|
ಬೆಂಗಳೂರು – ರಾಜ್ಯದಲ್ಲಿ ಖ್ಯಾತ ಹಿಂದುತ್ವನಿಷ್ಠ ನ್ಯಾಯವಾದಿ ಹಾಗೂ ಕಮ್ಯುನಿಸ್ಟ್ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಲುಕಿಸಿರುವ ಹಿಂದುತ್ವನಿಷ್ಠರ ಪರವಾಗಿ ಹೋರಾಟ ನಡೆಸುತ್ತಿರುವ ನ್ಯಾಯವಾದಿ ಪಿ. ಕೃಷ್ಣಮೂರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. 12 ರ ರಾತ್ರಿ ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುತ್ತಿದ್ದಾಗ ಅಬ್ಬಿಯಾಲ ಬಳಿ ಘಟನೆ ನಡೆದಿದೆ. ಅವರು ಕಾರಿನಿಂದ ಪ್ರಯಾಣಿಸುತ್ತಿದ್ದಾಗ ದಾಳಿಕೋರರು ಹಾರಿಸಿದ ಬುಲೆಟ್ ಅವರ ಕಾರಿಗೆ ತಗುಲಿತು. ಅದೃಷ್ಟವಶಾತ್ ಅವರಿಗೆ ಏನೂ ಆಗಲಿಲ್ಲ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಇವರು ಸ್ಥಳಕ್ಕೆ ಭೇಟಿ ನೀಡಿದರು. ಕೊಡಗು ಪೊಲೀಸರು ತನಿಖೆ ಆರಂಭಿಸಿದ್ದಾರೆ. ನ್ಯಾಯವಾದಿ ಪಿ. ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷರೂ ಆಗಿದ್ದಾರೆ.
ದೇವರ ಕೃಪೆಯಿಂದ ಬದುಕಿದೆ ! – ಪಿ. ಕೃಷ್ಣಮೂರ್ತಿ
ಕೊಡಗು ಪೊಲೀಸರು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ವಾಹನಕ್ಕೆ ಹಾನಿಯಾಗಿದೆ; ಆದರೆ ದೇವರ ಕೃಪೆಯಿಂದ ನಾನು ಸ್ವಲ್ಪದರಲ್ಲಿ ಪಾರಾದೆ.
(ಸೌಜನ್ಯ : VIJAYAVANI)
ಈ ಘಟನೆಗೆ ಮಡಿಕೇರಿ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗುಂಡುಹಾರಿಸಿದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ವಕೀಲರು ಕಾರ್ಯಕಲಾಪವನ್ನು ನಿಲ್ಲಿಸಿ ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿದರು. ಬಳಿಕ ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ದಾಳಿಯ ಹಿಂದೆ ಪಿ.ಎಫ್.ಐ ಅಥವಾ ನಕ್ಸಲ್ ವಾದಿಗಳಿದ್ದಾರಾ ಎಂದು ಪತ್ತೆ ಮಾಡಿ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ರಾಜ್ಯದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಲುಕಿಸಲಾಗಿರುವ ಹಿಂದುತ್ವನಿಷ್ಠರ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದುತ್ವನಿಷ್ಠ ನ್ಯಾಯವಾದಿಗಳ ಮೇಲೆ ದಾಳಿಯಾಗುವುದು, ಅತ್ಯಂತ ಗಂಭೀರ ಹಾಗೂ ಸಂದೇಹಾಸ್ಪದವಾಗಿದೆ. ಗೌರಿ ಲಂಕೇಶ್ ಅವರು ನಕ್ಸಲೀಯರ ಸಂಪರ್ಕದಲ್ಲಿದ್ದರು ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಆಕೆಯ ಹತ್ಯೆಯ ನಂತರ ನಕ್ಸಲೀಯರೂ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ದಾಳಿ ಎಂದರೆ ‘ಈ ಪ್ರಕರಣದಲ್ಲಿ ವಕೀಲರ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆದಿದೆಯೇ ಎಂಬ ಶಂಕೆ ಮೂಡುತ್ತದೆ. ದಾಳಿಯಲ್ಲಿ ನ್ಯಾಯವಾದಿ ಕೃಷ್ಣಮೂರ್ತಿ ಇವರು ಬದುಕುಳಿದಿದ್ದರೂ ಅವರ ಮೇಲೆ ಮತ್ತೊಮ್ಮೆ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಅವರಿಗೆ ಸಶಸ್ತ್ರ ಪೊಲೀಸ್ ರಕ್ಷಣೆಯ ಅಗತ್ಯವಿದೆ. ಈ ಹಿಂದೆಯೂ ನ್ಯಾಯವಾದಿ ಕೃಷ್ಣಮೂರ್ತಿ ಇವರಿಗೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‍ಐ) ದಂತಹ ಜಿಹಾದಿ ಸಂಘಟನೆಯಿಂದ ಜೀವ ಬೆದರಿಕೆ ನೀಡಲಾಗಿತ್ತು. ಆದ್ದರಿಂದ ಈ ದಾಳಿಯ ಹಿಂದೆ ಪಿ.ಎಫ್.ಐ. ನಂತಹ ಜಿಹಾದಿ ಸಂಘಟನೆ ಅಥವಾ ಗೌರಿ ಲಂಕೇಶನ ಬೆಂಬಲಿಗರಾದ ನಗರ ನಕ್ಸಲರು ಇದ್ದಾರೆಯೇ, ಎಂಬುದರ ತನಿಖೆ ನಡೆಸುವುದು ಅಗತ್ಯವಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಪತ್ರಿಕಾ ಪ್ರಕಟಣೆಯನ್ನು ಜಾರಿ ಮಾಡಿ ಒತ್ತಾಯಿಸಿದ್ದಾರೆ.
Attempt on the life of @VHPDigital Madikeri Dist. President & leading advocate in the #Gauri_Lankesh case Shri P. #Krishnamurthy by firing gunshots by miscreants in Madikeri last night.
We strongly condemn the incident & Demand arrest of culprits @alokkumar6994 @DgpKarnataka pic.twitter.com/R6WXjSEO52
— 🚩Mohan gowda🇮🇳 (@Mohan_HJS) April 13, 2023
ಹಿಂದೂ ಜನಜಾಗೃತಿ ಸಮಿತಿಯು ಈ ದಾಳಿಯನ್ನು ಬಲವಾಗಿ ಖಂಡಿಸಿದೆ. ‘ನ್ಯಾಯವಾದಿ ಕೃಷ್ಣಮೂರ್ತಿ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಅವರು ಹಿಂದುತ್ವದ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ. ಆದ್ದರಿಂದ ಈ ಕಾರಣದಿಂದಲೂ ಅವರ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆ ಹೆಚ್ಚಿದೆ. ಈ ದಾಳಿಯ ‘ಮಾಸ್ಟರ್ ಮೈಂಡ್’ನ ಪತ್ತೆ ಮಾಡಬೇಕೆಂದು ನಾವು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಅವರಿಗೂ ಈ ಮೇಲಿನ ಬೇಡಿಕೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಇದು ನಿಖರವಾಗಿ ಯಾರ ಸೋಲು ? – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ಭಯೋತ್ಪಾದಕ ಅಜಮಲ್ ಕಸಾಬನ ಪರ ಮೊಕದ್ದಮೆ ನಡೆಸುವ ನ್ಯಾಯವಾದಿ ಇಂದಿಗೂ ಕೂಡ ಶಾಂತಿಯುತ ಜೀವನ ನಡೆಸುತ್ತಿದ್ದಾರೆ; ಆದರೆ ಕಮಿನಿಸ್ಟ್ ಗೌರಿ ಲಂಕೇಶ್ ಇವರ ಹತ್ಯೆಯ ಪ್ರಕರಣದಲ್ಲಿ ಸಿಲುಕಿಸಿರುವ ಹಿಂದೂತ್ವನಿಷ್ಠರ ಪರ ಮೊಕದ್ದಮೆ ನಡೆಸುವ ನ್ಯಾಯವಾದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇದು ನಿಖರವಾಗಿ ಯಾರ ಸೋಲು ? ಸಂವಿಧಾನ ಯಾರ ರಕ್ಷಣೆ ಮಾಡುತ್ತದೆ ? ಹಿಂದೂ ವಿಧಿಜ್ಞ ಪರಿಷತ್ತವು ಈ ಪ್ರಕರಣದಲ್ಲಿ ಗಾಂಭೀರವಾಗಿ ಗಮನಹರಿಸಿದೆ ಎಂದು ಹೇಳಿದರು. |
ಸಂಪಾದಕೀಯ ನಿಲುವುಗೌರಿ ಲಂಕೇಶ್ ಹತ್ಯೆಯ ನಂತರ ‘ಎಲ್ಲ ಪ್ರಗತಿಪರರು ಅಪಾಯದಲ್ಲಿದ್ದಾರೆ’ ಎಂದು ಕೂಗುವ ಪ್ರಗತಿ(ಅಧೋ)ಪರರು, ನಕ್ಸಲ್ ಪ್ರೇಮಿಗಳು, ಜಾತ್ಯತೀತವಾದಿಗಳು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ರಾಜ್ಯದಲ್ಲಿ ಹಲವಾರು ಹಿಂದುತ್ವನಿಷ್ಠರ ಹತ್ಯೆಗಳು ನಡೆದಿವೆ. ಜಿಹಾದಿಗಳು ಮತ್ತು ನಕ್ಸಲೀಯರಿಂದ ಹಿಂದುತ್ವನಿಷ್ಠರಿಗೆ ಅಪಾಯ ಇದೆ. ನ್ಯಾಯವಾದಿ ಕೃಷ್ಣಮೂರ್ತಿ ಮೇಲಿನ ಹಲ್ಲೆ ಇದನ್ನೇ ಎತ್ತಿ ತೋರಿಸುತ್ತದೆ ! ಜಿಹಾದಿಗಳು, ಮತಾಂಧರು ಮತ್ತು ನಕ್ಸಲೀಯರ ಬೇರುಗಳನ್ನು ನಾಶಮಾಡಲು ಸರಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ ? ಹಿಂದುತ್ವನಿಷ್ಠ ನ್ಯಾಯವಾದಿಗಳ ಹಿಂದೆ ಧೃಡವಾಗಿ ನಿಲ್ಲುವ ವಕೀಲರೇ ಹಿಂದೂ ಧರ್ಮದ ಶಕ್ತಿ ! |