ಸ್ಪಷ್ಟೀಕರಣ ನೀಡಿದ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ !
ನವ ದೆಹಲಿ – ಜಿಹಾದಿ ಭಯೋತ್ಪಾದಕ ಸಂಘಟನೆಯಾದ ‘ಇಂಡಿಯನ್ ಮುಜಾಹಿದೀನ್’ ಗುಜರಾತ್‌ನ ಸೂರತ್ ನಗರದಲ್ಲಿನ ಎಲ್ಲಾ ಮುಸ್ಲಿಂ ನಿವಾಸಿಗಳನ್ನು ಖಾಲಿ ಮಾಡಿ ಅಲ್ಲಿ ಮುಸ್ಲಿಮೇತರ ನಾಗರಿಕರು ಉಳಿದನಂತರ ಅವರ ಮೇಲೆ ಪರಮಾಣು ಬಾಂಬ್ ಹಾಕುವ ಸಂಚು ರೂಪಿಸಿತ್ತು. ಆತನಿಂದ ವಶಪಡಿಸಿಕೊಂಡ ಉಪಕರಣಗಳಲ್ಲಿನ ವಸ್ತುಗಳಿಂದ ಇದು ಸ್ಪಷ್ಟವಾಗಿದೆ ಎಂದು ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಈ ಸಂಘಟನೆಯ ಮುಖ್ಯ ಭಯೋತ್ಪಾದಕ ಯಾಸಿನ್ ಭಟ್ಕಳ್ ಮತ್ತು ಇತರ ೧೧ ಆರೋಪಿಗಳ ವಿರುದ್ಧ ಆರೋಪವನ್ನು ಖಚಿತ ಮಾಡಲಾಗಿದೆ. ಯಾಸಿನ್ ಭಟ್ಕಳ್ ಇತನನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷಿಗಳಿವೆ ಎಂದು ನ್ಯಾಯಾಲಯವು ಹೇಳಿದೆ.
Special NIA Judge noted while framing charges that Indian Mujahedeen operative Bhatkal and 10 others were repeatedly involved in terror activities to wage a war against India | @anany_b https://t.co/rf20m0n88S
— News18 (@CNNnews18) April 3, 2023