ಶ್ರೀ. ಜೈತೀರ್ಥ ಆಚಾರ್ಯ ಇವರು ಉಡುಪಿಯಲ್ಲಿನ ಜ್ಯೋತಿಷಿ ಆಗಿದ್ದಾರೆ. ಅವರು ರಾಘವೇಂದ್ರ ಸ್ವಾಮಿ ಉಡುಪಿ ಮಠದ ವ್ಯವಸ್ಥಾಪಕರಾಗಿದ್ದಾರೆ. ೧೯೯೬ ರಿಂದ ಗುರುಗಳ ಮಾರ್ಗದರ್ಶನದಲ್ಲಿ ಅವರು ಜ್ಯೋತಿಷ್ಯ ವಿಷಯದ ಅಧ್ಯಯನ ಮಾಡುತ್ತಿದ್ದಾರೆ. ಅವರು ಮುಂಬರುವ ಭೀಕರ ಕಾಲದ ಬಗ್ಗೆ ನುಡಿದಿರುವ ಭವಿಷ್ಯ ಮುಂದೆ ನೀಡುತ್ತಿದ್ದೇವೆ.
೧. ಏಪ್ರಿಲ್ ೭ ರಿಂದ ಆಗಸ್ಟ್ ೩೦, ೨೦೨೩ ಈ ಕಾಲಾವಧಿಯಲ್ಲಿ ಗ್ರಹಗಳ ಸ್ಥಿತಿ ಮತ್ತು ವಿವಿಧ ದೇಶಗಳ ಮೇಲೆ ಅದರ ಸಂಭವಿಸಬಹುದಾದ ಪರಿಣಾಮ
೧ ಅ. ಗ್ರಹಗಳ ಸ್ಥಿತಿ : ಅಶ್ವಿನಿ ನಕ್ಷತ್ರದಲ್ಲಿ ರವಿ, ಚಂದ್ರ, ಗುರು ಮತ್ತು ರಾಹು ಹಾಗೂ ಸ್ವಾತಿ ನಕ್ಷತ್ರದಲ್ಲಿ ಕೇತು ಮತ್ತು ಭರಣಿ ನಕ್ಷತ್ರದಲ್ಲಿ ಬುಧ ಇರುವನು.
೧ ಆ. ಗ್ರಹಗಳ ಸ್ಥಿತಿಯ ಮೇಲಿನ ಪರಿಣಾಮ : ಇದರಿಂದ ಮುಂದಿನ ಪ್ರದೇಶಗಳಲ್ಲಿ ಭೂಕಂಪ, ಜೋರಾದ ಗಾಳಿ ಬೀಸುವುದು, ಜೋರಾದ ಬಿರುಗಾಳಿಗಳು ಮತ್ತು ವಿಷಪೂರಿತ ರೋಗಾಣುಗಳ (ವೈರಸ್) ಹರಡುವಿಕೆಯಿಂದ ಜನರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಆಗುವುದು.
೧ ಇ. ಗ್ರಹಗಳ ಸ್ಥಿತಿಯ ವಿಪರೀತ ಪರಿಣಾಮ ಆಗುವ ಸ್ಥಳಗಳ ಹೆಸರು : ಇಂಡೋನೇಷ್ಯಾ, ಫಿಲಿಪೈನ್ಸ್, ಮಲೇಷ್ಯಾ, ಥೈಲ್ಯಾಂಡ್, ಸೋಲೋಮನ್ ಐರ್ಲ್ಯಾಂಡ್, ನ್ಯೂ ಪಪುವಾ ಗಿನೀಯ (ಒಂದು ದೇಶದ ಹೆಸರು), ಕಂಬೋಡಿಯ, ವ್ಹಿಯೇತನಾಮ, ಶ್ರೀಲಂಕಾ, ದಕ್ಷಿಣ ಭಾರತದ ಸಮುದ್ರ ತೀರ, ತಮಿಳುನಾಡು, ಆಂಧ್ರ ಪ್ರದೇಶ, ಓರಿಸ್ಸಾ, ಹಿಂದೂ ಮಹಾಸಾಗರದ ಸಮುದ್ರ ತೀರ, ಬೇ ಆಫ್ ಬಂಗಾಲ ಹಾಗೂ ಅಟಲಾಂಟಿಕ್ ಓಷನ್, ಪೆಸಿಫಿಕ್ ಓಷನ್, ವೇಸ್ಟ್ ಆಫ್ರಿಕಾ, ಬ್ರಾಸಿಲ್, ಬೋಲಿವ್ಹಿಯಾ, ಪೇರು, ಇಕ್ವೇಡೋರ, ಕೊಲಂಬಿಯಾ, ವೆನಿಝುಯೇಲಾ, ಗಯಾನಾ, ಸುರಿನೇಮ ಮತ್ತು ಪನಾಮ ಬಳಿಯ ದ್ವೀಪ.
೧ ಈ. ರಾಶಿಗಳ ಮೇಲೆ ಪರಿಣಾಮ : ಗ್ರಹಗಳ ಪ್ರಭಾವ ಧನು ಮತ್ತು ಮಿಥುನ ಈ ರಾಶಿಗಳ ಮೇಲೆ ಆಗಲಿದೆ. ಆದ್ದರಿಂದ ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗ ಆಗಬಹುದು.
೧. ಉ. ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗ ಆಗುವುದು : ರಷ್ಯಾ ಪೆಸಿಫಿಕ್ ಓಷನ್ ಮತ್ತು ಅಟ್ಲಾಂಟಿಕ ಓಷನ್ ಈ ಸ್ಥಳಗಳಲ್ಲಿ ಯುದ್ಧದ ಸಿದ್ಧತೆ ಮಾಡಿದೆ. ರಷ್ಯಾ ಸಮುದ್ರದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗ ಮಾಡುವ ಸಾಧ್ಯತೆ ಇದೆ.
೨. ೨೦೨೩ ರಲ್ಲಿನ ಮೊದಲನೆಯ ಮತ್ತು ಎರಡನೆಯ ಸೂರ್ಯ ಗ್ರಹಣದ ವಿವಿಧ ದೇಶದ ಮೇಲಿನ ಪರಿಣಾಮಗಳು
೨ ಅ. ಮೊದಲನೆಯ ಸೂರ್ಯ ಗ್ರಹಣ : ಏಪ್ರಿಲ್ ೨೦, ೨೦೨೩ ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಇದೆ. ಗ್ರಹಣದ ಫಲ ಮುಂದಿನ ಸೂರ್ಯ ಗ್ರಹಣದ ಎಂದರೆ ಅಕ್ಟೋಬರ್ ೧೪, ೨೦೨೩ ವರೆಗೆ ಇರಲಿದೆ.
೨ ಅ ೧. ಸೂರ್ಯ ಗ್ರಹಣದ ವಿಪರೀತ ಪರಿಣಾಮ ಆಗುವ ಸ್ಥಳಗಳ ಹೆಸರು : ಹಿಂದೂ ಮಹಾಸಾಗರ, ದಕ್ಷಿಣ ಅಟ್ಲಾಂಟ ಸಾಗರ, ಪೂರ್ವ ಫೆಸಿಫಿಕ್ ಸಾಗರ, ಆಸ್ಟ್ರೇಲಿಯಾ, ಆಸ್ಟ್ರೇಲಿಯಾದ ಹತ್ತಿರದ ದ್ವೀಪ, ಇಂಡೋನೇಷ್ಯಾ, ಮಲೇಶಿಯಾ, ಮ್ಯಾನ್ಮಾರ್, ಬಂಗಾಲ ಕೊಲ್ಲಿ, ಥೈಲ್ಯಾಂಡ್, ಕಾಂಬೋಡಿಯ, ಈಶಾನ್ಯ ಭಾರತ, ದಕ್ಷಿಣ ಚೀನಾ ಪ್ರಾಂತ.
೨ ಅ ೨. ಸೂರ್ಯ ಗ್ರಹಣದ ಈ ಮೇಲಿನ ಸ್ಥಳಗಳಲ್ಲಿ ಆಗುವ ವಿಪರೀತ ಪರಿಣಾಮ
ಅ. ಮೇಲಿನ ಸ್ಥಳಗಳಲ್ಲಿ ತೀವ್ರ, ವಿಶಾಲ ಮತ್ತು ರೌದ್ರ ರೂಪದಲ್ಲಿ ಚಂಡಮಾರುತದ ಸಾಧ್ಯತೆ ಇದೆ. ಇದರಿಂದ ಜನರಿಗೆ ಬಹಳ ತೊಂದರೆ ಸಹಿಸ ಬೇಕಾಗುವುದು.
ಆ. ಸಮುದ್ರದ ಎತ್ತರದ ಅಲೆಗಳಿಂದ ಭೂಮಿಯಲ್ಲಿ ಬಿರುಕು ಬಿಡುವುದು ಮತ್ತು ಗುಡ್ಡಗಳು ಕೆಳಗೆ ಕುಸಿಯುವುದು, ಇದರಿಂದ ಜೀವಹಾನಿ ಆಗುವ ಸಾಧ್ಯತೆ ಇದೆ.
ಇ. ಸಂಧಿವಾತದ ಅಪಾಯವು ಹೆಚ್ಚಾಗಬಹುದು.
ಈ. ಅಣುಬಾಂಬ್ ಉಪಯೋಗ ಮಾಡುವ ಸಾಧ್ಯತೆ
೨ ಆ. ಎರಡನೆಯ ಸೂರ್ಯ ಗ್ರಹಣ : ಅಕ್ಟೋಬರ್ ೧೪, ೨೦೨೩ ರಂದು ಎರಡನೆಯ ಸೂರ್ಯ ಗ್ರಹಣ ಇದೆ.
೨ ಆ ೧. ಎರಡನೆಯ ಸೂರ್ಯ ಗ್ರಹಣದ ವಿಪರೀತ ಪರಿಣಾಮ ಆಗುವ ಪ್ರದೇಶ : ಮುಂದಿನ ಪ್ರದೇಶಗಳಲ್ಲಿ ಹಾನಿ ಆಗುವುದು. ಕೆರೆಬಿಯನ್ ದ್ವೀಪ ಸಮೂಹ, ಪೂರ್ವ ಅಟ್ಲಾಂಟಿಕ ಸಾಗರ, ಸೆಂಟ್ ಮಾರ್ಟಿನ್, ದಕ್ಷಿಣ ಪೆಸಿಫಿಕ್ ಮತ್ತು ಅದರ ಹತ್ತಿರದ ಸೇಂಟ್ ಬರ್ತಲೇಮಿ ಐಸ್ ಲ್ಯಾಂಡ್, ಮೆಕ್ಸಿಕೋ, ಬ್ರೆಜಿಲ್ ಮತ್ತು ವೆನಿಝುಯೇಲಾ.
ಜ್ಯೋತಿಷಿ ಶ್ರೀ. ಜಯತೀರ್ಥ, ಉಡುಪಿ, ಕರ್ನಾಟಕ. (೭.೪.೨೦೨೩)