ಹನುಮಾನ ಜಯಂತಿಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುಂಜಾಗರೂಕತೆಯ ಕ್ರಮವಾಗಿ ಬಂಧನ !
ಭಾಗ್ಯನಗರ (ತೇಲಂಗಾಣಾ) – ಇಲ್ಲಿಯ ಗೋಶಾಮಹಲ ಚುನಾವಣಾಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹರನ್ನು ಪೊಲೀಸರು ಎಪ್ರಿಲ್ 6 ರಂದು ಹನುಮಾನ ಜಯಂತಿಯ ಹಿನ್ನೆಲೆಯಲ್ಲಿ ಮುಂಜಾಗರೂಕತೆಯ ಕ್ರಮವೆಂದು ಬಂಧಿಸಿದ್ದಾರೆ. ಅವರನ್ನು ದಿನವಿಡೀ ಪೊಲೀಸ ಠಾಣೆಯಲ್ಲಿ ಕೂರಿಸಿ ಸಾಯಂಕಾಲ ಬಿಡುಗಡೆ ಮಾಡಲಾಯಿತು. ಹನುಮಾನ ಜಯಂತಿಯ ನಿಮಿತ್ತ ನಡೆಸುವ ಹಿಂದೂ ಸಂಘಟನೆಯ ಮೆರವಣಿಗೆಯಲ್ಲಿ ಟಿ. ರಾಜಾ ಸಿಂಹರು ಭಾಗವಹಿಸುವವರಿದ್ದರು. ಈ ಮೆರವಣಿಗೆಯಲ್ಲಿ ಅವರು ಏನಾದರೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಬಹುದು ಎನ್ನುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು.
Arrested by Telangana Police on the instruction of BRS Govt just before joining #HanumanJanmotsav rally in my #Goshamahal Constituency.
Now Hindus can’t even take part in the rally also in Telangana? pic.twitter.com/Tdw5HhjrcW
— Raja Singh (@TigerRajaSingh) April 6, 2023
1. ಬಂಧನದ ವಿಷಯದಲ್ಲಿ ಟ್ವೀಟ್ ಮಾಡಿ ಟಿ. ರಾಜಾ ಸಿಂಹ ಇವರು, ನಾನು ಪ್ರತಿವರ್ಷದಂತೆ ನನ್ನ ಚುನಾವಣಾಕ್ಷೇತ್ರದಿಂದ ಶ್ರೀರಾಮ ದೇವಸ್ಥಾನ ಗೌಲಿಗುಡಾ ಚಮನ ಇಲ್ಲಿ ನಡೆಯುವ ಹನುಮಾನ ಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸುವವನಿದ್ದೆನು; ಆದರೆ ಅದಕ್ಕೂ ಮೊದಲೇ ಪೊಲೀಸರು ನನ್ನನ್ನು ಬಂಧಿಸಿದರು. ನನ್ನ ಚುನಾವಣಾಕ್ಷೇತ್ರದ ಭಗವಂತ ಹನುಮಂತನ ಮೆರವಣೆಗೆಯಲ್ಲಿ ನಾನು ಏಕೆ ಭಾಗವಹಿಸಬಾರದು ? ಎಂದು ನಾನು ಒಬ್ಬ ಹಿಂದೂ ಆಗಿದ್ದರಿಂದ ಸರಕಾರ ಮತ್ತು ಪೊಲೀಸರನ್ನು ಕೇಳುತ್ತಿದ್ದೇನೆ.
Hyderabad Police arrested me before I could join the Hanuman Jayanti procession in Goshamahal: T Raja Singh
https://t.co/SL99RDmKFu— OpIndia.com (@OpIndia_com) April 6, 2023
2. ಶ್ರೀರಾಮನವಮಿಯ ಸಂದರ್ಭದಲ್ಲಿ ಇಲ್ಲಿ ನಡೆಸಿರುವ ಮೆರವಣಿಗೆಯಲ್ಲಿ ಟಿ. ರಾಜಾ ಸಿಂಹ ಇವರು ಮಾಡಿದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.
ಸಂಪಾದಕೀಯ ನಿಲುವುಹಿಂದೂಗಳ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಮಶೀದಿಯಿಂದ ಮತಾಂಧ ಮುಸಲ್ಮಾನರು ದಾಳಿ ನಡೆಸುತ್ತಾರೆಂದು ಮತಾಂಧರನ್ನು ಎಂದಾದರೂ ಪೊಲೀಸರು ಮುಂಜಾಗರೂಕತೆಯ ಕ್ರಮವೆಂದು ಬಂಧಿಸಿರುವುದನ್ನು ಕೇಳಿದ್ದೀರಾ ? ಪೊಲೀಸರು ಈ ರೀತಿ ದಕ್ಷರಾಗಿದ್ದರೆ, ಹಿಂದೂಗಳ ಮೆರವಣಿಗೆಯ ಮೇಲೆ ಒಂದೇ ಒಂದು ದಾಳಿ ನಡೆಯುತ್ತಿರಲಿಲ್ಲ; ಆದರೆ ದೇಶದಲ್ಲಿ ಹಿಂದೂಗಳನ್ನು ಕೀಳಾಗಿ ಪರಿಗಣಿಸುತ್ತಿರುವುದರಿಂದ ಪೊಲೀಸರು ಹಿಂದೂಗಳ ಮುಖಂಡರ ಮೇಲೆಯೇ ಕ್ರಮ ಕೈಗೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿಂದೂ ರಾಷ್ಟ್ರವೊಂದೇ ಪರಿಹಾರೋಪಾಯವಾಗಿದೆ ! |