟಾಟಾ ಇವರ ಯೋಗದಾನದಿಂದ ಆಸ್ಟ್ರೇಲಿಯಾದ ಮೇಲೆ ಕೂಡ ಮಹತ್ವಪೂರ್ಣ ಪ್ರಭಾವ ಬೀರಿದೆ. ಭಾರತ-ಆಸ್ಟ್ರೇಲಿಯಾ ಇದರಲ್ಲಿನ ಸಂಬಂಧದ ದೃಷ್ಟಿಯಿಂದ ರತನ ಟಾಟಾ ಇವರು ಅನೇಕ ವರ್ಷಗಳಿಂದ ತೋರಿಸಿರುವ ಕಟಿಬದ್ಧತೆ ನೋಡಿ ಅವರಿಗೆ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ದಿಂದ ಗೌರವಿಸಲು ನಮಗೆ ವಿಶೇಷ ಆನಂದವಾಗುತ್ತಿದೆ ಎಂದು ಹೇಳಿದರು.