ಪಾಕಿಸ್ತಾನ ಸರಕಾರದಿಂದ ನ್ಯಾಯಾಧೀಶರಲ್ಲಿ ಬಿರುಕು ಮೂಡಿಸುವ ಯತ್ನ !

ಇಸ್ಲಾಮಾಬಾದ – ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ, `ಪಂಜಾಬ ಮತ್ತು ಖೈಬರ ಪಖ್ತೂನಖ್ವಾ ಪ್ರಾಂತ್ಯದ ವಿಧಾನಸಭೆಯ ಚುನಾವಣೆಯ ದಿನಾಂಕಗಳ ವಿಷಯದಲ್ಲಿ ಮುಂದುವರೆದಿರುವ ವಿವಾದದ ಬಗ್ಗೆ ನ್ಯಾಯಾಲಯ ತೀರ್ಪು ನೀಡಲಿದೆ;’ ಎಂದು ಹೇಳಿತ್ತು; ಆದರೆ ಈ ವಿಷಯದ ಕುರಿತು ತೀರ್ಪು ಬರುವ ಮೊದಲೇ ಶಹಬಾಜ ಶರೀಫ ಸರಕಾರ ಸರ್ವೋಚ್ಚ ನ್ಯಾಯ ವ್ಯವಸ್ಥೆಯನ್ನು ಟೀಕಿಸಿದೆ. ಪಾಕಿಸ್ತಾನದ ಆಡಳಿತಾರೂಢ ಮೈತ್ರಿ ಪಕ್ಷವು ನ್ಯಾಯಾಧೀಶರಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ. ಶರೀಫ ಸರಕಾರ ಮತ್ತು ಆಡಳಿತಾರೂಧ ಮೈತ್ರಿ ಪಕ್ಷ `ಪಾಕಿಸ್ತಾನ ಡೆಮೊಕ್ರೆಟಿಕ್ ಮೂವ್ ಮೆಂಟ್’ (ಪಿ.ಡಿ.ಎಮ್.) ಕಳೆದ ಕೆಲವು ದಿನಗಳಿಂದ ನೇರವಾಗಿ ಸರ್ವೋಚ್ಚ ನ್ಯಾಯಾಲಯವನ್ನು ಗುರಿಯಾಗಿಸಿದ್ದಾರೆ.

1. ಚುನಾವಣೆಯ ದಿನಾಂಕದ ಸಂದರ್ಭದಲ್ಲಿನ ಪ್ರಕರಣದ ತೀರ್ಪು ಹೊರಬೀಳುವ ಮೊದಲೇ ಶರೀಫ ಸರಕಾರವು ಸರ್ವೋಚ್ಚ ನ್ಯಾಯಾಲಯದ ರಜಿಸ್ಟ್ರಾರರನ್ನು ಅವರ ಹುದ್ದೆಯಿಂದ ಕೆಳಗಿಳಿಸಿದರು. ಸರಕಾರ ತನ್ನ ಹೇಳಿಕೆಯಲ್ಲಿ ರಜಿಸ್ಟ್ರಾರ್ ಇಶರತ್ ಅಲಿಯವರು ನ್ಯಾಯಮೂರ್ತಿ ಕಾಝಿ ಫಾಯೇಜ ಇಸಾ ಇವರ ಆದೇಶವನ್ನು ಪಾಲಿಸಲಿಲ್ಲ. ಆದ್ದರಿಂದ ಅವರನ್ನು ಅವರ ಹುದ್ದೆಯಿಂದ ಕೆಳಗಿಳಿಸಲಾಗಿದೆಯೆಂದು ತಿಳಿಸಿದೆ.

2. ಆಡಳಿತಾರೂಢ `ಪಾಕಿಸ್ತಾನ ಡೆಮೊಕ್ರೆಟಿಕ್ ಮೂವ್ ಮೆಂಟ್’ (ಪಿ.ಡಿ.ಎಮ್.) ಮೈತ್ರಿ ಸರಕಾರವು ಮುಖ್ಯ ನ್ಯಾಯಾಧೀಶ ಉಮರ ಅತಾ ಬಂದಿಯಾಲ್ ಇವರನ್ನು ಗುರಿ ಮಾಡುತ್ತಿದೆ. ಮುಖ್ಯ ನ್ಯಾಯಾಧೀಶ ಉಮರ ಅತಾ ಬಂದಿಯಾಲ್ ಇವರು, `ನೀವು ಸದನಕ್ಕೆ ಹೋದರೆ, ಅಲ್ಲಿ ನಿನ್ನೆಯವರೆಗೆ ಜೈಲಿನಲ್ಲಿದ್ದವರು ಮತ್ತು ದೇಶದ್ರೋಹಿಗಳು ಸದನವನ್ನು ಸಂಬೋಧಿಸಿ ಮಾತನಾಡುತ್ತಿರುವುದು ಕಂಡು ಬರುತ್ತದೆಯೆಂದು ‘ ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಪ್ರಧಾನಮಂತ್ರಿ ಶಹಬಾಜ ಶರೀಫರು ಸಂಸತ್ತಿನಲ್ಲಿ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.