ಲಾರಿ ತಪಾಸಣೆ ಮಾಡಿದ್ದರಿಂದ ಸಿಟ್ಟಿಗೆದ್ದು ಹಲ್ಲೆ : ೪೪ ಜನರ ಬಂಧನ
ಪಾಟಲಿಪುತ್ರ ( ಬಿಹಾರ ) – ಇಲ್ಲಿಯ ಮರಳು ಮಾಫಿಯಾ ಮತ್ತು ಅದರ ದಳ್ಳಾಳಿಗಳು ಏಪ್ರಿಲ್ ೧೭ ರಂದು ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಗಣಿ ಅಧಿಕಾರಿ ಹಾಗೂ ಮಹಿಳಾ ಗಣಿ ನಿರೀಕ್ಷಕ ಇವರನ್ನು ಬೆನ್ನಟ್ಟಲಾಯಿತು. ಆದ್ದರಿಂದ ಅವರು ಓಡಿ ಹೋಗುವಾಗ ಮಹಿಳಾ ನಿರೀಕ್ಷಕಿಯನ್ನು ಮಾಫಿಯಾದವರು ಹಿಡಿದು ಅಮಾನವಿಯವಾಗಿ ಥಳಿಸಿದ್ದಾರೆ. ಇದರಲ್ಲಿ ೨ ಅಧಿಕಾರಿಗಳು ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ೪೪ ಜನರನ್ನು ಬಂಧಿಸಿದ್ದಾರೆ. ಈ ಥಳಿತದ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
ಪರೆವ ಗ್ರಾಮದಲ್ಲಿ ಏಪ್ರಿಲ್ ೧೭ ರಂದು ಮಧ್ಯಾಹ್ನ ೨ ಗಂಟೆಯ ಸುಮಾರು ಈ ಘಟನೆ ನಡೆದಿದೆ. ಗಣಿ ಇಲಾಖೆಯ ತಂಡಕ್ಕೆ ಪ್ರಮಾಣಕ್ಕಿಂತ ಹೆಚ್ಚಿನ ಮರಳು ಸಾಗಿಸಲಾಗುತ್ತಿರುವ ಮಾಹಿತಿ ದೊರೆತನಂತರ ಅವರು ಲಾರಿಯ ತಪಾಸಣೆ ನಡೆಸಲು ತಲುಪಿದ್ದರು. ಆಗ ಲಾರಿ ಚಾಲಕರ ಜೊತೆ ವಿವಾದ ನಡೆಯಿತು ಮತ್ತು ಆ ಚಾಲಕರು ಅವರ ಮೇಲೆ ಕಲ್ಲುತೂರಾಟ ನಡೆಸಿದರು. ಆದ್ದರಿಂದ ತಂಡದಲ್ಲಿನ ಅಧಿಕಾರಿಗಳು ಓಡಿ ಹೋಗುವಾಗ ಅವರನ್ನು ಬೆಂಬತ್ತಿ ಹಿಡಿದು ಥಳಿಸಲಾಯಿತು. ಈ ಸಮಯದಲ್ಲಿ ೧೫೦ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು; ಆದರೆ ಈ ದಾಳಿಯ ನಂತರ ಮಾಫಿಯಾಗಳು ಅವರನ್ನು ಬಿಡಿಸಿಕೊಂಡರು.
ಸಂಪಾದಕೀಯ ನಿಲುವು
ಬಿಹಾರ ಮತ್ತೊಮ್ಮೆ ಜಂಗಲ ರಾಜ್ ದಿಕ್ಕಿನತ್ತ ಹೋಗುತ್ತಿರುವುದು ಇದು ಒಂದು ನಿದರ್ಶನ ! ಈ ಪರಿಸ್ಥಿತಿ ಅಲ್ಲಿಯ ಸರಕಾರ ಮತ್ತು ಪೊಲೀಸರಿಗೆ ನಾಚಿಕೆಗೇಡು ! |