ಬಾಂಗ್ಲಾದೇಶದ ಮುಸಲ್ಮಾನರು ದೆಹಲಿಯಲ್ಲಿ ಇಸ್ಲಾಂನ ಧ್ವಜ ಹಾರಿಸುವರು !’ (ಅಂತೆ)

ಬಾಂಗ್ಲಾದೇಶದ ಮೌಲಾನಾಗೆ ಹಗಲಗನಸು !

(ಮೌಲಾನಾ ಎಂದರೆ ಇಸ್ಲಾಂ ಅಭ್ಯಾಸಕ)

ಢಾಕಾ (ಬಾಂಗ್ಲಾದೇಶ) – ಮುಂಬರುವ ಕಾಲದಲ್ಲಿ ಬಾಂಗ್ಲಾದೇಶದ ಮುಸಲ್ಮಾನರು ದೆಹಲಿಯಲ್ಲಿ ಇಸ್ಲಾಂನ ಧ್ವಜ ಹಾರಿಸುವರು. ಯಾರಾದರೂ ಬಾಂಗ್ಲಾದೇಶದ ಮೇಲೆ ನಿಯಂತ್ರಣ ಪಡೆಯಲು ಪ್ರಯತ್ನ ಮಾಡಿದರೆ, ಪ್ರತಿಯೊಂದು ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಅವುಗಳಿಗೆ ಛಾವಣಿಯ ರೂಪ ನೀಡಲಾಗುವುದು. ಪ್ರತಿಯೊಬ್ಬ ಮುಸಲ್ಮಾನ ಜಿಹಾದಿಗಾಗಿ ಬಾಂಗ್ಲಾದೇಶದ ಸೈನ್ಯದ ಜೊತೆಗೆ ನಿಲ್ಲುವರು, ಎಂದು ಬಾಂಗ್ಲಾದೇಶದ ಮೌಲಾನಾ ಇನಾಯತುಲ್ಲ ಅಬ್ಬಾಸಿಯು ಹುರುಳಿಲ್ಲದ ಹೇಳಿಕೆ ನೀಡಿದನು. ಇದರ ವಿಡಿಯೋ ‘ಪಾಕಿಸ್ತಾನ್ ಅನ್ ಟೋಲ್ಡ್’ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ.

‘ವಾಯ್ಸ್ ಆಫ್ ಬಾಂಗ್ಲಾದೇಶ ಹಿಂದೂಸ್’ ಈ ಟ್ವಿಟರ್ ಖಾತೆಯ ಪ್ರಕಾರ ಅಬ್ಬಾಸಿಯು ಓರ್ವ ಬಾಂಗ್ಲಾದೇಶಿ ವಿದ್ವಾನನಾಗಿದ್ದು ಆತ ಯಾವಾಗಲೂ ಭಾರತದ ವಿರುದ್ಧ ವಿಷ ಕಾರುತ್ತಾನೆ.

ಸಂಪಾದಕರ ನಿಲುವು

ಇಂತಹ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಬಾಂಗ್ಲಾದೇಶದ ಶೇಖ ಹಸೀನಾ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !