ಆಂಧ್ರಪ್ರದೇಶ ರಾಜ್ಯದಲ್ಲಿನ ೨೪ ಸಾವಿರ ೬೩೨ ದೇವಸ್ಥಾನದ ನಾಲ್ಕು ಲಕ್ಷ ಎಕರೆ ಭೂಮಿ ವಶಕ್ಕೆ ಪಡೆಯಲಿರುವ ಸರಕಾರ

  • ಭೂಮಿ ಸುರಕ್ಷಿತವಾಗಿರುವುದಕ್ಕಾಗಿ ನಾವು ಅದನ್ನು ವಶಪಡಿಸಿಕೊಳ್ಳುತ್ತಿದ್ದೇವೆ ಎಂಬುದು ಸರಕಾರದ ವಾದ !

  • ಭೂಮಿಯ ಮೌಲ್ಯ ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು !

ವಿಜಯವಾಡ (ಆಂಧ್ರಪ್ರದೇಶ) – ಆಂಧ್ರಪ್ರದೇಶದಲ್ಲಿನ ವೈ ಎಸ್ ಆರ್ ಪಕ್ಷದ ಸರಕಾರವು ಸರಕಾರಿಕರಣ ಆಗಿರುವ ಹಿಂದೂಗಳ ೨೪ ಸಾವಿರದ ೬೩೨ ದೇವಸ್ಥಾನದ ೪ ಲಕ್ಷ ಎಕರೆ ಭೂಮಿಯನ್ನು ವಶಕ್ಕೆ ಪಡೆಯುವುದಕ್ಕಾಗಿ ಗುರುತಿಸಿದೆ. ಈ ಭೂಮಿಯ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದೆ. ಈ ಭೂಮಿ ನಿಯಂತ್ರಣಕ್ಕೆ ಪಡೆಯುವುದರ ಬಗ್ಗೆ ಬಹಳ ಸಮಯದಿಂದ ವಿವಾದ ನಡೆಯುತ್ತಿದೆ.

ಆಂಧ್ರಪ್ರದೇಶದ ಧರ್ಮದಾಯ ಖಾತೆಯ ಸಚಿವ ಕೊಟ್ಟು ಸತ್ಯನಾರಾಯಣ

೧. ಆಂಧ್ರಪ್ರದೇಶದ ಧರ್ಮದಾಯ ಖಾತೆಯ ಸಚಿವ ಕೊಟ್ಟು ಸತ್ಯನಾರಾಯಣ ಇವರು, ಸರಕಾರ ಮಂದಿರ ಮತ್ತು ಅದರ ಸಂಪತ್ತನ್ನು ಸುರಕ್ಷಿತವಾಗಿಡಲು ಬಯಸುತ್ತದೆ. ಅದಕ್ಕಾಗಿ ಸುರಕ್ಷತೆಯ ಯೋಗ್ಯ ಉಪಾಯ ಮಾಡಲಾಗುತ್ತಿದೆ. ದೇವಸ್ಥಾನದ ಭೂಮಿಯ ಮಾಹಿತಿ ಸುರಕ್ಷಿತವಾಗಿ ಇರಿಸುವುದಕ್ಕಾಗಿ ಒಂದು ಸಾಫ್ಟ್ವೇರ್ ಈ ಹಿಂದೆಯೇ ಸಿದ್ಧಪಡಿಸಲಾಗಿದೆ.

೨. ಪ್ರಸ್ತುತ ದೇವಸ್ಥಾನದ ಯಾವ ಭೂಮಿ ಗುರುತಿಸಲಾಗಿದೆ ಅದರ ಹಿನ್ನೆಲೆಯಲ್ಲಿ ವಾದ ವಿವಾದದ ನಿರ್ಣಯ ಮಾಡಲಾಗುವುದು. ಇದರ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿನ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ವಿವಾದಿತ ಭೂಮಿಯ ಬಗ್ಗೆ ಚರ್ಚಿಸಲಾಯಿತು. ಇದರ ಬಗ್ಗೆ ಬೇಗನೆ ಉಪಾಯ ಮಾಡಲಾಗುವುದು.

೩. ರಾಜ್ಯದಲ್ಲಿನ ದೇವಸ್ಥಾನದ ಭೂಮಿ ಸುರಕ್ಷಿತಗೊಳಿಸುವುದಕ್ಕಾಗಿ ಎಲ್ಲಾ ೨೬ ಜಿಲ್ಲೆಗಳಲ್ಲಿನ ಧರ್ಮದಾಯ ಆಯುಕ್ತರ ಜೊತೆಗೆ ಸಮೀಕ್ಷೆ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ದೇವಸ್ಥಾನದ ಭೂಮಿ ರಕ್ಷಣೆಯ ಆದೇಶ ನೀಡಲಾಯಿತು.

(ಸೌಜನ್ಯ : Rashtriya Hindi News)

ಸಂಪಾದಕೀಯ ನಿಲುವು

ದೇಶದಲ್ಲಿನ ಒಂದೇ ಒಂದು ಚರ್ಚ್ ಅಥವಾ ಮಸೀದಿಯ ಸರಕಾರಿಕರಣ ಆಗಿಲ್ಲ ಅಥವಾ ಅದರ ಸ್ವಾಮ್ಯತ್ವದಲ್ಲಿ ಇರುವ ಭೂಮಿ ಸರಕಾರ ನಿಯಂತ್ರಣಕ್ಕೆ ಪಡೆಯುವ ಯೋಚನೆ ಕೂಡ ಮಾಡುವುದಿಲ್ಲ ; ಆದರೆ ದೇಶದಲ್ಲಿನ ಹಿಂದೂಗಳ ಲಕ್ಷಾಂತರ ದೇವಸ್ಥಾನಗಳು ಇಲ್ಲಿಯವರೆಗೆ ಸರಕಾರ ವಶಕ್ಕೆ ಪಡೆದು ಅದರ ಸಂಪತ್ತನ್ನು ತನಗೆ ಹೇಗೆ ಬೇಕು ಹಾಗೆ ಉಪಯೋಗಿಸುತ್ತಿದೆ. ಈಗ ಭೂಮಿ ಕೂಡ ವಶಕ್ಕೆ ಪಡೆದುಕೊಂಡು ಅದನ್ನು ಕೂಡ ಹೇಗೆ ಬೇಕು ಹಾಗೆ ಉಪಯೋಗಿಸುವ ಸಾಧ್ಯತೆ ನಿರಾಕರಿಸಲಾಗುವುದಿಲ್ಲ. ಈ ಪರಿಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ.

ಹಿಂದಿನ ಕಾಲದಲ್ಲಿ ಆಡಳಿತಕಾರರು ದೇವಸ್ಥಾನಗಳಿಗೆ ಹಣದ ಅರ್ಪಣೆ ನೀಡುತ್ತಿದ್ದರು ಆದರೆ ಈಗಿನ ಆಡಳಿತಗಾರರು ದೇವಸ್ಥಾನದ ಹಣ ಲೂಟಿ ಮಾಡುತ್ತಿದ್ದಾರೆ ಮತ್ತು ಹಿಂದೂ ಭಕ್ತರು ಅದನ್ನು ನಿಷ್ಕ್ರಿಯವಾಗಿ ನೋಡುತ್ತಿದ್ದಾರೆ ಇದು ಹಿಂದೂಗಳಿಗೆ ನಾಚಿಕೆಗೇಡು !