ಗುಜರಾತನಲ್ಲಿ ನಡೆದ ಒಂದು ಗಲಭೆಯ ಪ್ರಕರಣದಲ್ಲಿನ ೬೮ ಹಿಂದೂ ಆರೋಪಿಗಳ ಖುಲಾಸೆ !

ಆರೋಪಿಗಳಲ್ಲಿ ಭಾಜಪದ ನಾಯಕಿ ಮಾಯ ಕೋದನಾನಿ ಮತ್ತು ಬಜರಂಗದಳದ ನಾಯಕ ಬಾಬು ಭಜರಂಗಿ ಇವರ ಸಮಾವೇಶ

ಕರ್ಣಾವತಿ (ಗುಜರಾತ) – ಗುಜರಾತದಲ್ಲಿ ೨೦೦೨ ರಲ್ಲಿ ನಡೆದಿದ್ದ ಗಲಭೆಯ ಸಮಯದಲ್ಲಿ ಕರ್ಣಾವತಿ ಇಲ್ಲಿಯ ನರೋದಾ ಭಾಗದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಇಲ್ಲಿಯ ನ್ಯಾಯಾಲಯದಿಂದ ಎಲ್ಲಾ ೬೮ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಇದರಲ್ಲಿ ಗುಜರಾತ್ ನ ಭಾಜಪದ ನಾಯಕಿ ಮತ್ತು ಮಾಜಿ ಸಚಿವೆ ಮಾಯಾ ಕೋದನಾನಿ ಹಾಗೂ ಬಜರಂಗದಳದ ನಾಯಕ ಬಾಬು ಭಜರಂಗಿ ಇವರ ಸಮಾವೇಶವಿದೆ. ಈ ಗಲಭೆಯಲ್ಲಿ ೧೧ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ೮೬ ಜನರ ವಿರುದ್ಧ ದೂರು ದಾಖಲಿಸಲಾಗಿತ್ತು. ಅದರಲ್ಲಿನ ೧೮ ಜನರು ಸಾವನ್ನಪ್ಪಿದ್ದಾರೆ.

ಸಂಪಾದಕೀಯ ನಿಲುವು

೨೦೦೨ ರ ಪ್ರಕರಣದ ತೀರ್ಪು ೨೧ ವರ್ಷದ ನಂತರ ಬಂದಿರುವುದು ಇದು ನ್ಯಾಯವಲ್ಲ ಅನ್ಯಾಯ !