|
ಬೆಂಗಳೂರು – ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26 ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದರು. ಬಜೆಟ್ ನಲ್ಲಿ ಮಸೀದಿಯಲ್ಲಿನ ಇಮಾಮ್ ಗಳಿಗೆ ವೇತನ ಹೆಚ್ಚಳ, ವಕ್ಫ್ ಸಂಸ್ಥೆಗಳ ಜೀರ್ಣೋದ್ಧಾರ ಸೇರಿದಂತೆ ಒಟ್ಟು 4,700 ಕೋಟಿ ರೂಪಾಯಿ ಅನುದಾನವನ್ನು ನೀಡಿದೆ. ಈ ಸೂತ್ರವನ್ನು ಟೀಕಿಸಿದ ಬಿಜೆಪಿ, ಇದೊಂದು ‘ಮುಸ್ಲಿಂ ಬಜೆಟ್’ ಎಂದು ಹೇಳಿದೆ. ಇದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ಸಚಿವ ಜಮೀರ್ ಅಹಮದ್ ಖಾನ್, ‘ಇದು ಮುಸ್ಲಿಂ ಬಜೆಟ್ ಎಂದು ಹೇಗೆ ಹೇಳುತ್ತೀರಿ ಎಂದು ಬಿಜೆಪಿ ಅನ್ನು ಪ್ರಶ್ನಿಸಿದರು. ರಾಜ್ಯದ ಒಟ್ಟು ಜನಸಂಖ್ಯೆಯ ಅಂದಾಜು 14 ಪ್ರತಿಶತ ಮುಸ್ಲಿಮರಿದ್ದಾರೆ. ಜನಸಂಖ್ಯೆಯ ಪ್ರಕಾರ ನೋಡಿದರೆ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 60,000 ಕೋಟಿ ರೂಪಾಯಿ ಸಿಗಬೇಕಾಗಿತ್ತು; ಆದರೆ ವಾಸ್ತವವಾಗಿ ಕೇವಲ 4,700 ಕೋಟಿ ರೂಪಾಯಿ ನೀಡಲಾಗಿದೆ. ಬಿಜೆಪಿಯವರಿಗೆ ಇಷ್ಟಾದರೂ ವ್ಯಾವಹಾರಿಕ ಜ್ಞಾನವಿಲ್ಲವೇ?’
ಖಾನ್ ಮುಂದೆ ಮಾತನಾಡಿ ಈ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಸಂಪಾದಕೀಯ ನಿಲುವು
|