ಭಾರತದ ಎದುರು ಉತ್ತರದ ಸಂರಕ್ಷಣೆಯ ಸವಾಲಿದೆ ! – ಅಮೇರಿಕ

ಭಾರತಕ್ಕೆ ಸರ್ವತೋಪರಿ ಸಹಾಯ ಮಾಡಲು ಸಿದ್ಧ !


ವಾಷಿಂಗ್ಟನ್ (ಅಮೇರಿಕ) –
ಭಾರತ ಮತ್ತು ಅಮೇರಿಕಾದ ಎದುರು ಚೀನಾವು ಒಂದು ಸಮಾನ ಸಂರಕ್ಷಣಾತ್ಮಕ ಕರೆಯಾಗಿದೆ. ಅಮೇರಿಕಾದ ಹಿಂದ-ಪ್ರಶಾಂತ ಮಹಾಸಾಗರದ ಸಂರಕ್ಷಣೆಯ ಹೊಣೆಹೊತ್ತಿರುವ ಕಮಾಂಡರ್ ಅಡ್ಮಿರಲ್ ಜಾನ್ ಕ್ರಿಸ್ಟೋಫರ್ ಎಕ್ಕಿಲಿನೊರವರು `ಭಾರತಕ್ಕೆ ತನ್ನ ಉತ್ತರದ ಗಡಿಯ ಸಂರಕ್ಷಣೆಗಾಗಿ ಅಮೇರಿಕವು ಎಲ್ಲ ಸಾಧನ ಸಾಮಗ್ರಿಗಳನ್ನು ಪೂರೈಸುತ್ತಿದೆ, ಅದರೊಂದಿಗೆ ಭಾರತದ ಔದ್ಯೋಗಿಕ ವಿಕಾಸದ ಪ್ರಯತ್ನಗಳಲ್ಲಿಯೂ ಸಹಾಯ ಮಾಡುತ್ತಿದೆ’ ಎಂಬ ಹೇಳಿಕೆ ನೀಡಿದ್ದಾರೆ. ಭಾರತದ ಎದುರು ನಿಜವಾದ ಅರ್ಥದಲ್ಲಿ ಉತ್ತರದ ಗಡಿಯ ಸಂರಕ್ಷಣೆಯ ಸವಾಲಿದೆ ಎಂಬುದನ್ನು ಎಕ್ಕಿಲಿನೊರವರು ಒಪ್ಪಿಕೊಂಡಿದ್ದಾರೆ.

ಎಕ್ಕಿಲಿನೊರವರು ಮಾತನಾಡುತ್ತ `ಅಮೇರಿಕಾದ ಸಿ-೧೩೦ ಎಂಬ ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯುವ ವಿಮಾನದ ಮಹತ್ವಪೂರ್ಣ ಭಾಗವು `ಮೇಡ ಇನ್ ಇಂಡಿಯಾ’ (ಭಾರತದಲ್ಲಿ ನಿರ್ಮಿತ) ಆಗಿದೆ. ಈ ಮೂಲಕ ನಾವು ಭಾರತದಲ್ಲಿ ಸೈನ್ಯ ಕ್ಷೇತ್ರದಲ್ಲಿನ ಉದ್ಯೋಗಗಳನ್ನು ಹೆಚ್ಚಿಸಲು ಭಾರತಕ್ಕೆ ಸಹಾಯ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಅಮೇರಿಕವು ಭಾರತದ ಹೆಗಲ ಮೇಲೆ ಬಂದೂಕನ್ನು ಹೊರಿಸಿ ಚೀನಾವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ಗಮನದಲ್ಲಿಡಿ !