ಅತೀಕ್ ಮತ್ತು ಅಶ್ರಫ್ ಹತ್ಯೆ ವಿಷಯ ಇಸ್ಲಾಮಿಕ್ ದೇಶ ಬಹರೀನ ಸಂಸತ್ತಿನಲ್ಲಿ ಪ್ರಸ್ತಾಪ
ನವ ದೆಹಲಿ – ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಬಹರೀನ್ ಸಂಸತ್ತಿನಲ್ಲಿ ಉತ್ತರಪ್ರದೇಶದ ಕುಖ್ಯಾತ ಗೂಂಡಾ ಅತೀಕ ಅಹಮದ ಮತ್ತು ಆತನ ಸಹೋದರ ಅಶ್ರಫ್ ಹತ್ಯೆ ಪ್ರಕರಣ ಪ್ರಸ್ತಾಪವಾಗಿದೆ. ಅಹಮದ ಕರಾತ ಎಂಬ ಸಂಸದರು ಈ ಬಗ್ಗೆ ಮಾತನಾಡುತ್ತಾ, ಅತೀಕ್ ಅಹಮದ್ ಹಾಗೂ ಆತನ ಸಹೋದರ ಪೊಲೀಸರ ವಶದಲ್ಲಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಅವರನ್ನು ಹಿಂದೂ ಉಗ್ರರು ಕೊಂದಿದ್ದರು. ಈ ಘಟನೆ ಖಂಡನೀಯವಾಗಿದೆ. ನಾವು ಬಹರಿನ್ ಮತ್ತು ಇತರ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ; ಆದರೆ ಮತ್ತೊಂದೆಡೆ ಭಾರತದಲ್ಲಿ ಮುಸ್ಲಿಮರ ಬಗ್ಗೆ ಏನಾಗುತ್ತಿದೆ ಎಂಬುದು ಸ್ವೀಕಾರಾರ್ಹವಲ್ಲ. ಮುಸಲ್ಮಾನರ ರಕ್ತಪಾತ ತಡೆಯುವ ನಿರ್ಧಾರ ಕೈಗೊಳ್ಳಬೇಕು’, ಎಂದಿದ್ದಾರೆ.
बहरीन संसद में गैंगस्टर अतीक अहमद और उसके भाई की मौत की निंदा की गई।
बहरीन और भारत के बीच व्यापार रोकने का आह्वान भी किया गया
भारत को “हिंदू चरमपंथी” देश भी कहा गया। pic.twitter.com/7ozOrkkXJs
— Panchjanya (@epanchjanya) April 21, 2023
ಸಂಸತ್ತಿನಲ್ಲಿ ಮತ್ತೊಬ್ಬ ಸಂಸದನು, ಪೊಲೀಸರಿಂದ ಜೀವ ಬೆದರಿಕೆ ಇದೆ ಎಂದು ಅತೀಕ್ ಅಹ್ಮದ್ ಒಂದು ತಿಂಗಳ ಹಿಂದೆ ದೂರು ನೀಡಿದ್ದನು, ಈಗ ಪೊಲೀಸರ ಸಮ್ಮುಖದಲ್ಲಿಯೇ ಅವನ ಹತ್ಯೆಗೈದಿರುವುದನ್ನು ನೋಡಿದ್ದೇವೆ. ಮುಸ್ಲಿಮರ ವಿಷಯಕ್ಕೆ ಬಂದರೆ, ಈ ಘಟನೆಗಳು ಮರುಕಳಿಸುವುದನ್ನು ನಾವು ನೋಡುತ್ತಿದ್ದೇವೆ. ಮುಸ್ಲಿಮರನ್ನು ಕೊಲ್ಲುತ್ತಿರುವುದನ್ನು ಹಲವು ವಿಡಿಯೋಗಳು ತೋರಿಸಿವೆ. ಮಸೀದಿಗಳನ್ನು ಧ್ವಂಸ ಮಾಡುವವರಿಗೆ ಹಾಗೂ ದುರ್ಬಲರ ಮೇಲೆ ಹಲ್ಲೆ ನಡೆಸುವವರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಪಾದಕೀಯ ನಿಲುವುಭಾರತದ ಆಂತರಿಕ ಘಟನೆಗಳಲ್ಲಿ ಬಹಿರೀನ್ ಮೂಗು ತೂರಬಾರದೆಂದು ಭಾರತ ಸರ್ಕಾರ ಬಹರೀನಗೆ ಗದರಿಸಬೇಕು ! ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧದ ಬಗ್ಗೆ ಬಹರೀನ ಎಂದಾದರೂ ಬಾಯಿ ತೆರೆಯುವುದೇ ? ಕಾಶ್ಮೀರದಲ್ಲಿ ಹಿಂದೂಗಳ ಮಾರಣಹೋಮ ಮಾಡಿ ಅಲ್ಲಿದ್ದ ಹಿಂದೂಗಳು ಪಲಾಯನ ಮಾಡಬೇಕಾದಾಗ ಇವರು ಎಂದಾದರೂ ಪ್ರತಿಭಟಿಸಿದ್ದಾರಾ ? ಅತೀಕ್ ಮತ್ತು ಅವನ ಸಹೋದರ ಕುಖ್ಯಾತ ಗೂಂಡಾಗಳಾಗಿದ್ದರು. ಅವರು ಕೆಲವು ಹಿಂದೂಗಳನ್ನು ಕೊಂದಿದ್ದರು. ಇಂತಹ ಗೂಂಡಾಗಳ ಪರವಾಗಿರುವ ಬಹರೀನ ಮನಸ್ಥಿತಿಯು ಗಮನಕ್ಕೆ ಬರುತ್ತದೆ ! |