ಪಾಕಿಸ್ತಾನದ ಗ್ರಾಮದಲ್ಲಿ ಉಚಿತ ದಿನಸಿ ಹಂಚಿಕೆಯಲ್ಲಿ ಜನರಿಗೆ ಮೋಸ ! – ಗ್ರಾಮಸ್ಥರ ಆರೋಪ

ದಿವಾಳಿತನದ ಹೊಸ್ತಿಲಿನಲ್ಲಿರುವ ಪಾಕಿಸ್ತಾನದಲ್ಲಿ ಜನರನ್ನು ಈ ರೀತಿ ಮೋಸ ಮಾಡುತ್ತಿದ್ದರೆ, ಆಗ ಅವರು ಬಂಡಾಯ ಏಳದೆ ಇರುವುದಿಲ್ಲ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಮನಸೇಹರಾ ಗ್ರಾಮದಲ್ಲಿ ಜನರಿಗೆ ಉಚಿತ ದಿನಸಿ ಹಂಚಿಕೆಯ ಬಗ್ಗೆ ಸರಕಾರದ ಮೇಲೆ ಮೋಸದ ಆರೋಪ ಮಾಡಲಾಗಿದೆ. ಗ್ರಾಮಸ್ಥರ ಅಭಿಪ್ರಾಯದ ಪ್ರಕಾರ, ಸರಕಾರ ಅಗತ್ಯ ಇರುವವರಿಗೆ ಉಚಿತ ದಿನಸಿ ಹಂಚುತ್ತದೆ ; ಆದರೆ ಕೆಲವು ಜನರು ತಪ್ಪಾದ ಪದ್ಧತಿಯಲ್ಲಿ ಇದನ್ನು ಹಂಚುತ್ತಿದ್ದಾರೆ.

೧. ಜುಲ್ಲೊ ಗ್ರಾಮ ಪರಿಷತ್ತಿನ ಮೌಲಾನಾ (ಇಸ್ಲಾಮಿನ ಅಭ್ಯಾಸಕ) ವಕಾರ ಅಹಮದ್ ಇವರು, ಕೆಲವು ಜನರು ಸರಕಾರದ ಸಹಾಯದಿಂದ ಕೆಲಸ ಮಾಡುತ್ತಿದ್ದಾರೆ; ಆದ್ದರಿಂದ ಗ್ರಾಮದಲ್ಲಿನ ೪೦೦ ಕುಟುಂಬದವರಿಗೆ ದಿನಸಿ ದೊರೆತಿಲ್ಲ ಎಂದು ಹೇಳಿದರು. ಆವಾಗ ಗ್ರಾಮಸ್ಥರು ದಿನಸಿಯನ್ನು ತೆಗೆದುಕೊಳ್ಳು ಹೋದರೋ ಆಗ ವಿತರಕರು,’ನಿಮ್ಮ ಪಾಲಿನ ದಿನಸಿ ಮೊದಲೇ ತೆಗೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ. ಆದ್ದರಿಂದ ಜೋಲ್ಲೊ, ಬೋಹರಾಜ, ಬಸುಂದ, ಮತ್ತು ಪಕ್ಕದ ಕೆಲವು ಗ್ರಾಮದಲ್ಲಿ ದಿನಸಿ ದೊರೆತಿಲ್ಲ.

೨. ಕರಾಚಿಯಲ್ಲಿ ಏಪ್ರಿಲ್ ೧ ರಂದು ಉಚಿತ ದಿನಸಿ ತೆಗೆದುಕೊಳ್ಳುವ ಸಮಯ ನಡೆದ ಕಾಲುತುಳಿತದಲ್ಲಿ ೧೨ ಜನರು ಸಾವನ್ನಪ್ಪಿದ್ದರು.