ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಸಮಾಜದ ಓರ್ವ ಜ್ಯೋತಿಷಿಗೆ ಅರಿವಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾನತೆ(ಶ್ರೇಷ್ಠತೆ) !

‘ಓರ್ವ ಸಾಧಕಿಯ ತಾಯಿಯವರು ಅವಳ ಜಾತಕವನ್ನು ಓರ್ವ ಜ್ಯೋತಿಷಿಗಳಿಗೆ ತೋರಿಸಿ, ‘ಅವಳಿಗೆ ಏನಾದರೂ ಗ್ರಹಶಾಂತಿ ಇತ್ಯಾದಿ ಮಾಡ ಬೇಕೇ ?, ಎಂದು ಕೇಳಿದರು. ಆಗ ಆ ಜ್ಯೋತಿಷಿಗಳು, ‘ಈ ಹುಡುಗಿಯ ಜೀವನದಲ್ಲಿ ಬಂದಿರುವ ಗುರುಗಳು ಎಷ್ಟು ತೇಜಸ್ವಿ ಮತ್ತು ಸರ್ವಶಕ್ತಿಶಾಲಿ ಇರುವರೆಂದರೆ, ‘ಅವರೆದುರು ಎಲ್ಲ ಗ್ರಹನಕ್ಷತ್ರಗಳು ಮಸುಕಾಗಿವೆ. ಅವಳ ಗ್ರಹಶಾಂತಿ ಇತ್ಯಾದಿ ಮಾಡುವುದು ಬೇಡ. ಅವಳ ಮೇಲೆ ಸರ್ವಶಕ್ತಿಶಾಲಿ ಗುರುಗಳ ಕೃಪೆ ಅಖಂಡವಾಗಿ ಇರುವುದರಿಂದ ಅವಳ ಜೀವನದಲ್ಲಿ ಯಾವುದೇ ಅಡಚಣೆ ಬರಲಾರದು. ಅವಳದೆಲ್ಲವೂ ಒಳ್ಳೆಯದೇ ಆಗುವುದು”, ಎಂದು ಹೇಳಿದರು.

ಆಶ್ಚರ್ಯವೆಂದರೆ ಆ ಜ್ಯೋತಿಷಿಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಿಚಯವಿಲ್ಲ ಮತ್ತು ಅವರಿಗೆ ಸನಾತನ ಸಂಸ್ಥೆಯ ಕಾರ್ಯದ ಬಗ್ಗೆಯೂ ಗೊತ್ತಿಲ್ಲ, ಆದರೂ ಅವರು ಸಾಕ್ಷಾತ್ ಮಹಾವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಸರ್ವಜ್ಞತೆಯನ್ನು ಗುರುತಿಸಿದರು.

ಇಂತಹ ಸರ್ವಶಕ್ತಿಶಾಲಿ ಮತ್ತು ಸರ್ವಜ್ಞ ಗುರುದೇವರ ಪಾವನ ಚರಣಗಳಲ್ಲಿ ಭಾವಪೂರ್ಣ ಕೃತಜ್ಞತೆಗಳು !’

– ಕು. ಮಧುರಾ ಗೋಖಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೨.೨೦೨೩)