ಪೂ. (ಶ್ರೀಮತಿ) ರಾಧಾ ಪ್ರಭು ಮತ್ತು ಪೂ. ಭಾರ್ಗವರಾಮ ಪ್ರಭು ಇವರಲ್ಲಿನ ಸಂಭಾಷಣೆ ಮತ್ತು ಆಗ ಅರಿವಾದ ಪೂ. ಭಾರ್ಗವರಾಮ ಪ್ರಭು ಇವರ ಜಿಜ್ಞಾಸುವೃತ್ತಿ ಮತ್ತು ಸಂಭಾಷಣೆ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಪ್ರತಿಕ್ರಿಯೆ !

ಚೈತ್ರ ಕೃಷ್ಣ ಚತುರ್ಥಿ (೧೦.೪.೨೦೨೩) ರಂದು ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಇವರ ೮೬ ನೇ ಹುಟ್ಟುಹಬ್ಬವಿದೆ. ಅದರ ನಿಮಿತ್ತ …

ಪೂ. (ಶ್ರೀಮತಿ) ರಾಧಾ ಪ್ರಭು

ಪೂ. (ಶ್ರೀಮತಿ) ರಾಧಾ ಪ್ರಭು ಇವರ ೮೬ ನೇ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರ !

ಪೂ. ರಾಧಾ ಪ್ರಭು (ಸನಾತನದ ೪೪ ನೇ ಸಂತರು, ೮೬ ವರ್ಷ) ಇವರು ಕೆಲವು ಚಿತ್ರಗಳನ್ನು ಬಿಡಿಸಿದ್ದರು ಮತ್ತು ಅದರ ಬಗ್ಗೆ ಅವರ ಮರಿಮೊಮ್ಮಗ ಪೂ. ಭಾರ್ಗವರಾಮ ಪ್ರಭು (ಸನಾತನದ ಮೊದಲ ಬಾಲಕಸಂತ, ವಯಸ್ಸು ೫ ವರ್ಷ) ಇವರಿಗೆ ಮುಂದಿನಂತೆ ತಿಳಿಸಿ ಹೇಳುತ್ತಿದ್ದರು.

ಚೈತ್ರ ಕೃಷ್ಣ ಚತುರ್ಥಿ (೧೦.೪.೨೦೨೩) ರಂದು ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಇವರ  ಹುಟ್ಟುಹಬ್ಬವಿದೆ. ಅದರ ನಿಮಿತ್ತ ಈ ಲೇಖನವನ್ನು ಈ ವಾರದ ಸಂಚಿಕೆಯಲ್ಲಿ ನೀಡುತ್ತಿದ್ದೇವೆ.

ಪೂ. ಭಾರ್ಗವರಾಮ ಪ್ರಭು

‘ಗೋವಾದ ರಾಮನಾಥಿ ಆಶ್ರಮದ ಮುಂದಿನ ಪರಿಸರದಲ್ಲಿ ನಂದಿ, ಕಾಮಧೇನು, ಗರುಡ ಮತ್ತು ಪುಷ್ಪಕವಿಮಾನ ಇವುಗಳು ನಿಂತಿವೆ. ಆಪತ್ಕಾಲದಲ್ಲಿ ಸಂಕಟದಲ್ಲಿರುವವರಿಗೆ ಸಹಾಯ ಮಾಡಲು ಶ್ರೀವಿಷ್ಣುವು ಅವರನ್ನೆಲ್ಲ ದೇವಲೋಕದಿಂದ ಭೂಲೋಕಕ್ಕೆ ಕಳುಹಿಸಿದ್ದಾನೆ. ಶ್ರೀವಿಷ್ಣುವು ಅವರನ್ನು ಪೂಜಿಸಿ, ಕುಂಕುಮತಿಲಕವನ್ನಿಟ್ಟು, ಹೂಮಾಲೆಯನ್ನು ಹಾಕಿ, ಆರತಿ ಮಾಡಿ, ಆಶೀರ್ವಾದ ನೀಡಿ ಕಳುಹಿಸಿದ್ದಾನೆ. ಇವುಗಳನ್ನು ನೋಡಲು ಸಾಧಕರು ಹೊರಗೆ ಬಂದಿರುವಾಗ ಪೂ. ಭಾರ್ಗವರಾಮ ಮತ್ತು ಅವರ ಮುತ್ತಜ್ಜಿ ಪೂ. ರಾಧಾ ಪ್ರಭು ಇವರೂ ಅಲ್ಲಿದ್ದಾರೆ.’ ಅವರ ಮಾತುಕತೆಯಾದ ನಂತರ ಪೂ. ಭಾರ್ಗವರಾಮ ಇವರು ಜಿಜ್ಞಾಸೆಯಿಂದ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಪೂ. ರಾಧಾಅಜ್ಜಿಯವರು ಅವರಿಗೆ ನೀಡಿದ ಉತ್ತರವನ್ನು ಮುಂದೆ ನೀಡಲಾಗಿದೆ.

ಸಂಭಾಷಣೆ ಬಗ್ಗೆ ಪರಾತ್ಪರ ಗುರು ಡಾ. ಆಠವಲೆ ಇವರ ಪ್ರತಿಕ್ರಿಯೆ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಪೂ. ರಾಧಾ ಪ್ರಭು ಇವರು ಪೂ. ಭಾರ್ಗವರಾಮನಿಗೆ ನೀಡಿದ ಅವರ ಪ್ರಶ್ನೆಗಳ ಉತ್ತರಗಳನ್ನು ನನಗೂ ಕೊಡಲು ಆಗುತ್ತಿರಲಿಲ್ಲ. ಪೂ. ರಾಧಾ ಪ್ರಭು ಇವರ ಉತ್ತರಗಳಿಂದ ನನಗೂ ತುಂಬ ಕಲಿಯಲು ಸಿಕ್ಕಿತು.ಅದಕ್ಕಾಗಿ ನಾನು ಅವರಿಗೆ ನಮಸ್ಕರಿಸುತ್ತೇನೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪೂ. (ಶ್ರೀಮತಿ) ರಾಧಾ ಪ್ರಭು ಇವರು ಬಿಡಿಸಿದ ಚಿತ್ರಗಳು

ಪೂ. ರಾಧಾ ಪ್ರಭು (ಮುತ್ತಜ್ಜಿ) : ದೇವಲೋಕದಿಂದ ಶ್ರೀವಿಷ್ಣುವು ನಂದಿ, ಕಾಮಧೇನು, ಗರುಡ ಮತ್ತು ಪುಷ್ಪಕವಿಮಾನ ಇವುಗಳನ್ನು ಕಳುಹಿಸಿದ್ದಾನೆ. ಅವುಗಳನ್ನು ನೋಡಲು ಇಲ್ಲಿ ಎಲ್ಲ ಸಾಧಕರು ಸೇರಿದ್ದಾರೆ.

ಪೂ. ಭಾರ್ಗವರಾಮ : ಶ್ರೀವಿಷ್ಣುವು ಇವುಗಳನ್ನು ಏಕೆ ಕಳುಹಿಸಿ ದ್ದಾನೆ ಅಜ್ಜಮ್ಮಾ ?

ಪೂ. ರಾಧಾ ಪ್ರಭು : ಮುಂದೆ ಭೀಕರ ಆಪತ್ಕಾಲ ಬರಲಿದೆ. ಆ ಸಮಯದಲ್ಲಿ ಸಾಧಕರಿಗೆ ಯಾವುದೇ ತೊಂದರೆಯಾಗ ಬಾರದೆಂದು ಇವುಗಳನ್ನು ಕಳುಹಿಸಿದ್ದಾನೆ.

ಪೂ. ಭಾರ್ಗವರಾಮ : ಶ್ರೀವಿಷ್ಣು ಎಷ್ಟು ಒಳ್ಳೆಯವರು ಅಲ್ಲ !

ಪೂ. ರಾಧಾ ಪ್ರಭು : ಅವರು ದೇವರಲ್ಲವೇ ? ನಾವು ಅವರ ಭಕ್ತರು. ಅವರಿಗೆ ತಮ್ಮ ಭಕ್ತರ ಮೇಲೆ ತುಂಬಾ ಕರುಣೆಯಿದೆ. ಭಕ್ತರಿಗೆ ಸಹಿಸಲಾಗದ ಕಷ್ಟ ಬಂದರೆ ಅವರು ಅತ್ತು ಬಿಡುತ್ತಾರೆ.

ಪೂ. ಭಾರ್ಗವರಾಮ : ದೇವರು ನಮ್ಮ ಹಾಗೆ ಅಳುತ್ತಾರೆಯೇ ಅಜ್ಜಮ್ಮಾ ?

ಪೂ. ರಾಧಾ ಪ್ರಭು : ಹೌದು ಮಗು, ತನ್ನ ಪ್ರೀತಿಯ ಭಕ್ತರಿಗೆ ಬಹಳ ಕಷ್ಟ ಬಂದರೆ, ದೇವರೂ ಅಳುತ್ತಾರೆ ಮತ್ತು ಕೂಡಲೇ ಕಷ್ಟಗಳನ್ನು ನಿವಾರಿಸುತ್ತಾರೆ.

ಪೂ. ಭಾರ್ಗವರಾಮ : ಹೌದು ನಾನು ನಿನ್ನೆ ಆಡುವಾಗ ಬಿದ್ದಿದ್ದೆ. ನನಗೆ ಏನು ಪೆಟ್ಟಾಗಲಿಲ್ಲ. ದೇವರು ನನ್ನ ರಕ್ಷಣೆ ಮಾಡಿದ್ದಾನೆ, ಅಲ್ಲವೇ ಅಜ್ಜಮ್ಮಾ !

ಪೂ. ರಾಧಾ ಪ್ರಭು : ನಿನಗೆ ಏನೂ ನೋವಾಗದಿದ್ದಕ್ಕೆ ನೀನೇನು ಹೇಳಿದೆ ?

ಪೂ. ಭಾರ್ಗವರಾಮ : ನಾನು ಕೂಡಲೇ ಕೃತಜ್ಞತೆ ಹೇಳಿದೆ !

ಪೂ. ರಾಧಾ ಪ್ರಭು : ಒಳ್ಳೆ ಕೆಲಸ ಮಾಡಿದೆ.

ಪೂ ಭಾರ್ಗವರಾಮ : ನಂದಿಯು ನಮಗೆ ಏನು ಉಪಕಾರ ಮಾಡುತ್ತದೆ ?

ಪೂ. ರಾಧಾ ಪ್ರಭು : ನಂದಿಯು ಭಗವಾನ ಶಿವನ ವಾಹನ ಭಗವಾನ ವಿಷ್ಣುವು ಶಿವನಲ್ಲಿ ಕೇಳಿ ನಂದಿಯನ್ನು ಪಡೆದಿದ್ದಾನೆ. ಅದು ಆಪತ್ಕಾಲದಲ್ಲಿ ಆಹಾರ, ಬಟ್ಟೆ, ನೀರು ಇತ್ಯಾದಿ ಆವಶ್ಯಕ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆÀಡೆಗೆ ಹೋಗಿ ಕೊಡುತ್ತದೆ. ದಾರಿಗೆ ಅಡ್ಡವಾಗುವ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನು ತನ್ನ ಬಲದಿಂದ ಮತ್ತು ಕೊಂಬುಗಳಿಂದ ಎತ್ತಿ ಬದಿಗೆ ಹಾಕುತ್ತದೆ.

ಪೂ. ಭಾರ್ಗವರಾಮ : ಲಾರಿಯಲ್ಲಿ ಸಾಮಾನುಗಳನ್ನು ತೆಗೆದು ಕೊಂಡು ಹೋಗಬಹುದಲ್ಲ ?

ಪೂ. ರಾಧಾ ಪ್ರಭು : ಆಪತ್ಕಾಲದಲ್ಲಿ ಪೆಟ್ರೋಲ್, ಡಿಸಲ್ ಇತ್ಯಾದಿ ಏನೂ ಸಿಗುವುದಿಲ್ಲ. ಆದುದರಿಂದ ಲಾರಿಯನ್ನು ಆ ಸ್ಥಳಕ್ಕೆ ಕರೆಯಲು ಆಗುವುದಿಲ್ಲ.

ಪೂ. ಭಾರ್ಗವರಾಮ : ಕಾಮಧೇನು ಏನು ಮಾಡುತ್ತದೆ ?

ಪೂ. ರಾಧಾ ಪ್ರಭು : ಕಾಮಧೇನುವು ಎಲ್ಲರಿಗೂ ಬೇಕಾಗುವಷ್ಟು ಹಾಲು ಹಾಗೂ ಅದು ಏನು ಕೇಳಿದರೂ ಕೊಡುತ್ತದೆ.

ಪೂ. ಭಾರ್ಗವರಾಮ : ಅದು ಹೇಗೆ ಕೊಡುತ್ತದೆ ?

ಪೂ. ರಾಧಾ ಪ್ರಭು : ಅದು ದೇವಲೋಕದ ಆಕಳು. ನಾವು ಮನಸ್ಸಿನಲ್ಲಿ ಏನಾದರು ಬೇಡಿದರೆ, ಕೂಡಲೇ ಕೊಡುತ್ತದೆೆ.

ಪೂ ಭಾರ್ಗವರಾಮ : ಗರುಡ ಪಕ್ಷಿಯು ಏನು ಸಹಾಯ ಮಾಡುತ್ತದೆ ?

ಪೂ. ರಾಧಾ ಪ್ರಭು : ಗರುಡನು ಶ್ರೀವಿಷ್ಣುವಿನ ವಾಹನ. ವಿಷ್ಣುವು ಅದರ ಬೆನ್ನಿನ ಮೇಲೆ ಕುಳಿತು ಯಾವ ಲೋಕಕ್ಕೆ ಬೇಕಾದರೂ ಹೋಗುತ್ತಾನೆ. ಆಪತ್ಕಾಲದಲ್ಲಿ ಮನುಷ್ಯರಿಗೆ ಸಹಾಯ ಮಾಡಲೆಂದು ವಿಷ್ಣುವು ಅದನ್ನು ಭೂಲೋಕಕ್ಕೆ ಕಳುಹಿಸಿದ್ದಾನೆ.

ಪೂ. ಭಾರ್ಗವರಾಮ : ಪುಷ್ಪಕವಿಮಾನ ಏನು ಮಾಡುತ್ತದೆ ? ಅದನ್ನು ಯಾರು ಚಲಾಯಿಸುತ್ತಾರೆ ?

ಇಬ್ಬರು ಸಂತರ ಸಂಭಾಷಣೆ ‘ದೇವಲೋಕದಲ್ಲಿ ನಡೆಯುತ್ತಿದೆ’, ಎಂದೆನಿಸುವುದು’

ಸೌ. ಭವಾನಿ ಭರತ ಪ್ರಭು

ನಮಗೆ ಏನೆಲ್ಲ ಈಶ್ವರನು ನೀಡಿದ್ದಾರೆ ಆ ಬಗ್ಗೆ ಹೇಗೆ ಕೃತಜ್ಞತೆ ವ್ಯಕ್ತಪಡಿಸುವುದು ? ಪ್ರತಿಯೊಂದು ವಿಷಯವು ಎಷ್ಟು ಮಹತ್ವದ್ದಾಗಿದೆ ? ಆ ಬಗ್ಗೆ ನಮಗೆ ಕೃತಜ್ಞತೆ ಅನಿಸಬೇಕು’, ಎಂಬುದು ಈ ಸಂಭಾಷಣೆಯಿಂದ ಕಲಿಯಲು ಸಿಕ್ಕಿತು. ಇಬ್ಬರೂ ಸಂತರ ಸಂಭಾಷಣೆಯನ್ನು ಓದಿ ‘ದೇವಲೋಕದಲ್ಲಿಯೇ ಈ ಸಂಭಾಷಣೆ ನಡೆಯುತ್ತಿದೆ’, ಎಂದು ನನಗನಿಸಿತು’,

ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು (೨೫.೪.೨೦೨೦)