ಸಾಸಾರಾಮ (ಬಿಹಾರ) – ಶ್ರೀರಾಮನವಮಿಯ ಸಮಯದಲ್ಲಿ ನಡೆದ ದಂಗೆಯ ನಂತರ ಇಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಪಲಾಯನ ಮಾಡಿದ್ದಾರೆ. ಇಲ್ಲಿಯವರೆಗೂ ಒತ್ತಡದ ಸ್ಥಿತಿಯಿದೆ. ನಾಲಂದದಲ್ಲಿಯೂ ಇದೆ ಸ್ಥಿತಿಯಿದೆ. ಎರಡೂ ನಗರಗಳಲ್ಲಿ ೧೪೪ ಜ್ಯಾರಿಗೊಳಿಸಲಾಗಿದೆ. ಪೊಲೀಸರು ಗಸ್ತು ಹೊಡೆಯುತ್ತಿದ್ದರೂ ಹಿಂದೂಗಳು ಪಲಾಯನ ಮಾಡುತ್ತಿದ್ದಾರೆ. ಇಲ್ಲಿನ ಹಿಂದೂಗಳು `ನಮ್ಮ ರಕ್ಷಣೆ ಮಾಡಲು ಯಾರೂ ಇಲ್ಲದಿರುವಾಗ ನಾವು ಇಲ್ಲಿ ಇರುವುದಾದರೂ ಹೇಗೆ ?’ ಎಂದು ಹೇಳುತ್ತಾರೆ.
सासाराम में सांप्रदायिक हिंसा और आगजनी के बाद धारा 144 लागू है। मुख्यमंत्री नीतीश कुमार दोषियों के ख़िलाफ़ कड़ी कार्रवाई की बात कह रहे हैं। वहीं इलाके में तनाव के बाद आम लोग पलायन करने को मजबूर हैं, देखिए।#Sasaram #BiharPolice pic.twitter.com/zqVjNsLDFU
— Bihar Tak (@BiharTakChannel) April 1, 2023
ಮೊದಲು ನೀವು ನಿಮ್ಮ ಜೀವ ಉಳಿಸಿ, ಜೀವ ಉಳಿದರೆ ಅನೇಕ ಮನೆಗಳು ಸಿಗುವವು ! – ಸಹಾಯ ಕೇಳಿದ ಹಿಂದೂಗಳಿಗೆ ಪೋಲೀಸರ ಉತ್ತರ
ಪಲಾಯನ ಮಾಡುವ ಓರ್ವ ಹಿಂದೂ ಮಹಿಳೆಯು `ಆಡಳಿತದ ಎದುರಿನಲ್ಲಿಯೇ ನಮ್ಮೆಲ್ಲರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ನಮ್ಮ ವಸ್ತುಗಳು ಸುಟ್ಟು ಬೂದಿಯಾದವು. ನಾವು ಪೊಲೀಸರಲ್ಲಿ ಸಹಾಯ ಕೇಳಿದಾಗ ಅವರು `ಮೊದಲು ನೀವು ನಿಮ್ಮ ಜೀವ ಉಳಿಸಿ, ಜೀವ ಉಳಿದರೆ ಅನೇಕ ಮನೆಗಳು ಸಿಗುವವು’ ಎಂದು ಹೇಳಿದರು. ಆದುದರಿಂದ ನಮಗೆ ಪಲಾಯನ ಮಾಡಬೇಕಾಯಿತು’ ಎಂದು ಹೇಳಿದರು. (ಹಿಂದೂಗಳ ರಕ್ಷಣೆ ಮಾಡುವ ಬದಲು ಇಂತಹ ಸಲಹೆಗಳನ್ನು ನೀಡುವ ಪೊಲೀಸರನ್ನು ಹಿಂದೂಗಳ ಕರದಿಂದ ಏಕೆ ಸಾಕಬೇಕು ?)
(ಸೌಜನ್ಯ: ಇಂಡಿಯನ್ ಟುಡೇ)
ಸಂಪಾದಕರ ನಿಲುವು
|