ಪುಣೆ – ಪುಣೆ ಜಿಲ್ಲೆಯಲ್ಲಿ ಅಧ್ಯಾತ್ಮಪ್ರಸಾರದ ಕಾರ್ಯವನ್ನು ನೋಡಿಕೊಳ್ಳುವ ಮತ್ತು ಗುರುಗಳ ಮೇಲಿನ ದೃಢ ಶ್ರದ್ಧೆ, ಈಶ್ವರಪ್ರಾಪ್ತಿಯ ದೃಢನಿರ್ಧಾರ, ಉತ್ತಮ ನೇತೃತ್ವಗುಣ, ಪ್ರೇಮಭಾವ ಇಂತಹ ಅನೇಕ ಗುಣಗಳನ್ನು ಹೊಂದಿರುವ ಸೌ. ಮನಿಷಾ ಪಾಠಕ (೪೧ ವರ್ಷ) ಇವರು ಸನಾತನದ ೧೨೩ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು. ಅನೇಕ ಶಾರೀರಿಕ ತೊಂದರೆಗಳಿರುವಾಗಲೂ ಸೌ. ಮನಿಷಾ ಪಾಠಕ ಇವರು ಅತ್ಯಂತ ತಳಮಳದಿಂದ ಧರ್ಮಪ್ರಸಾರದ ಸೇವೆಯನ್ನು ಮಾಡುತ್ತಾರೆ. ಸನಾತನದ ಧರ್ಮಪ್ರಸಾರಕರಾದ ಸದ್ಗುರು ಸ್ವಾತಿ ಖಾಡ್ಯೆ ಇವರು ಈ ಆನಂದದ ವಾರ್ತೆಯನ್ನು ನೀಡಿದಾಗ ಎಲ್ಲ ಸಾಧಕರು ಭಾವಸ್ಥಿತಿಯಲ್ಲಿ ಮುಳುಗಿದರು. ಸದ್ಗುರು ಸ್ವಾತಿ ಖಾಡ್ಯೆ ಇವರು ಪೂ. (ಸೌ.) ಮನಿಷಾ ಪಾಠಕ ಇವರಿಗೆ ಪುಷ್ಪಹಾರವನ್ನು ಹಾಕಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರವನ್ನು ಉಡುಗೊರೆ ಕೊಟ್ಟು ಸನ್ಮಾನ ಮಾಡಿದರು. ಈ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೂ. (ಸೌ.) ಮನಿಷಾ ಪಾಠಕ ಇವರ ಕುರಿತು ಕಳುಹಿಸಿದ ಸಂದೇಶವನ್ನು ಸದ್ಗುರು ಸ್ವಾತಿ ಖಾಡ್ಯೆ ಇವರು ಓದಿದರು. ಸಂದೇಶವನ್ನು ಓದಿದ ನಂತರ ಉಪಸ್ಥಿತರಿದ್ದ ಎಲ್ಲ ಸಾಧಕರ ಭಾವಜಾಗೃತವಾಯಿತು.
ಈ ಸಮಾರಂಭದಲ್ಲಿ ಸನಾತನದ ಬಾಲಕಸಂತರಾದ ಪೂ. ವಾಮನ ರಾಜಂದೆಕರ ಮತ್ತು ಸನಾತನದ ಸಂತರಾದ ಪೂ. (ಶ್ರೀಮತಿ) ಉಷಾ ಕುಲಕರ್ಣಿ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಇವರೊಂದಿಗೆ ಪೂ. (ಸೌ.) ಮನಿಷಾ ಪಾಠಕ ಇವರ ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಪತಿ ಶ್ರೀ. ಮಹೇಶ ಪಾಠಕ ಮತ್ತು ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮಗಳು ಕು. ಪ್ರಾರ್ಥನಾ ಪಾಠಕ, ತಾಯಿ ಶ್ರೀಮತಿ ಸುರೇಖಾ ಸರಸರ ಮತ್ತು ಸಹೋದರಿ ಸೌ. ಮಾನಸಿ ಉಥಳೆ, ಅವರ ಯಜಮಾನರು ಶ್ರೀ. ಮಯೂರ ಮತ್ತು ಮಗಳು ಚಿ. ಶರಣ್ಯ ಇವರೆಲ್ಲರು ಉಪಸ್ಥಿತರಿದ್ದರು.