ವಾಣಿಜ್ಯ ಸಚಿವಾಲಯದಿಂದ ಹಲಾಲ್ ಪ್ರಮಾಣೀಕೃತ ಉತ್ಪಾದನೆಗಳಿಗೆ ಮಾರ್ಗಸೂಚಿ ಜಾರಿ !

ನವ ದೆಹಲಿ – ಕೇಂದ್ರ ವಾಣಿಜ್ಯ ಸಚಿವಾಲಯವು ಹಲಾಲ್ ಪ್ರಮಾಣೀಕೃತಗೊಂಡ ಉತ್ಪಾದನೆಗಳನ್ನು ರಫ್ತು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಅದಕ್ಕನುಸಾರವಾಗಿ ಹಲಾಲ್ ಪ್ರಮಾಣೀಕೃತಗೊಂಡ ಉತ್ಪಾದನೆಗಳು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಯಾವುದೇ ಪ್ರಮಾಣೀಕೃತ ಅಂಗಸಂಸ್ಥೆಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.