ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟಿನಿಂದ ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ! – ಆಸ್ಟ್ರೇಲಿಯಾ ಅಂಡ್ ನ್ಯೂಜಿಲೆಂಡ್ ಬ್ಯಾಂಕಿಂಗ್ ಗ್ರೂಪ್

‘ಆಸ್ಟ್ರೇಲಿಯಾ ಅಂಡ್ ನ್ಯೂಜಿಲೆಂಡ್ ಬ್ಯಾಂಕಿಂಗ್ ಗ್ರೂಪ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇನ್ ಎಲಿಯಟ್

ಮೆಲಬರ್ನ (ಆಸ್ಟ್ರೇಲಿಯಾ) – ಅಮೇರಿಕಾ ಮತ್ತು ಯುರೋಪ್ ನ ಕೆಲವು ಬ್ಯಾಂಕ್ ಗಳ ಮೇಲೆ ಆವರಿಸಿರುವ ಬಿಕ್ಕಟ್ಟು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದು ‘ಆಸ್ಟ್ರೇಲಿಯಾ ಅಂಡ್ ನ್ಯೂಜಿಲೆಂಡ್ ಬ್ಯಾಂಕಿಂಗ್ ಗ್ರೂಪ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇನ್ ಎಲಿಯಟ್ ಅವರು ಹೇಳಿದ್ದಾರೆ.

ಎಲಿಯಟ್ ತಮ್ಮ ಮಾತನ್ನು ಮುಂದುವರೆಸುತ್ತಾ, ಸಧ್ಯದ ಪರಿಸ್ಥಿತಿಯು ೨೦೦೮ ರ ಜಾಗತಿಕ ಆರ್ಥಿಕ ಹಿಂಜರಿತದತ್ತ ಜಗತ್ತನ್ನು ಕೊಂಡೊಯ್ಯುತ್ತದೆ ಎಂದು ಹೇಳಬಹುದು; ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿನ ಬ್ಯಾಂಕುಗಳ ದುಃಸ್ಥಿತಿಯು ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಹೆಚ್ಚು ಸಾಧ್ಯತೆಯಿದೆ. ಪಾಶ್ಚಿಮಾತ್ಯ ಹಣಕಾಸು ಸಂಸ್ಥೆಗಳು ಪ್ರಸ್ತುತ ಬಿಕ್ಕಟ್ಟು ತ್ವರಿತವಾಗಿ ಹೋಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಹೇಳಿದರು.