ಇಸ್ಲಾಮಾಬಾದ್ : ಭಾರತದಲ್ಲಿ ಭಯೋತ್ಪಾದಕರ ದಾಳಿಯ ಪ್ರಕರಣದಲ್ಲಿ ಭದ್ರತಾ ಸಂಸ್ಥೆಗಳಿಗೆ ಬೇಕಾಗಿರುವ ಜೈಶ್-ಎ-ಮಹಮ್ಮದ್ ಈ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜ್ಜರ್ 20 ವರ್ಷಗಳ ನಂತರ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದಾನೆ. ಮಸೂದ್ ಅಜ್ಜರ್ ‘ಜೈಶ್-ಎ-ಮೊಹಮ್ಮದ್’ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾನೆ. ಅವನು ಪಾಕಿಸ್ತಾನದಲ್ಲಿ ನೀಡಿದ ಇತ್ತೀಚಿನ ಭಾಷಣದಲ್ಲಿ, ಭಾರತ ಮತ್ತು ಇಸ್ರೇಲ್ ವಿರುದ್ಧ ಹೊಸ ಜಿಹಾದಿ ಅಭಿಯಾನವನ್ನು ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
1. ಈ ವಿಷಯದ ಕುರಿತು ಒಂದು ವರದಿಯ ಪ್ರಕಾರ, ಅಝಹರ್ ನು ಭಯೋತ್ಪಾದಕ ಸಂಘಟನೆಗಳ ಮುಖಂಡರಿಗೆ ಜಗತ್ತಿಗೆ ಇಸ್ಲಾಂನ ಅಧಿಕಾರವನ್ನು ತರುವುದಕ್ಕಾಗಿ ಜಿಹಾದ್‌ಗೆ ಸಹಭಾಗಿ ಆಗುವಂತೆ ಕರೆ ನೀಡಿದ್ದಾನೆ.
2. ಅವನು ತನ್ನ ಭಾಷಣದಲ್ಲಿ, ‘ಭಾರತ, ನಿನ್ನ ಸಾವು ಬರುತ್ತಿದೆ’ ಹೀಗೆ ಪದೇಪದೇ ಕೂಗುತ್ತಿದ್ದನು.
3. 2022 ರಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರು ಮಸೂದ್ ಅಝಹರ್ ಅಫ್ಘಾನಿಸ್ತಾನಕ್ಕೆ ಪಲಾಯನ ಮಾಡಿದ್ದಾನೆ ಎಂದು ಘೋಷಿಸಿದ್ದರು.
4. ಅಝಹರ್ 2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರಧಾರನಾಗಿದ್ದಾನೆ. ಈ ಪ್ರಕರಣದಲ್ಲಿ ಅವನನ್ನು ಪಾಕಿಸ್ತಾನದ ಜೈಲಿನಲ್ಲಿ ಇಡಲಾಯಿತು; ಆದರೆ ಅವನ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. 2016 ರಲ್ಲಿ, ಪಾಕಿಸ್ತಾನಿ ಅಧಿಕಾರಿಗಳು ಆತನ ಬಂಧನದ ವರ್ಣನೆ ‘ರಕ್ಷಣಾತ್ಮಕ ಕೊಠಡಿ’ ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಅಝಹರ್ ನಂತಹ ಪಾಕಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಿ ಅವರನ್ನು ಶಿಕ್ಷಿಸಲು ಭಾರತ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ? |