ಲಂಚ ಪ್ರಕರಣದಲ್ಲಿ ಕರ್ನಾಟಕದ ಭಾಜಪದ ಶಾಸಕ ಮಾಡಾಳು ವಿರೂಪಾಕ್ಷಪ್ಪನವರ ಬಂಧನ

ಭಾಜಪ ಶಾಸಕ ಮಾಡಾಳು ವಿರುಪಾಕ್ಷಪ್ಪ

ಬೆಂಗಳೂರು – ರಾಜ್ಯದ ಭಾಜಪ ಶಾಸಕ ಮಾಡಾಳು ವಿರುಪಾಕ್ಷಪ್ಪರನ್ನು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಳೆದ ತಿಂಗಳು ಅವರ ಪುತ್ರ ಪ್ರಶಾಂತನನ್ನು ಒಬ್ಬ ಗುತ್ತಿಗೆದಾರನಿಂದ ಲಂಚವನ್ನು ಪಡೆಯುವಾಗ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಮಾಡಾಳು ವಿರುಪಾಕ್ಷಪ್ಪನವರನ್ನು ಪ್ರಮುಖ ಆರೋಪಿಯೆಂದು ದೂರು ದಾಖಲಾಗಿಸಲಾಗಿತ್ತು. ಅವರು ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಬಳಿಕ ವಿರೂಪಾಕ್ಷಪ್ಪನವರನ್ನು ಬಂಧಿಸಲಾಯಿತು.

(ಸೌಜನ್ಯ : Speed News Kannada)

ಸಂಪಾದಕೀಯ ನಿಲುವು

ಇಂತಹವರ ಎಲ್ಲ ಆಸ್ತಿಯನ್ನು ಜಪ್ತಿ ಮಾಡಿಕೊಂಡು, ಅವರಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಇತರರಿಗೆ ಪಾಠವಾಗುವುದು !