‘ಲವ್ ಜಿಹಾದ್ ಮತ್ತು ದೇಶದ ಭದ್ರತೆಯ ಮಹತ್ವ

ಕಳೆದ ಕೆಲವು ತಿಂಗಳುಗಳಿಂದ ದೇಶದಾದ್ಯಂತ ವಾರ್ತಾವಾಹಿನಿಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳವರೆಗೆ ಶ್ರದ್ಧಾ ವಾಲಕರ್ ಇವಳ ಬರ್ಬರ ಹತ್ಯೆಯ ಪ್ರಕರಣವೇ ಚರ್ಚೆಯ ಏಕೈಕ ವಿಷಯವಾಗಿತ್ತು ! ಅಫ್ತಾಬ್ ಪೂನಾವಾಲಾ ಎಂಬ ಮುಸಲ್ಮಾನ ಯುವಕನು ಅಮಾನುಷವಾಗಿ ಶ್ರದ್ಧಾಳನ್ನು ೩೫ ತುಂಡುಗಳಾಗಿ ಕತ್ತರಿಸಿ ಶಾಂತ ಮನಸ್ಸಿನಿಂದ ಅವುಗಳನ್ನು ಶೀತಕಪಾಟಿನಲ್ಲಿ (ಫ್ರಿಡ್ಜ್‌ನಲ್ಲಿ) ಇಟ್ಟು ನಂತರ ಅವುಗಳನ್ನು ಕಾಡಿನಲ್ಲಿ ಎಸೆದನು. ಆದುದರಿಂದ ‘ಲವ್ ಜಿಹಾದ್ ಚರ್ಚೆ ಕಾಲ್ಪನಿಕ ವಿಷಯವಲ್ಲ ಎಂಬುದು ಈಗ ದೃಢಪಟ್ಟಿದೆ ಮತ್ತು ಅದರ ದೃಶ್ಯ ಪರಿಣಾಮ ಸಮಾಜದಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದ್ದರಿಂದ ದೇಶದಲ್ಲಿನ ಹಿಂದೂ ಯುವತಿಯರು ಮತ್ತು ಅವರ ಪಾಲಕರು ಜಾಗರೂಕರಾಗಿ ಈ ವಿಷಯವನ್ನು ಗಾಂಭೀರ್ಯದಿಂದ ನೋಡಬೇಕು. ಇದಕ್ಕಾಗಿ ಸುಪ್ರಸಿದ್ಧ ಲೇಖಕಿ ಶೆಫಾಲೀ ವೈದ್ಯ ಮತ್ತು ನಿಹಾರಿಕಾ ಪೋಳ ಸರ್ವಟೆ ಇವರು ಬರೆದಿರುವ ಈ ಪ್ರಖರ ಲೇಖನವನ್ನು ಮುಂದೆ ನೀಡುತ್ತಿದ್ದೇವೆ…

ಶೆಫಾಲೀ ವೈದ್ಯ

 ೧. ಮುಸ್ಲಿಮೇತರ ಹುಡುಗಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರಿಸುವುದೇ ‘ಲವ್ ಜಿಹಾದ್’ !

ಉತ್ತರಪ್ರದೇಶದಲ್ಲಿನ ಒಂದು ಮಹಾವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ‘ಲವ್ ಜಿಹಾದ್’ನ ಬಗ್ಗೆ ಮುಂದಿನ ಪ್ರಶ್ನೆಯನ್ನು ಕೇಳಿದಳು, “ಸಂವಿಧಾನವು ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯ ನಾಗರಿಕನಿಗೆ ತನಗೆ ಬೇಕಾದ ವ್ಯಕ್ತಿಯೊಂದಿಗೆ ವಿವಾಹವಾಗುವ ಅಧಿಕಾರವನ್ನು ನೀಡಿದೆ. ಹಾಗಾದರೆ ಪ್ರತಿಯೊಂದು ಹಿಂದೂ-ಮುಸಲ್ಮಾನನ ವಿವಾಹವನ್ನು ‘ಲವ್ ಜಿಹಾದ್’ ಎಂದು ತಿಳಿಯಬೇಕೇ ?” ಇದಕ್ಕೆ ಅವಳಿಗೆ ಮುಂದಿನಂತೆ ಉತ್ತರವನ್ನು ನೀಡಲಾಯಿತು, “ಪ್ರತಿಯೊಂದು ಅಂತರಧರ್ಮೀಯ ವಿವಾಹವು ‘ಲವ್ ಜಿಹಾದ್’ ಆಗಲಾರದು; ಆದರೆ ಮುಸಲ್ಮಾನ ಯುವಕರು ಮುಸ್ಲಿಮೇತರ ಹುಡುಗಿಯರನ್ನು ಆಯೋಜನಾಬದ್ಧ ರೀತಿಯಲ್ಲಿ ಪ್ರೇಮಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರಗೊಳಿಸುವುದೆಂದರೆ ‘ಲವ್ ಜಿಹಾದ್.’ ಸರ್ವೋಚ್ಚ ನ್ಯಾಯಾಲಯವೂ ‘ಕೇರಳದಲ್ಲಿ ‘ಲವ್ ಜಿಹಾದ್’ ಅಸ್ತಿತ್ವದಲ್ಲಿದೆ’, ಎಂಬ ‘ರಾಷ್ಟ್ರೀಯ ತನಿಖಾದಳ’ದ (ಎನ್.ಐ.ಎ.’ಯ) ಯುಕ್ತಿವಾದವನ್ನು ಒಪ್ಪಿಕೊಂಡು ಅದಕ್ಕೆ ವಿಚಾರಣೆಯ ಆದೇಶವನ್ನು ನೀಡಿದೆ.

ನಿಹಾರಿಕಾ ಪೋಳ-ಸರ್ವಟೆ

೨. ಸರ್ವೋಚ್ಚ ನ್ಯಾಯಾಲಯವು ಲವ್ ಜಿಹಾದ್‌ನ ಪ್ರಕರಣದಲ್ಲಿ ನೀಡಿದ ಆದೇಶ 

ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಯಾವ ಪ್ರಕರಣದಲ್ಲಿ ನೀಡಿತೋ, ಆ ಪ್ರಕರಣವೆಂದರೆ, ಶಫೀನ ಜಹಾಂ ಈ ಮುಸಲ್ಮಾನ ಯುವಕನು ಅಥಿಯಾ ಎಂಬ ಹಿಂದೂ ಹುಡುಗಿಯೊಂದಿಗೆ ಮಾಡಿದ ತಥಾಕಥಿತ ವಿವಾಹ ಮತ್ತು ಆ ವಿವಾಹದ ನಂತರ ಆ ಹುಡುಗಿಯು ಮಾಡಿದ ಮತಾಂತರ. ಈ ಪ್ರಕರಣದಲ್ಲಿ ‘ಎನ್.ಐ.ಎ. ತನ್ನ ಪಕ್ಷವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸುವಾಗ ಹೆಚ್ಚುವರಿ ಸೊಲಿಸಿಟರ್ ಜನರಲ್ ಮನಿಂದರ್ ಸಿಂಗ್ ಇವರು ‘ಈ ಪ್ರಕರಣ ಕೇವಲ ಅಂತರಧರ್ಮೀಯ ವಿವಾಹವಾಗಿರದೇ ಹಿಂದೂ ಹುಡುಗಿಯರನ್ನು ಪುಸಲಾಯಿಸಿ ಅವರನ್ನು ಮತಾಂತರಿಸುವ ಆಯೋಜನಾಬದ್ಧ ಪ್ರಯತ್ನ ಕೇರಳದಲ್ಲಿ ನಡೆಯುತ್ತಿದೆ. ಈ ಮತಾಂತರದ ಬೇರುಗಳು ಇಸ್ಲಾಮೀ ಭಯೋತ್ಪಾದನೆಯ ತನಕ ತಲುಪುತ್ತವೆ’, ಎಂದು ಹೇಳಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯ ಇದರ ವಿಚಾರಣೆಗೆ ಆದೇಶವನ್ನು ನೀಡಿದೆ.

೩. ‘ವಿವಾಹದ ಮೊದಲೇ ಹಿಂದೂ ಯುವತಿಯರ ಮತಾಂತರ ಏಕೆ ?’, ಈ ವಿಷಯದ ಬಗ್ಗೆ ಪ್ರಗತಿಪರ ವಿಚಾರಶೈಲಿಯ ಜನರು ಏನಾದರೂ ಮಾತನಾಡುವರೇ ?

ನಿಜವಾಗಿ ನೋಡಿದರೆ ಈ ‘ಲವ್ ಜಿಹಾದ್’ ಪ್ರಕರಣ ಹೊಸತೇನಲ್ಲ. ೨೦೧೦ ರಲ್ಲಿ ಕೇರಳದ ಆಗಿನ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ (ಸಾಮ್ಯವಾದಿ) ಪಕ್ಷದ ಮುಖಂಡ ಅಚ್ಯುತ್ತಾನಂದನ್ ಇವರು ಕೂಡ ‘ಕಟ್ಟರ್ ಇಸ್ಲಾಮೀ ಸಂಘಟನೆಗಳು ‘ಮ್ಯಾರೇಜ್ ಎಂಡ್ ಮನಿ’ (ವಿವಾಹ ಮತ್ತು ಹಣ) ಈ ಎರಡು ಶಸ್ತ್ರಗಳನ್ನು ಉಪಯೋಗಿಸಿ ಕೇರಳವನ್ನು ಇಸ್ಲಾಮೀಕರಣ ಮಾಡುತ್ತಿವೆ’, ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಕೇರಳದಲ್ಲಿನ ಚರ್ಚ್ ಮತ್ತು ಹಿಂದೂ ಸಂಘಟನೆಗಳೂ ಈ ಆರೋಪವನ್ನು ಪುಷ್ಟಿಕರಿಸಿದ್ದವು. ‘ಲವ್ ಜಿಹಾದ್’ ನಡೆಯುತ್ತಿದೆ ಮತ್ತು ಅದಕ್ಕೆ ಕೆಲವು ಮೂಲಭೂತವಾದಿ ಮುಸಲ್ಮಾನ ಸಂಘಟನೆಗಳು ‘ರೇಟ್ ಕಾರ್ಡ್’ನ್ನೂ (ದರಪಟ್ಟಿಯನ್ನು) ನೀಡಿವೆ’, ಎಂದು ಕೆಲವು ದಿನಗಳ ಹಿಂದೆ ಒಂದು ರಾಷ್ಟ್ರೀಯ  ನ್ಯೂಸ್ ಚಾನಲ್ ಆಘಾತಕಾರಿ ಆರೋಪವನ್ನು ಮಾಡಿತ್ತು.

ತಥಾಕಥಿತ ‘ಪ್ರಗತಿಪರ’ ವಿಚಾರಸರಣಿಯ ಜನರ ಇದರ ಮೇಲಿನ ಯುಕ್ತಿವಾದವೆಂದರೆ, ‘ಪ್ರೇಮವು ಧರ್ಮಾತೀತವಾಗಿರುತ್ತದೆ. ಆದುದರಿಂದ ಯಾವುದೇ ಹಿಂದೂ ಹುಡುಗಿಗೆ ಮುಸಲ್ಮಾನ ಹುಡುಗನನ್ನು ಪ್ರೀತಿಸುವ ಮತ್ತು ಅವನ ಧರ್ಮವನ್ನು ಸ್ವೀಕರಿಸುವ ಅಧಿಕಾರವಿದೆ.’ ಕಾನೂನಿಂತೆ  ಇದು ಯೋಗ್ಯವೇ ಆಗಿದೆ; ಆದರೆ ಇಂತಹ ವಿವಾಹವಾಗುವ ಹುಡುಗಿಯರು ಯಾವ ಕುಟುಂಬಗಳಿಂದ ಬಂದಿರುತ್ತಾರೆ ? ವಿವಾಹವಾಗುವಾಗ ಅವರ ಮಾನಸಿಕ ಸ್ಥಿತಿ ಹೇಗಿರುತ್ತದೆ ? ಅವಳು ಮುಸಲ್ಮಾನಳಾಗುತ್ತಾಳೆ ಎಂದರೆ ನಿರ್ದಿಷ್ಟವಾಗಿ ಏನು ಮಾಡುವವಳಿದ್ದಾಳೆ ? ಈ ಒಂದು ನಿರ್ಣಯದಿಂದ ಕಾನೂನಿನ ಪ್ರಕಾರ ಅವಳಿಗಿರುವ ಅಧಿಕಾರದಲ್ಲಾಗುವ ಪರಿಣಾಮಗಳೇನು, ಎಂಬುದರ ಸಂಪೂರ್ಣ ಅರಿವು  ಅವರಿಗೆ ಇರುತ್ತದೆಯೆ ? ಇವೆಲ್ಲ ವಿಷಯಗಳು ಮಹತ್ವದ್ದಾಗಿವೆ. ಇದು ಎರಡು ಭಿನ್ನ ಧರ್ಮೀಯರು ಪ್ರೇಮದ ಬಲೆಯಲ್ಲಿ ಬೀಳುವ ಅಥವಾ ವಿವಾಹವಾಗುವ ವಿಷಯವಾಗಿರದೆ, ಇದು ವಿವಾಹದ ಮೊದಲು ಮತಾಂತರ ಮಾಡುವುದಾಗಿದೆ !

೪. ಹುಡುಗಿಯರು ಮುಸಲ್ಮಾನ ಪುರುಷರೊಂದಿಗೆ ‘ವಿಶೇಷ ವಿವಾಹ ಕಾನೂನು’ ಇದರ ಪ್ರಕಾರ ವಿವಾಹವಾಗದಿದ್ದರೆ ಆಗುವ ಹಾನಿ

ಭಾರತೀಯ ಸಂವಿಧಾನಕ್ಕನುಸಾರ ಇಬ್ಬರು ಬೇರೆ ಬೇರೆ ಧರ್ಮದ ವ್ಯಕ್ತಿಗಳು ತಮ್ಮ ಧರ್ಮವನ್ನು ಬದಲಾಯಿಸದೆ ‘ಸ್ಪೆಶಲ್ ಮ್ಯಾರೇಜ್ ಎಕ್ಟ್’ನಡಿಯಲ್ಲಿ (ವಿಶೇಷ ವಿವಾಹ ಕಾನೂನಿನ ಅಡಿಯಲ್ಲಿ) ವಿವಾಹವಾಗಬಹುದು. ಹೀಗೆ ವಿವಾಹವಾಗುವ ಸ್ತ್ರೀಯ ಯಾವುದೇ ಕಾನೂನಿನ ಅಧಿಕಾರವನ್ನು   ಕಸಿದುಕೊಳ್ಳ ಲಾಗುವುದಿಲ್ಲ. ಕಾರಣಾಂತರದಿಂದ ಪತಿಯೊಂದಿಗೆ ಹೊಂದಾಣಿಕೆ ಆಗದಿದ್ದರೆ ಅವಳು ನ್ಯಾಯಾಲಯಕ್ಕೆ ಹೋಗಿ ವಿವಾಹವಿಚ್ಛೇದನ ತೆಗೆದುಕೊಳ್ಳುವ, ಉದರ ಪೋಷಣೆಯನ್ನು ಕೇಳುವ ಮತ್ತು ಪತಿಯ ಆಸ್ತಿಯಲ್ಲಿ ಪತ್ನಿಯೆಂದು ಅಧಿಕಾರವನ್ನು ಕೇಳುವ ಹಕ್ಕಿದೆ; ಆದರೆ ಯಾವ ಸ್ತ್ರೀಯರು ವಿವಾಹದ ಮೊದಲು ಮತಾಂತರವಾಗಿ ‘ಶರಿಯಾ’ ಕಾನೂನಿನಂತೆ ನಿಕಾಹ (ವಿವಾಹ) ಮಾಡಿಕೊಳ್ಳುತ್ತಾರೆಯೋ, ಅವರಿಗೆ ಈ ಎಲ್ಲ ಅಧಿಕಾರಗಳಿಗೆ ತಿಲಾಂಜಲಿಯನ್ನು ನೀಡಬೇಕಾಗುತ್ತದೆ. ಮುಸಲ್ಮಾನ ಪುರುಷನಿಗೆ ‘ಶರಿಯಾ’ ಕಾನೂನಿನಂತೆ ೪ ವಿವಾಹವಾಗುವ ಅಧಿಕಾರವಿದೆ. ಅವನಿಗೆ ಧ್ವನಿಯ ಮೂಲಕ (ಮೌಖಿಕ ತಲಾಕ್) ನೀಡುವ ಅಧಿಕಾರವಿದೆ, ಅದೇ ಅಧಿಕಾರ ಸ್ತ್ರೀಯರಿಗಿಲ್ಲ. ಮುಸಲ್ಮಾನ ಪುರುಷನು ಸ್ತ್ರೀಯರಿಗೆ ೩ ಸಲ ‘ತಲಾಕ್’ ಎಂದು ಹೇಳಿ ವಿಚ್ಛೇದನೆಯನ್ನು ನೀಡಬಹುದು; ಆದರೆ ಅದೇ ಹಕ್ಕು ಸ್ತ್ರೀಯರಿಗಿಲ್ಲ.

೫. ಹಿಂದೂ ಹುಡುಗಿಯ ನಿಕಾಹವನ್ನು ಮಾಡುವುದರಿಂದ ಆಗುವ ತೊಂದರೆಗಳು ಮತ್ತು ಆ ವಿಷಯದಲ್ಲಿ ಪ್ರತ್ಯಕ್ಷ ಘಟಿಸಿದ ಉದಾಹರಣೆ

ಹೆಚ್ಚಿನ ಹುಡುಗಿಯರು ತುಂಬಾ ಎಳೆ ವಯಸ್ಸಿನಲ್ಲಿ ಭಾವನೆಯ ಭರದಲ್ಲಿ ತನ್ನ ಪ್ರಿಯಕರನ ಮಾನಸಿಕ ಒತ್ತಡಕ್ಕೆ ಬಲಿಯಾಗಿ ಮತಾಂತರವಾಗುವ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಆಗ ಅವರಿಗೆ ನಿಕಾಹ’ಕ್ಕಾಗಿ (ವಿವಾಹಕ್ಕಾಗಿ) ಮಾತ್ರ ಧರ್ಮವನ್ನು ಬದಲಾಯಿಸಲಿಕ್ಕಿದೆ. ಒಮ್ಮೆ ವಿವಾಹವಾದ ನಂತರ ಆ ಹುಡುಗಿ ತನ್ನ ಮೂಲ ಧರ್ಮದ ರೂಢಿ ಪರಂಪರೆಗಳ ಪಾಲನೆಯನ್ನು ಮಾಡಬಹುದು, ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಹುಡುಗಿ ತುಂಬಾ ಒತ್ತಡದಲ್ಲಿರುತ್ತಾಳೆ. ಅವಳ ಮನೆಯವರಿಂದ ಈ ವಿವಾಹಕ್ಕಂತೂ ತೀವ್ರ ವಿರೋಧ ಇದ್ದೇ ಇರುತ್ತದೆ. ಆದ್ದರಿಂದ ಅವಳು ಓಡಿಹೋಗಿ ವಿವಾಹವಾಗುವ ಅಪಾಯಕಾರಿ ನಿರ್ಣಯವನ್ನು ತೆಗೆದುಕೊಂಡರೆ ತವರಿನ ಅಲ್ಪಸ್ವಲ್ಪ ಆಧಾರವೂ ಅವಳಿಗೆ ಇಲ್ಲವಾಗುತ್ತದೆ. ಆ ಮೇಲೆ ನಿಕಾಹ ಮಾಡಿಕೊಂಡು ಪತಿಯು ಹೇಳಿದ್ದನ್ನು ಕೇಳಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯೇ ಉಳಿಯುವುದಿಲ್ಲ. ನನ್ನ ಪರಿಚಯದ ಓರ್ವ ಹಿಂದೂ ಹುಡುಗಿ ಹೀಗೆಯೆ ತನ್ನ ೧೮ ನೇ ವಯಸ್ಸಿನಲ್ಲಿ ಓಡಿ ಹೋಗಿ ಮತಾಂತರವಾಗಿ ಒಬ್ಬ ಮುಸಲ್ಮಾನ ಹುಡುಗನೊಂದಿಗೆ ನಿಕಾಹ ಮಾಡಿ ಕೊಂಡಳು; ಆದರೆ ಕೆಲವೇ ತಿಂಗಳುಗಳಲ್ಲಿ ಅವನ ನಿಜಸ್ವರೂಪ ಅವಳಿಗೆ ತಿಳಿಯಿತು. ಅವನು ಅವಳಿಗೆ ಹೊಡೆಯುವುದು-ಬಡಿಯುವುದು ಮಾಡತೊಡಗಿದನು. ಅವಳನ್ನು ತನ್ನ ಕುಟುಂಬದ ಕಾವಲಿನಲ್ಲಿ ಬಂಧಿಸಿ ಇಡತೊಡಗಿದನು. ಅವಳ ಸುದೈವದಿಂದ ಅಲ್ಲಿಯೇ ನೆರೆಯಲ್ಲಿರುವ ಓರ್ವ ಸಹೃದಯ ಮುಸಲ್ಮಾನ ಮಹಿಳೆಯು ಅವಳಿಗೆ ಅವಳ ಮನೆಯವರನ್ನು ಸಂಪರ್ಕಿಸಲು ಸಹಾಯ ಮಾಡಿದಳು ಮತ್ತು ಅವರು ಬಂದು ಪೊಲೀಸರ ಸಹಾಯದಿಂದ ಅವಳನ್ನು ಬಿಡಿಸಿಕೊಂಡು ಹೋದರು. ನಂತರ ಅವಳು ವಿಧಿಗಳೊಂದಿಗೆ ಪುನಃ ಹಿಂದೂ  ಧರ್ಮವನ್ನು ಸ್ವೀಕರಿಸಿದಳು ಮತ್ತು ಅವಳು ತನ್ನ ವಕೀಲಿ ಶಿಕ್ಷಣವನ್ನು ಪೂರ್ಣಗೊಳಿಸಿದಳು. ಈಗ ಅವಳು ಭಾಗ್ಯನಗರದಲ್ಲಿ ‘ಪ್ರಾಕ್ಟಿಸ್’ (ವ್ಯವಸಾಯ) ಮಾಡುತ್ತಿದ್ದಾಳೆ. ಅವಳ ಹೆಚ್ಚಿನ ಪಕ್ಷಕಾರರು ‘ತ್ರಿವಳಿ ತಲಾಕ್’ನ (ವಿಚ್ಛೇದನದ) ಸಂತ್ರಸ್ತ ಮುಸಲ್ಮಾನ ಮಹಿಳೆಯರಾಗಿದ್ದಾರೆ ! ಆ ಹುಡುಗಿ ಅದೃಷ್ಟವಂತಳೆಂದು ಆ ಜಾಲದಿಂದ ಅವಳಿಗೆ ಹೊರಗೆ ಬರಲು ಸಾಧ್ಯವಾಯಿತು; ಆದರೆ ಬಹಳಷ್ಟು ಪ್ರಸಂಗಗಳಲ್ಲಿ ಇಂತಹ ಹುಡುಗಿಯರಿಗೆ ತವರಿನ ಆಧಾರವೂ ಇಲ್ಲವಾಗಿದ್ದರಿಂದ ಇರುವ ಪರಿಸ್ಥಿತಿಗೆ ಹೊಂದಿಕೊಂಡು ದಿನಗಳನ್ನು ಕಳೆಯಬೇಕಾಗುತ್ತದೆ. ಪ್ರಖ್ಯಾತ ಕನ್ನಡ ಸಾಹಿತಿ ಎಸ್.ಎಲ್. ಭೈರಪ್ಪ ಇವರ ‘ಆವರಣ ಎಂಬ ಕಾದಂಬರಿಯಲ್ಲಿ ‘ಲವ್ ಜಿಹಾದ್ ಹೇಗೆ ಆಗುತ್ತದೆ, ಎಂಬುದರ ಬಗ್ಗೆ ತುಂಬಾ ಒಳ್ಳೆಯ ವರ್ಣನೆಯಿದೆ.

೬. ಪತ್ರಕರ್ತೆ ಸುನೀಲಾ ಸೋವನೀ ಇವರು ‘ಲವ್ ಜಿಹಾದ್’ನ ವಿಷಯದಲ್ಲಿ ಬರೆದಿರುವ ಪುಸ್ತಕದಲ್ಲಿ ತೋರಿಸಿರುವ ವಾಸ್ತವ 

ಪತ್ರಕರ್ತೆ ಸುನೀಲಾ ಸೋವನೀ ಇವರು ‘ಲವ್ ಜಿಹಾದ್ನ ಪ್ರತ್ಯಕ್ಷ ಪ್ರಕರಣಗಳಲ್ಲಿ ಸಿಲುಕಿರುವ ಯುವತಿಯರು, ಅವರ ತಾಯಿ-ತಂದೆ ಮತ್ತು ಇತರರನ್ನು ಭೇಟಿಯಾಗಿ ‘ಲವ್ ಜಿಹಾದ್‌ನಲ್ಲಿನ ಹೊರಗೆ ಬರದ ಭಯಾನಕ ವಾಸ್ತವ ಎಂಬ ಒಂದು ಸಣ್ಣ ಪುಸ್ತಕವನ್ನು ಬರೆದಿದ್ದಾರೆ. ಅದನ್ನು ಓದಿದರೆ ಈ ಪ್ರಕರಣಗಳಲ್ಲಿನ ಸುವ್ಯವಸ್ಥಿತತನ ಗಮನಕ್ಕೆ ಬರುತ್ತದೆ. ಸುನೀಲಾ ಸೋವನೀಯವರ ಅಭಿಪ್ರಾಯದಲ್ಲಿ ‘ಲವ್ ಜಿಹಾದ್ಗೆ ಬಲಿಯಾಗುವ ಬಹಳಷ್ಟು ಹುಡುಗಿಯರು ‘ಯಾರಾದರೂ ನಮ್ಮನ್ನು ಗಮನಿಸಬೇಕು, ಎಂದು ಬಹಳ ಆಸೆಪಡುತ್ತಿರುತ್ತಾರೆ, ಅಂದರೆ, ಯಾರಾದರೂ ಪ್ರತಿದಿನ ನನ್ನನ್ನು ನೋಡುತ್ತಾರೆ, ಅವರ ನಗು ಅಥವಾ ಬೇರೆ ಯಾವುದೇ ಕಾರಣ ಅವರಿಗೆ ಪ್ರೇಮಜಾಲದಲ್ಲಿ ಸಿಲುಕಲು ಸಾಕಾಗುತ್ತದೆ. ಒಮ್ಮೆ ಹುಡುಗಿ ಹುಡುಗನಿಂದ ಆಕರ್ಷಿತಳಾದರೆ ಸಾಕು, ಹುಡುಗನು ಅವಳಿಗೆ ಉಡುಗೊರೆಗಳ ಸುರಿಮಳೆಯನ್ನೇ ನೀಡುತ್ತಾನೆ. ಮುಂದಿನ ಹಂತವೆಂದರೆ ಹುಡುಗ ಹುಡುಗಿಗೆ ಸಂಚಾರಿವಾಣಿಯನ್ನು ಕೊಡಿಸುತ್ತಾನೆ. ಈ ರೀತಿಯಲ್ಲಿ ಹುಡುಗಿಯ ಮನೆಯವರಿಗೆ ತಿಳಿಯದೇ ಅವರ ಸಂಪರ್ಕ ನಿರಾಯಾಸವಾಗಿ ನಡೆಯುತ್ತದೆ. ಅದರಲ್ಲಿಯೂ ಹುಡುಗಿ ಶಿಕ್ಷಣಕ್ಕಾಗಿ ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ, ಪ್ರಕರಣವು ಇನ್ನೂ ಸುಲಭವಾಗುತ್ತದೆ. ಒಮ್ಮೆ ಪ್ರೇಮ ಪ್ರಕರಣ ಆರಂಭವಾದರೆ, ಎರಡನೆಯ ಹಂತವೆಂದರೆ ಶಾರೀರಿಕ ಸಂಬಂಧ. ಇದು ಅತ್ಯಂತ ಅಪಾಯಕಾರಿ ಹಂತ ವಾಗಿದೆ. ಪ್ರೇಮವನ್ನು ಸಿದ್ಧಪಡಿಸುವ ಏಕೈಕ ಮಾರ್ಗವೆಂದರೆ ಪ್ರಿಯಕರನ ಜೊತೆಗೆ ಹೊಟೇಲ್‌ನಲ್ಲಿ ಅಥವಾ ಯಾವುದಾದರೂ ಮಿತ್ರನ ಮನೆಯಲ್ಲಿ ಉಳಿಯುವುದು. ಹೀಗೆ ಮಾಡಲು ನಿರಾಕರಿಸುವ ಹುಡುಗಿಯರ ಮೇಲೆ ಭಾವನಾತ್ಮಕ ಒತ್ತಡವನ್ನು ಹೇರಲಾಗುತ್ತದೆ. ಶಾರೀರಿಕ ಹಸಿವಂತೂ ಇದ್ದೇ ಇರುತ್ತದೆ. ಆದ್ದರಿಂದ ಹುಡುಗಿ ಪ್ರಿಯಕರನ ಜೊತೆಗೆ ಹೋಗಲು ತಯಾರಾಗುತ್ತಾಳೆ. ಅವನು ವಿವಾಹದ ವಚನವನ್ನಂತೂ ಮೊದಲೆ ನೀಡಿರುತ್ತಾನೆ.

ಒಮ್ಮೆ ಶಾರೀರಿಕ ಸಂಬಂಧ ಬೆಳೆದೊಡನೆ ಹುಡುಗಿ ಸಂಪೂರ್ಣ ಮೋಸ ಹೋಗುತ್ತಾಳೆ. ಕೆಲವೊಮ್ಮೆ ಅದರ ಚಿತ್ರೀಕರಣವನ್ನೂ ಮಾಡಲಾಗುತ್ತದೆ. ಆದುದರಿಂದ ಅವಳ ಮನಸ್ಸಿನಲ್ಲಿ ಹೊರಗೆ ಬರುವ ಇಚ್ಛೆಯಿದ್ದರೂ, ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ ಹುಡುಗಿಗೆ ಇಸ್ಲಾಮಿನ ರೀತಿರಿವಾಜಗಳನ್ನು ಪಾಲಿಸಲು ಒತ್ತಾಯಪಡಿಸಲಾಗುತ್ತದೆ. ಹುಡುಗಿ ತನ್ನ ತಾಯಿ-ತಂದೆಯೊಂದಿಗಿದ್ದರೂ ಅವರ ಕಣ್ಣುತಪ್ಪಿಸಿ ನಮಾಜು ಪಠಣ ಮಾಡಲು ಹಾಗೂ ಓದಲು ಪುಸ್ತಕಗಳನ್ನು ಕೊಡಲಾಗುತ್ತದೆ.

ಕೊನೆಯ ಹಂತವೆಂದರೆ ಆಯೋಜನಾಬದ್ಧ ಮತಾಂತರ ಮತ್ತು ನಿಕಾಹನಾಮಾ. ಮತಾಂತರದಿಂದ ನಾವು ಯಾವ ಅಧಿಕಾರಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದು ಅವರಿಗೆ ತಿಳಿಯುವುದಿಲ್ಲ. ಅದರಲ್ಲಿಯೂ ಯಾರಾದರೂ ಸುಶಿಕ್ಷಿತ ಜಾಗರೂಕ ಹುಡುಗಿ ‘ಸ್ಪೆಶಲ್ ಮ್ಯಾರೇಜ್ ಏಕ್ಟ್ ಪ್ರಕಾರ ವಿವಾಹವಾಗುವ ವಿಷಯವನ್ನೆತ್ತಿದರೆ ‘ನನಗೆ ಧರ್ಮದ ಬಗ್ಗೆ ಏನೂ ಇಲ್ಲ; ಆದರೆ ನನ್ನ ತಾಯಿ-ತಂದೆ ಹಾಗೆ ಹೇಳುತ್ತಿದ್ದಾರೆ,  ಇದೇ ಏನು ನಿನಗೆ ನನ್ನ ಮೇಲಿನ ಪ್ರೀತಿ ?, ಇತ್ಯಾದಿ ಭಾವನಿಕ ‘ಬ್ಲ್ಯಾಕ್‌ಮೇಲ್ ಮಾಡಿ ಹುಡುಗಿಗೆ ನಿಕಾಹನಾಮಾವನ್ನು ಮಾಡಲು ಒಪ್ಪಿಸಲಾಗುತ್ತದೆ. ಇಷ್ಟಾಗುವವರೆಗೆ ಹುಡುಗಿ ಆ ಹುಡುಗನಿಗೆ ಮಾನಸಿಕ ಮತ್ತು ಶಾರೀರಿಕ ದೃಷ್ಟಿಯಲ್ಲಿ ಸಂಪೂರ್ಣ ವಶವಾಗಿರುತ್ತಾಳೆ. ಈಗ ಅವಳು ವಿಚಾರ ಮಾಡುವುದರ ಆಚೆಗೆ ಹೋಗಿರುತ್ತಾಳೆ. ಹುಡುಗಿಯ ತಂದೆ-ತಾಯಿಗೆ ತಿಳಿದರೂ, ಬಹಳಷ್ಟು ಸಲ ಅವರು ‘ಈಗ ಅವಳು ನಮ್ಮ ಪಾಲಿಗೆ ಸತ್ತಿದ್ದಾಳೆ, ಎಂದು ಹೇಳಿ ಅವಳತ್ತ ಬೆನ್ನು ತಿರುಗಿಸುತ್ತಾರೆ, ಆದ್ದರಿಂದ ಅವಳಿಗೆ ಈಗ ಯಾವುದೇ ಪರ್ಯಾಯ ಉಳಿದಿರುವುದಿಲ್ಲ. ತನ್ನ ಮಗಳ ಒಳಿತಿಗಾಗಿ ಕೇರಳ ಉಚ್ಚ ನ್ಯಾಯಾಲಯದ ವರೆಗೆ ಧಾವಿಸಿದ ಅಥಿಯಾಳ ತಂದೆಯ ಹಾಗಿರುವವರು ಬಹಳ ವಿರಳ.

೭. ಲವ್ ಜಿಹಾದ್‌ನ ಪ್ರಕರಣಗಳ ವಿಚಾರಣೆ ಮಾಡುವುದು ದೇಶದ ಭದ್ರತೆಯ ದೃಷ್ಟಿಯಲ್ಲಿ ಮಹತ್ವದ್ದಾಗಿದೆ !

‘ಯಾವುದಾದರೊಂದು ಪ್ರಕರಣದಲ್ಲಿ ಹುಡುಗಿ ಮತಾಂತರವಾಗದಿದ್ದರೂ, ಈ ವಿವಾಹದಿಂದಾಗುವ ಮಕ್ಕಳು ಮಾತ್ರ ಇಸ್ಲಾಮ್ ಧರ್ಮದವರೆ ಆಗುವರು, ಇದು ಅಲಿಖಿತ ಕರಾರಾಗಿರುತ್ತದೆ. ‘ಬ್ರೈನ್‌ವಾಶ್ ಆಗಿರುವ ಹುಡುಗಿಯರು ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ. ‘ಇದಕ್ಕಾಗಿ ಕೊಲ್ಲಿ (ಅರಬ) ರಾಷ್ಟ್ರಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತದೆ, ಎಂದು ‘ಎನ್.ಐ.ಎ. ಯ ಹೇಳಿಕೆಯಾಗಿದೆ. ಹೀಗೆ ಮತಾಂತರವಾದ ಅನೇಕ ಯುವತಿಯರು ಕೇರಳದಿಂದ ಮುಸಲ್ಮಾನರ ‘ಐಸಿಸ್ನ ‘ಧರ್ಮಯುದ್ಧದಲ್ಲಿ ಸೇರಿಕೊಳ್ಳಲು ಸಿರಿಯಾಗೆ ಹೋಗಿರುವ ಅನೇಕ ಪ್ರಕರಣಗಳು ಕೇರಳ ಪೊಲೀಸರಲ್ಲಿವೆ. ಇತರ ಧರ್ಮದವರ ಜೊತೆಗೆ ವಿವಾಹಗಳು, ಆಗಬಾರದೆಂದು ಯಾರೂ ಹೇಳುವುದಿಲ್ಲ. ೨೧ ನೇ ಶತಮಾನದಲ್ಲಿ ತನ್ನ ಜೊತೆಗಾರನನ್ನು ಆರಿಸುವ ಅಧಿಕಾರ ಎಲ್ಲರಿಗೂ ಇದೆ; ಆದರೆ ನಾವು ಮತಾಂತರವಾಗುತ್ತೇವೆ, ಅಂದರೆ ಏನು ಮಾಡುತ್ತೇವೆ, ಎಂಬ ಕಲ್ಪನೆ ಆ ಹುಡುಗಿಯರಿಗಿದೆಯೇ ಇಂತಹ ವಿವಾಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ಕೊಡುಕೊಳ್ಳುವಿಕೆಯಾಗು ತ್ತದೆಯೆ ? ಹೀಗೆ ವಿವಾಹವಾದ ಹುಡುಗಿಯರ ವಿಷಯದಲ್ಲಿ ಮುಂದೇನಾಗುತ್ತದೆ ? ಪತಿ ‘ತಲಾಕ್ ನೀಡಿ ಹೊರದಬ್ಬಿದರೆ, ಅವಳಿಗೆ ನಿರ್ದಿಷ್ಟವಾಗಿ ಮುಂದಿನ ಮಾರ್ಗ ಏನಿದೆ ? ಹೀಗೆ ವಿವಾಹ ಆದವರೊಂದಿಗೆ ಕಟ್ಟರ್ ಇಸ್ಲಾಮೀ ಸಂಘ ಟನೆಗಳಿಗಿರುವ ಸಂಬಂಧವೇನು ? ಇದರ ವಿಚಾರಣೆ ನಡೆಸುವುದು ದೇಶದ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಆದುದರಿಂದಲೇ ‘ಲವ್ ಜಿಹಾದ್ ಇದು ಕೇವಲ ಇಬ್ಬರು ಭಿನ್ನ ಮತೀಯ ವ್ಯಕ್ತಿಗಳಿಗೆ ಸೀಮಿತವಾಗಿರುವುದಿಲ್ಲ ! (ಆಧಾರ : ದೈನಿಕ ‘ಮುಂಬಯಿ ತರುಣ ಭಾರತ, ೧೯.೧೧.೨೦೨೨)