ಬೇಸಿಗೆಯಲ್ಲಿ ಒಣಗಿದ ಎಲೆಕಡ್ಡಿಗಳನ್ನು ಸಂಗ್ರಹಿಸಿ ಗಿಡಗಳ ಸಂವರ್ಧನೆಗಾಗಿ ಉಪಯೋಗಿಸಿರಿ !

ಸನಾತನದ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ

‘ಮಾರ್ಚ-ಏಪ್ರಿಲ್ ತಿಂಗಳಲ್ಲಿ ಗಿಡಗಳ ಕೆಳಗೆ ಬಿದ್ದಿರುವ ಎಲೆಕಡ್ಡಿಗಳು ಎಲ್ಲೆಡೆ ಬಹಳಷ್ಟು ಲಭ್ಯವಿರುತ್ತವೆ. ಈ ದಿನಗಳಲ್ಲಿ ತಮ್ಮಲ್ಲಿನ ಜಾಗದ ಲಭ್ಯತೆಗನುಸಾರ ಸಾಧ್ಯವಾದಷ್ಟು ಎಲೆ ಕಡ್ಡಿಗಳನ್ನು ಸಂಗ್ರಹಿಸಿಡಬೇಕು. ಹೀಗೆ ಮಾಡುವುದರಿಂದ ಮುಂದೆ ಜೂನ ತಿಂಗಳಿನ ಮಳೆಗಾಲದಲ್ಲಿ ತಾವು ಸಂಗ್ರಹಿಸಿದ ಎಲೆಕಡ್ಡಿಗಳನ್ನು ಉಪಯೋಗಿಸಬಹುದು.

ತಮ್ಮಲ್ಲಿನ ಕೈತೋಟದಲ್ಲಿಯೂ ಎಲ್ಲೆಡೆ ಒಣಗಿದ ಎಲೆ ಕಡ್ಡಿಗಳ ದಪ್ಪವಾದ ಪದರವನ್ನು ಮಾಡಬೇಕು. (ಒಣಗಿದ ಎಲೆಕಡ್ಡಿಗಳಿಂದ ಭೂಮಿಯನ್ನು ಮುಚ್ಚಬೇಕು.) ಆದ್ದರಿಂದ ಉರಿ ಬಿಸಿಲಿನಿಂದ ಮಣ್ಣಿನ ರಕ್ಷಣೆಯಾಗುತ್ತದೆ ಮತ್ತು ತಂಪಾಗಿರಲು ಸಹಾಯವಾಗುತ್ತದೆ.’

– ಸೌ. ರಾಘವೀ ಮಯೂರೇಶ್ವರ ಕೊನೆಕರ, ಢವಳಿ, ಫೊಂಡಾ, ಗೋವಾ. (೪.೩.೨೦೨೩)

ನಿಮಗೆ ಈ ಲೇಖನಮಾಲಿಕೆ ಹೇಗೆ ಎನಿಸಿತು, ಎಂಬುದನ್ನು ನಮಗೆ ತಿಳಿಸಿರಿ ! [email protected]