ಮೆಕ್ಸಿಕೋದಲ್ಲಿ ಗಾಳಿಯಲ್ಲಿ ಹಾರುವ ಬಿಸಿಗಾಳಿಯ ಬಲೂನಿಗೆ ಬೆಂಕಿ, ಪ್ರವಾಸಿಗರಿಂದ ನೆಲಕ್ಕೆ ಜಿಗಿತ !

ಇಬ್ಬರ ಸಾವು

ಮೆಕ್ಸಿಕೋ ಸಿಟಿ – ಇಲ್ಲಿನ ತಿಯೊಟಿಹೊ ಎಂಬ ಪ್ರಾಚೀನ ಸ್ಥಳದ ಹತ್ತಿರ ಗಾಳಿಯಲ್ಲಿ ಹಾರುವ ಬಿಸಿಗಾಳಿಯ ಬಲೂನಿಗೆ ಬೆಂಕಿ ತಗುಲಿ ಅದರಲ್ಲಿದ್ದ ಪ್ರವಾಸಿಗಳು ನೆಲಕ್ಕೆ ಜಿಗಿದರು. ಇದರಲ್ಲಿ ೨ ಸಾವನ್ನಪ್ಪಿದ್ದಾರೆ. ಮೃತರಲ್ಲಿ ೩೯ ವರ್ಷದ ಮಹಿಳೆ ಹಾಗೂ ೪೦ ವರ್ಷದ ಪುರುಷರಿದ್ದರು. ಏಪ್ರಿಲ್ ೧ ರಂದು ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. ಈ ಅಪಘಾತದಲ್ಲಿ ಓರ್ವ ಮಹಿಳೆಯ ಮುಖವು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಆಕೆಯ ಬಲಗೈ ಮುರಿದಿದೆ. ಈ ಬಲೂನಿಗೆ ಹೇಗೆ ಬೆಂಕಿ ತಗುಲಿತು ? ಅದರಲ್ಲಿ ಒಟ್ಟು ಎಷ್ಟು ಪ್ರವಾಸಿಗರಿದ್ದರು ? ಎಂಬುದು ಇಲ್ಲಿಯ ವರೆಗೆ ಸ್ಪಷ್ಟವಾಗಿಲ್ಲ.