ಐತಿಹಾಸಿಕ ವಜ್ರೇಶ್ವರಿ ದೇವಸ್ಥಾನದ ಜನಸಂಪರ್ಕ ಅಧಿಕಾರಿ ಹುದ್ದೆಗೆ ಕ್ರೈಸ್ತ ವ್ಯಕ್ತಿಯ ನೇಮಕಾತಿ ಪ್ರಕರಣ
ಠಾಣೆ – ಹಿಂದೂಗಳ ಪ್ರಾಚೀನ ಪರಂಪರೆ ಹೊಂದಿರುವ ಭಿವಂಡಿಯ ಐತಿಹಾಸಿಕ ವಜ್ರೇಶ್ವರಿ ದೇವಸ್ಥಾನದ ಜನಸಂಪರ್ಕ ಅಧಿಕಾರಿ ಹುದ್ದೆಗೆ ಕ್ರೈಸ್ತ ವ್ಯಕ್ತಿ ಫ್ರಾನ್ಸಿಸ್ ಜೋಸೆಫ್ ಲೆಮಾಸ್ ಇವರನ್ನು ನೇಮಿಸಿದ್ದರಿಂದ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ವಿಷಯದಲ್ಲಿ ಶಂಭುದುರ್ಗ ಪ್ರತಿಷ್ಠಾನದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಹಿಂದುತ್ವನಿಷ್ಠರು ವ್ಯಕ್ತಪಡಿಸಿರುವ ತೀವ್ರ ವಿರೋಧದಿಮದಾಗಿ ದೇವಸ್ಥಾನದ ಅಧ್ಯಕ್ಷರಾದ ನ್ಯಾಯವಾದಿ ಪಾಟಕರ ಇವರು ಫ್ರಾನ್ಸಿಸ್ ಇವರನ್ನು ಹುದ್ದೆಯಿಂದ ಕೆಳಗಿಳಿಸುವುದಾಗಿ ಭರವಸೆ ನೀಡಿದ್ದರು; ಆದರೆ ಅದಕ್ಕಿಂತ ಮೊದಲೇ ಫ್ರಾನ್ಸಿಸ್ ತಾವಾಗಿಯೇ ಹುದ್ದೆಗೆ ತ್ಯಾಗಪತ್ರವನ್ನು ನೀಡಿದ್ದರು.
1. ಶಂಭುದುರ್ಗ ಪ್ರತಿಷ್ಠಾನದ ಕಾರ್ಯಕರ್ತರು ಎಪ್ರಿಲ್ 16 ರಂದು ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿ ಫ್ರಾನ್ಸಿಸ್ ಇವರ ನೇಮಕಾತಿಯನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ತದನಂತರ ಫ್ರಾನ್ಸಿಸ್ ಇವರು ದೇವಸ್ಥಾನದ ಅಧ್ಯಕ್ಷರಿಗೆ ತಮ್ಮ ತ್ಯಾಗಪತ್ರವನ್ನು ಸಲ್ಲಿಸಿದರು.
2. ಫ್ರಾನ್ಸಿಸ್ ಜೊಸೆಫ್ ಲೆಮಾಸ ಇವರ ನಿರ್ಣಯವನ್ನು ಶಂಭುದುರ್ಗ ಪ್ರತಿಷ್ಠಾನ ಸ್ವಾಗತಿಸಿತು.
3. ಠಾಣೆ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿಗಳು ಆದಿವಾಸಿ ವಸತಿಗಳಲ್ಲಿ ಪ್ರಾರ್ಥನಾ ಸ್ಥಳಗಳನ್ನು ನಿರ್ಮಾಣ ಮಾಡಿ ಜನರೊಂದಿಗೆ ಸಂಪರ್ಕವನ್ನು ಹೆಚ್ಚಿಸಿದ್ದಾರೆ. ಅವರ ಸಂಪರ್ಕಕ್ಕೆ ಬರುವ ಹಿಂದೂ ಸಹೋದರರು ಕಾಲಾಂತರದಲ್ಲಿ ಹಿಂದೂ ಧರ್ಮವನ್ನು ನಂಬುವುದಿಲ್ಲ, ಇನ್ನೂ ಕೆಲವು ಜನರು ಹಿಂದೂ ಧರ್ಮವನ್ನು ತ್ಯಜಿಸುತ್ತಿರುವುದು ಕಂಡು ಬಂದಿದೆ.
4. `ಕ್ರೈಸ್ತ ಮಿಷನರಿಗಳಿಂದಾಗುವ ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಪ್ರಯತ್ನಿಸುತ್ತಿವೆ. ಹೀಗಿರುವಾಗ ವಜ್ರೇಶ್ವರಿ ದೇವಸ್ಥಾನದ ವೀಕ್ಷಕ ಹುದ್ದೆಗೆ ಕ್ರೈಸ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಹಿಂದೂ ಧರ್ಮದ ಮೇಲೆ ಮತ್ತೊಂದು ಸಂಕಟವನ್ನು ಎಳೆದುಕೊಳ್ಳುವಂತಹದ್ದಾಗಿದೆ’, ಎಂದು ಶಂಭುದುರ್ಗ ಪ್ರತಿಷ್ಠಾನವು ವಜ್ರೇಶ್ವರಿ ದೇವಸ್ಥಾನಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
5. `ಹಿಂದೂ ರಾಷ್ಟ್ರ ಸೇನೆ’ ಯ ಕಾರ್ಯಕರ್ತರು ಕೂಡ ಈ ಪ್ರಕರಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ತದನಂತರ ಪೊಲೀಸರು ಹಿಂದುತ್ವನಿಷ್ಠರ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿದ್ದರು. ಫ್ರಾನ್ಸಿಸ್ ಜೊಸೆಫ್ ಲೆಮಾಸ್ ಇವರ ತ್ಯಾಗಪತ್ರದ ಕಾರಣದಿಂದ ಈ ವಿವಾದ ಈಗ ಮುಕ್ತಾಯಗೊಂಡಿದೆ.
ಸಂಪಾದಕೀಯ ನಿಲುವುಧರ್ಮಹಾನಿಯ ವಿರುದ್ಧ ಪಟ್ಟು ಹಿಡಿದು ಹೋರಾಟ ನಡೆಸುವ ಶಂಭುದುರ್ಗ ಪ್ರತಿಷ್ಠಾನದ ಆದರ್ಶವನ್ನು ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಪಡೆದುಕೊಳ್ಳಬೇಕು ! |