ಹೇಳಿದಷ್ಟೇ ಮಾಡುವ ಆಡಳಿತ !

ಯುಗಾದಿಯ ನಿಮಿತ್ತ ಮುಂಬಯಿಯ ಶಿವಾಜಿ ಪಾರ್ಕ್‌ನಲ್ಲಿ ಮ.ನ.ಸೇ ಆಯೋಜಿಸಿದ ಸಭೆಯಲ್ಲಿ ರಾಜ ಠಾಕ್ರೆ ಇವರು ತೋರಿಸಿದ ವಿಡಿಯೋ ಸದ್ಯ ಬಹಳಷ್ಟು ಚರ್ಚೆಯಲ್ಲಿದೆ. ಅದು ಮುಸಲ್ಮಾನರು ಮಹೀಮ್ ಪರಿಸರದ ಸಮುದ್ರದಲ್ಲಿ ನಿರ್ಮಿಸುತ್ತಿದ್ದ ಗೋರಿಯ (ಮಜಾರ್) ವಿಡಿಯೋ ಆಗಿತ್ತು. ‘ಈ ಗೋರಿಯನ್ನು ತೆರವು ಗೊಳಿಸದಿದ್ದರೆ ಅಲ್ಲಿ ಭವ್ಯವಾದ ಗಣೇಶ ಮಂದಿರವನ್ನು ನಿರ್ಮಾಣ ಮಾಡುವೆವು’, ಎಂದು ರಾಜ ಠಾಕ್ರೆ ಎಚ್ಚರಿಕೆ ನೀಡಿದ್ದರು. ಈ ವಿಡಿಯೋ ತೋರಿಸಿದ ಕೆಲವೇ ಗಂಟೆಗಳಲ್ಲಿ ಮುಂಬಯಿಯ ಜಿಲ್ಲಾಧಿಕಾರಿ ಕಚೇರಿ ಈ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಲು ಮಹಾನಗರಪಾಲಿಕೆಗೆ ಆದೇಶ ನೀಡಿತು ಹಾಗೂ ಪಾಲಿಕೆ ಮತ್ತು ಪೊಲೀಸರು ಸ್ವಲ್ಪವೂ ತಡ ಮಾಡದೆ ಅಲ್ಲಿ ಕಾರ್ಯಾಚರಣೆ ಮಾಡಿದರು. ಯಾರೋ ತೋರಿಸಿದ ನಂತರವಾದರೂ ಆಡಳಿತದವರು ಈ ಅನಧಿಕೃತ ಗೋರಿಯನ್ನು ತೆರವುಗೊಳಿಸಿದರು. ಈ ವಿಡಿಯೋ ಕೇವಲ ಅನಧಿಕೃತ ಗೋರಿಯದ್ದಾಗಿರಲಿಲ್ಲ. ಅದು ಪೊಲೀಸ್ ಮತ್ತು ನಗರಾಡಳಿತದ ಕಾರ್ಯಶೈಲಿಯನ್ನು ಹರಾಜು ಮಾಡುವುದಾಗಿತ್ತು. ಆರ್ಥಿಕ ರಾಜಧಾನಿ ಆಗಿರುವ ಮುಂಬಯಿಯಲ್ಲಿ ಹಾಡುಹಗಲೇ ಇಂತಹ ಅನಧಿಕೃತ ಗೋರಿ ಅಥವಾ ದರ್ಗಾ ನಿರ್ಮಾಣವಾಗುತ್ತಿರುವಾಗ ಪೊಲೀಸ್ ಮತ್ತು ಆಡಳಿತದವರು ಮಲಗಿದ್ದರೇ ? ಅವರಿಗೆ ಈ ವಿಷಯ ತಿಳಿಯಲಿಲ್ಲ ಅಥವಾ ಕಾಣಿಸಲಿಲ್ಲವೇ ? ಅಥವಾ ಕಾಣಿಸಿಯೂ ಅವರು ಅದನ್ನು ಉದ್ದೇಶಪೂರ್ವಕ ಕಡೆಗಣಿಸಿದರೆ ? ಯಾರಾದರೂ ಹೇಳದೆ ಅಥವಾ ತೋರಿಸದೆ ಕೃತಿ ಮಾಡಲಿಕ್ಕಿಲ್ಲ, ಎಂಬುದು ಸರಕಾರಿ ಬಾಬುಗಳ ಕಾರ್ಯಪದ್ಧತಿಯಾಗಿದೆ.

ರಾಜ ಠಾಕ್ರೆ ಇವರು ಸಾಕ್ಷಿ ಸಹಿತ ಬೆಳಕಿಗೆ ತಂದಿರುವ ಲ್ಯಾಂಡ್ ಜಿಹಾದ್ !

ರಾಜ ಠಾಕ್ರೆ ಇವರು ಈ ವಿಷಯವನ್ನು ಎತ್ತಿ ಹಿಡಿಯದಿದ್ದರೆ ಪೊಲೀಸ್ ಮತ್ತು ಆಡಳಿತದವರು ಕ್ರಮತೆಗೆದುಕೊಳ್ಳುತ್ತಿರಲಿಲ್ಲ ಹಾಗೂ ಕೆಲವೇ ದಿನಗಳಲ್ಲಿ ಈ ಗೋರಿ ವಿಶಾಲವಾದ ಒಂದು ಮಸೀದಿಗೆ ರೂಪಾಂತರವಾಗುತ್ತಿತ್ತು ಹಾಗೂ ಆ ಮೇಲೆ ಈ ಅನಧಿಕೃತ ಮಸೀದಿಯನ್ನು ‘ಅಧಿಕೃತ’ಗೊಳಿಸಲು ರಾಜಕೀಯ ಪಕ್ಷಗಳ ಸ್ಪರ್ಧೆ ನಡೆಯುತ್ತಿತ್ತು. ರಾಜ ಇವರು ಕೆಲವೇ ತಿಂಗಳ ಹಿಂದೆ ಮಸೀದಿಗಳ ಮೇಲಿನ ಅನಧಿಕೃತ ಬೋಂಗಾದ ವಿರುದ್ಧ ಧ್ವನಿಯೆತ್ತಿದ ಬಳಿಕ ಅವುಗಳನ್ನು ತೆರವುಗೊಳಿಸುವ ಕೃತಿ ಮಾಡಲಾಯಿತು, ಅನಂತರ ಪೊಲೀಸರು ಹಾಗೂ ಆಡಳಿತ ದವರು ದಡಬಡಿಸಿ ಎಚ್ಚೆತ್ತುಕೊಂಡರು. ಇದುವರೆಗೂ ಈ ಅನಧಿಕೃತ ಬೋಂಗಾಗಳು ಪ್ರತಿದಿನ ೫ ಬಾರಿ ಕರ್ಣಕರ್ಕಶ ಧ್ವನಿಯಲ್ಲಿ ಕಿರುಚುತ್ತವೆ ಹಾಗೂ ಜನರ ವ್ಯಕ್ತಿಸ್ವಾತಂತ್ರ್ಯ ಮತ್ತು ಅಧಿಕಾರಕ್ಕೆ ಪ್ರಹಾರ ಮಾಡುತ್ತಾ ಇರುತ್ತಾರೆ. ಆದರೂ ಪೊಲೀಸರು  ಮಾತ್ರ ಈ ವಿಷಯದಲ್ಲಿ ಇನ್ನೂ ಉದಾಸೀನರಾಗಿದ್ದಾರೆ. ‘ದೇಶದ ಆರ್ಥಿಕ ರಾಜಧಾನಿಯ ಹಾಗೂ ಎಲ್ಲಕ್ಕಿಂತ ಮಹತ್ವದ ನಗರವಾಗಿರುವ ಮುಂಬಯಿಯ ಅವ್ಯವಸ್ಥಾಪನೆ ಹೇಗೆ ನಡೆಯುತ್ತಿದೆ ?’, ಎಂಬುದು ಇದರಿಂದ ತಿಳಿಯುತ್ತದೆ. ಮಹೀಮ್‌ನಲ್ಲಿನ ಅನಧಿಕೃತ ಗೋರಿಯ ವಿರುದ್ಧ ಕ್ರಮತೆಗೆದುಕೊಂಡೆವು, ಎಂದು ಆಡಳಿತದವರು ಬಹುಶಃ ಬೆನ್ನುತಟ್ಟಿ ಕೊಳ್ಳುತ್ತಿರಬಹುದು; ಆದರೆ ಮುಂಬಯಿಯಲ್ಲಿ ಇಂತಹ ನೂರಾರು ಅನಧಿಕೃತ ಧಾರ್ಮಿಕ ಸ್ಥಳಗಳಿರಬಹುದು, ಅವುಗಳ ವಿರುದ್ಧ ಕ್ರಮತೆಗೆದುಕೊಳ್ಳುವ ಬಗ್ಗೆ ಏನು ? ಎಂಬುದರ ಬಗ್ಗೆ ಆಡಳಿತದವರು ಜನರಿಗೆ ಉತ್ತರ ನೀಡಬೇಕು. ಮಹೀಮ್‌ನಲ್ಲಿನ ಅನಧಿಕೃತ ಗೋರಿ ಇದು ಲ್ಯಾಂಡ್ ಜಿಹಾದ್‌ನ ಉತ್ತಮ ಉದಾಹರಣೆಯಾಗಿದೆ. ಮುಂಬಯಿ ಬಾಂಬ್‌ಸ್ಫೋಟದಲ್ಲಿನ ಆರೋಪಿ ಯಾಕೂಬ ಮೆಮನ್‌ನ ಗೋರಿಯನ್ನು ಕಳೆದ ವರ್ಷ ಸುಶೋಭೀಕರಣ ಅಂದರೆ ವೈಭವೀಕರಣ ಮಾಡಲಾಯಿತು, ಆ ಸಂದರ್ಭದಲ್ಲಿಯೂ ಪೊಲೀಸರು ವೀಕ್ಷಕರಾಗಿದ್ದರು. ಇದು ಮತಾಂಧರ ಲ್ಯಾಂಡ್ ಜಿಹಾದ್‌ನ ಮೊದಲ ಮೆಟ್ಟಿಲಾಗಿರುತ್ತದೆ, ಎಂಬುದನ್ನು ಗಮನದಲ್ಲಿಡಬೇಕು.

ಮತಾಂಧರಿಗೆ ಲ್ಯಾಂಡ್ ಜಿಹಾದ್ ಮಾಡಲು ನಿಜವಾಗಿ ಧೈರ್ಯ ನೀಡುವವರು ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ ಸರಕಾರ ‘ವಕ್ಫ್ ಬೋರ್ಡ್ ಭಾರತದಲ್ಲಿ ಯಾವುದೇ ಭೂಮಿ ಯನ್ನು ವಶಪಡಿಸಿಕೊಳ್ಳಬಹುದು’, ಎನ್ನುವ ಕಾನೂನನ್ನು ಸಂಪೂರ್ಣ ದೇಶವನ್ನು ಮೋಸಗೊಳಿಸಿ ಕೇವಲ ಓಲೈಕೆಗಾಗಿ ಮಾಡಿದೆ. ಈಗ ಈ ಕಾನೂನನ್ನು ರದ್ದುಪಡಿಸಬೇಕೆಂಬ ಬೇಡಿಕೆಯ ಧ್ವನಿ ಕೇಳಿಸು ತ್ತಿದೆ. ಈ ಬೇಡಿಕೆಯ ಹಿನ್ನೆಲೆಯಲ್ಲಿ ರಾಜ ಠಾಕ್ರೆಯವರು ಸಾಕ್ಷಿ ಸಹಿತ ಬಹಿರಂಗಪಡಿಸಿದ ಮಹೀಮ್‌ನ ಲ್ಯಾಂಡ್ ಜಿಹಾದ್ ಮಹತ್ವದ್ದಾಗಿದೆ.

ಅತಿಕ್ರಮಣಕ್ಕೊಳಕ್ಕಾದ ಕೋಟೆಗಳು !

ಮಹಾರಾಷ್ಟ್ರದಲ್ಲಿನ ಭೂಮಿಯ ಪರಿಸ್ಥಿತಿ ಹೇಗಿದೆಯೋ ಅದೇ ಪರಿಸ್ಥಿತಿ ಹಿಂದವೀ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗಳದ್ದೂ ಆಗಿದೆ. ಇಸ್ಲಾಮೀ ಆಕ್ರಮಕರಿಗೆ ಆ ಕೋಟೆ-ಕಿಲ್ಲೆಗಳನ್ನು ವಕ್ರದೃಷ್ಟಿಯಿಂದ ನೋಡುವ ಧೈರ್ಯವೆ ಇರಲಿಲ್ಲವೊ, ಅಂತಹ ಕೋಟೆಗಳನ್ನು ಇಂದು ಇಸ್ಲಾಮೀ ಆಕ್ರಮಕರು ಸುತ್ತುವರಿದಿದ್ದಾರೆ ! ಇದಕ್ಕೆ ಪೊಲೀಸರ ಹಾಗೂ ಆಡಳಿತದವರ ಉದಾಸೀನತೆ ಮತ್ತು ಅಸಂವೇದನಶೀಲತೆಯೆ ಕಾರಣವಾಗಿದೆ. ಈ ಅತಿಕ್ರಮಣಗಳ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಸಹಿತ ಸಮಗ್ರ ಕೋಟೆ ಸಂಘಟನೆಗಳು ಹಾಗೂ ಶಿವಾಜಿಪ್ರೇಮಿಗಳು ಧ್ವನಿಯೆತ್ತಿದಾಗ ಮತ್ತು ಆಂದೋಲನ ಮಾಡಿದಾಗ ಮಹಾರಾಷ್ಟ್ರ ಸರಕಾರ ಅದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿತು ಹಾಗೂ ಆ ವಿಷಯದಲ್ಲಿ ಕ್ರಮ ತೆಗೆದುಕೊಳ್ಳುವ ಆಶ್ವಾಸನೆಯನ್ನೂ ನೀಡಿತು. ಸ್ವರಾಜ್ಯದ ಮೇಲೆ ದಾಳಿ ಮಾಡಿದ ಅಫ್ಝಲಖಾನನ ಪ್ರತಾಪಗಡದ ಬುಡದಲ್ಲಿರುವ ಗೋರಿಯ ವೈಭವೀಕರಣವನ್ನು ತಡೆಯುವ ಶ್ರೇಯಸ್ಸೂ ಹಿಂದುತ್ವನಿಷ್ಠ ಸಂಘಟನೆಗಳಿಗೆ ಸಲ್ಲುತ್ತದೆ. ರಾಜ ಠಾಕ್ರೆಯವರು ತನ್ನ ಸಭೆಯಲ್ಲಿ ಮಂಡಿಸಿದ ಅತಿಕ್ರಮಣದ ವಿಷಯಕ್ಕೆ ಈಗ ದೊಡ್ಡ ಪ್ರಮಾಣದಲ್ಲಿ ಜನಬಲ ಸಿಕ್ಕಿದೆ.

ಪೊಲೀಸರ ದುರ್ಲಕ್ಷ !

ಏನೇ ಆದರೂ ಹಿಂದಿನ ಪ್ರಸಂಗದಿಂದ ಕಲಿಯಲಿಕ್ಕಿಲ್ಲ, ಎಂಬುದು ಭಾರತೀಯ ರಾಜಕಾರಣ ಹಾಗೂ ಆಡಳಿತದವರಿಗೆ ಅಂಟಿರುವ ರೋಗವಾಗಿದೆ. ಮುಂಬಯಿಯಲ್ಲಿ ೨೬.೧೧.೨೦೦೮ ರಂದು ಅತೀ ದೊಡ್ಡ ಭಯೋತ್ಪಾದಕ ಆಕ್ರಮಣವಾಗಿತ್ತು. ಈ ಆಕ್ರಮಣ ಸಾಗರ ಮಾರ್ಗದಿಂದಲೆ ಆಗಿತ್ತು. ಆಗ ಸಾಗರ ಸುರಕ್ಷೆಯ ವಿಷಯದಲ್ಲಿ ಇದೇ ಮುಂಬಯಿ ಪೊಲೀಸರ ಮಾನ ಹರಾಜಾಗಿತ್ತು. ಜಗತ್ತಿನಲ್ಲಿ ಮುಂಬಯಿ ಪೊಲೀಸರು ತಲೆ ತಗ್ಗಿಸುವಂತಾಗಿತ್ತು; ಆದರೆ ಅವರಿಗೆ ಅದರ ನೆನಪೇ ಇಲ್ಲ. ಅವರ ಉದಾಸೀನ ವೃತ್ತಿಯು ಇಂದು ೧೪ ವರ್ಷಗಳ ನಂತರವೂ ಹಾಗೆಯೆ ಇದೆ. ದೇಶದಲ್ಲಿ ಈ ಹಿಂದೆ ಘಟಿಸಿದ ಘಟನೆಗಳಲ್ಲಿ ಅನೇಕ ಭಯೋತ್ಪಾದಕರಿಗೆ ಮಸೀದಿಗಳಲ್ಲಿ ಆಶ್ರಯ ನೀಡಿರುವ ಇತಿಹಾಸವಿದೆ. ಆದರೂ ಪೊಲೀಸರು ಮತ್ತು ಆಡಳಿತದವರಿಗೆ ಇಂತಹ ಅನಧಿಕೃತ ನಿರ್ಮಾಣ ಕಾರ್ಯದ ಬಗ್ಗೆ ಇಷ್ಟು ಉದಾಸೀನತೆ ಏಕೆ ? ನಿಜ ನೋಡಿದರೆ ಇಂತಹ ರಾಷ್ಟ್ರಘಾತಕ ಅನಧಿಕೃತ ನಿರ್ಮಾಣಕಾರ್ಯವನ್ನು ದುರ್ಲಕ್ಷಿಸುವವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು. ಒಂದು ಕಾಲದಲ್ಲಿ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರೊಂದಿಗೆ ತುಲನೆಯಾಗುತ್ತಿದ್ದ ಮುಂಬಯಿ ಪೊಲೀಸ್ ಈಗ ಆಫ್ಗಾನಿಸ್ತಾನದ ಪೊಲೀಸರೊಂದಿಗೆ ತುಲನೆ ಮಾಡಲು ಅರ್ಹರಾಗಿದ್ದಾರೆ’, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ? ಅವರಿಗೆ ಬಹಿರಂಗವಾಗಿ ನಡೆಯುವ ತಪ್ಪುಗಳನ್ನು ತಡೆಯಲು ಸಾಧ್ಯವಿಲ್ಲದಿರುವಾಗ ಗೂಂಡಾ, ಮತಾಂಧರು, ಭಯೋತ್ಪಾದಕರು ಮುಂತಾದವರನ್ನು ಹೇಗೆ ತಡೆಯುವರು ? ಅವರಿಗೆ ಇದೆಲ್ಲವೂ ಕಾಣುವುದಿಲ್ಲವೇ ? ಅಥವಾ ಅದರ ಕಡೆಗೆ ‘ಅರ್ಥಪೂರ್ಣ ದುರ್ಲಕ್ಷ ಮಾಡುತ್ತಿದ್ದಾರೆಯೆ ಎಂಬುದು ಜನರಿಗೆ ತಿಳಿಯಬೇಕು. ತದ್ವಿರುದ್ಧ ಹಿಂದೂಗಳ ವಿಷಯದಲ್ಲಿ ಯಾವುದೇ ವಿಷಯವಿದ್ದರೂ, ಅವರು ಪೌರುಷ್ಯವನ್ನು ಪ್ರದರ್ಶಿಸುತ್ತಾರೆ. ಪೊಲೀಸರಿಗೆ ಮತ್ತು ಆಡಳಿತದವರಿಗೆ ಕೇವಲ ಉದ್ಧಟತನದ ಭಾಷೆ ತಿಳಿಯುತ್ತದೆ ಎಂಬುದು ರಾಜ ಠಾಕ್ರೆಯವರ ಸಭೆಯ ಮೂಲಕ ಮತ್ತೊಮ್ಮೆ ಸಿದ್ಧವಾಯಿತು !