ಮೊಘಲರ ಪಠ್ಯಗಳನ್ನು ತಗೆದು ಹಾಕಲಿಲ್ಲ ! – ಎನ್.ಸಿ.ಇ.ಆರ್.ಟಿ. ಮುಖ್ಯಸ್ಥ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ೧೧ ಮತ್ತು ೧೨ ನೇ ತರಗತಿಯ ಪಠ್ಯಪುಸ್ತಕಗಳಿಂದ ಮೊಘಲರ ಇತಿಹಾಸದ ಪಾಠಗಳನ್ನು ತೆಗದು ಹಾಕಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್.ಸಿ.ಇ.ಆರ್.ಟಿ.) ಈ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ. ತದನಂತರ ಪಠ್ಯಪುಸ್ತಕಗಳಿಂದ ಮೊಘಲರ ಪಠ್ಯಗಳನ್ನು ತೆಗೆದುಹಾಕಿಲ್ಲ ಎಂದು ಎನ್.ಸಿ.ಇ.ಆರ್.ಟಿ.ಯ ಮುಖ್ಯಸ್ಥ ದಿನೇಶ್ ಪ್ರಸಾದ್ ಸಕ್ಲಾನಿಯವರು ಅವರು ಹೇಳಿದ್ದಾರೆ. “ಕಳೆದ ವರ್ಷ ಕರೋನಾದಿಂದಾಗಿ, ವಿದ್ಯಾರ್ಥಿಗಳ ಮೇಲೆ ಅಧ್ಯಯನದ ಹೊರೆ ಹೆಚ್ಚಾಗಿತ್ತು, ನಾವು ಅದನ್ನು ಕಡಿಮೆ ಮಾಡಿದ್ದೇವು” ಎಂದು ಸ್ಪಷ್ಟೀಕರನ ನೀಡಿದ್ದಾರೆ.
’ಎನ್.ಸಿ.ಈ.ಆರ್.ಟಿ.’ಯ ಮುಖ್ಯಸ್ಥ ತಮ್ಮ ಮಾತನ್ನು ಮುಂದುವರೆಸುತ್ತಾ, ’ರಾಷ್ಟ್ರೀಯ ಶಿಕ್ಷಣ ನೀತಿ, ೨೦೨೦’ ರ ಪ್ರಕಾರ ಶಾಲಾ ಶಿಕ್ಷಣಕ್ಕಾಗಿ ’ನ್ಯಾಶನಲ್ ಕರಿಕ್ಯುಲಂ ಫ್ರೆಮ್ ವರ್ಕ್’ ಅಂತಿಮಗೊಳಿಸಲಾಗುತ್ತಿದೆ. ಹೊಸ ನೀತಿಯ ಪ್ರಕಾರ, ಪಠ್ಯಪುಸ್ತಕಗಳನ್ನು ೨೦೨೪ ರಲ್ಲಿ ಮುದ್ರಿಸಲಾಗುವುದು ಎಂದು ಹೇಳಿದ್ದಾರೆ.