ಜಮಶದಪುರ(ಝಾರಖಂಡ) ಇಲ್ಲಿ ರಾಮನವಮಿಯ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ

(ಸೌಜನ್ಯ : ANI )

ರಾಂಚಿ(ಝಾರಖಂಡ)- ರಾಮನವಮಿಯ ನಿಮಿತ್ತ ಏರ್ಪಡಿಸಲಾಗಿದ್ದ ಮೆರವಣಿಗೆಯ ಸಂದರ್ಭದಲ್ಲಿ ಬಂಗಾಳ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಹಿಂಸಾಚಾರ ಈಗ ನಿಧಾನವಾಗಿ ಭಾರತದ ಇತರ ರಾಜ್ಯಗಳಿಗೂ ಹರಡುತ್ತಿದೆ. ಮಾರ್ಚ 31ರಂದು  ಝಾರಖಂಡ ರಾಜ್ಯದ ಜಮಶೇಡಪೂರದ ಜುಗಸಲಾಯಿ ಪ್ರದೇಶದಲ್ಲಿ ರಾಮನವಮಿಯ ಮೆರವಣಿಗೆಯನ್ನು ವಿರೋಧಿಸಿದ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಅವರು ರಸ್ತೆಯ ಮೇಲೆ ಟಾಯರ ಸುಟ್ಟರು ಮತ್ತು ಪೊಲೀಸರ ವಾಹನಗಳನ್ನು ಕೂಡ ಧ್ವಂಸಗೊಳಿಸಿದರು. ಪೊಲೀಸ ಅಧೀಕ್ಷಕ ಮತ್ತು ಜಿಲ್ಲಾದಂಡಾಧಿಕಾರಿಯವರು ಅರೆಸೇನಾಪಡೆಯೊಂದಿಗೆ  ಘಟನಾಸ್ಥಳಕ್ಕೆ ಧಾವಿಸಿ ಹಿಂಸಾಚಾರವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಪೊಲೀಸರು ರಾಮನವಮಿಯ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದರಿಂದ ಹಿಂದೂಗಳು ಆಕ್ರೋಶಗೊಂಡರು. ಅವರು ಅಲ್ಲಿಯ ಬಾಟಾ ಚೌಕದಲ್ಲಿ ಹನುಮಾನ ಚಾಲೀಸಾ ಪಠಿಸಲು ಪ್ರಾರಂಭಿಸಿದರು. ಮತ್ತು ರೈಲು ನಿಲ್ದಾಣದ  ಮೇಲ್ಸೇತುವೆಯನ್ನು ತಡೆಗಟ್ಟಿದರು.

ಸಂಪಾದಕರ ನಿಲುವು

ಹಿಂದೂಗಳ ಉತ್ಸವಗಳಿಗೆ ಅಡ್ಡಿಯನ್ನುಂಟು ಮಾಡುವ ಮತಾಂಧ ಮುಸಲ್ಮಾನರಿಗಿಂತ ಅವರನ್ನು ಹದ್ದುಬಸ್ತಿನಲ್ಲಿಡುವ ಕ್ಷಮತೆಯಿಲ್ಲದಿರುವ ಪೊಲೀಸರೇ ಜವಾಬ್ದಾರರಾಗಿದ್ದಾರೆಂದು ಯಾರಾದರೂ ಹೇಳಿದರೆ ತಪ್ಪೇನಿದೆ?