ಬೇಸಿಗೆಯಲ್ಲಿ ವಿವಿಧ ರೋಗಗಳಿಂದ ದೂರವಿರಲು ಮುಂದಿನ ಕಾಳಜಿಗಳನ್ನು ತೆಗೆದುಕೊಳ್ಳಬೇಕು !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಈಗ ಬೇಸಿಗೆ ಪ್ರಾರಂಭವಾಗಿದೆ. ಬೇಸಿಗೆಯಲ್ಲಿ ಶರೀರದ ತಾಪಮಾನ ಹೆಚ್ಚಾಗುತ್ತದೆ, ತುಂಬಾ ಬೆವರು ಬರುವುದು, ಶಕ್ತಿ ಕಡಿಮೆಯಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ತಾಪಮಾನ ಹೆಚ್ಚಾ ದುದರಿಂದ ಜನರು ಪ್ರಜ್ಞಾಹೀನ ರಾಗಿ (ಹೀಟ ಸ್ಟ್ರೋಕ್‌ನಿಂದ) ಜೀವವನ್ನು ಕಳೆದುಕೊಂಡಿರುವ ಉದಾಹರಣೆಗಳೂ ಇವೆ. ಬೇಸಿಗೆಯಲ್ಲಿ ಆಗುವ ವಿವಿಧ ರೋಗಗಳಿಂದ ದೂರವಿರಲು ಎಲ್ಲರೂ ಮುಂದಿನ ಕಾಳಜಿಗಳನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

ಇಡೀ ದಿನದಲ್ಲಿ ಅವಶ್ಯಕವಿರುವಷ್ಟು ನೀರು ಅಥವಾ ಇತರ ಪಾನೀಯಗಳನ್ನು ಕುಡಿಯಬೇಕು. ನೀರು ಕುಡಿಯಲು ಬಾಯಾರಿಕೆಯಾಗುವ ದಾರಿ ಕಾಯಬಾರದು. ಗಾಢ (ಡಾರ್ಕ) ಬಣ್ಣದ ಮೂತ್ರ ಆಗುತ್ತಿದ್ದರೆ ‘ಹೆಚ್ಚು ನೀರು ಕುಡಿಯಬೇಕು’ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಶೀತಕಪಾಟಿನಲ್ಲಿನ (ಫ್ರೀಜನಲ್ಲಿನ) ನೀರು ಕುಡಿಯಬಾರದು. ಬೆಳಗ್ಗೆ ಮನೆಯಿಂದ ಹೊರಗೆ ಹೋಗುವಾಗ ಒಂದು ಲೋಟ ನೀರು ಕುಡಿದು ಹೊರಗೆ ಹೋಗಬೇಕು. ಹೊರಗೆ ಹೋಗುವಾಗ ತಮ್ಮ ಜೊತೆಯಲ್ಲಿ ಕುಡಿಯುವ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಬೇಕು.

ವೈದ್ಯ ಮೇಘರಾಜ ಪರಾಡಕರ್

೨. ಒಂದೇ ಸಮಯದಲ್ಲಿ ತುಂಬಾ ನೀರನ್ನು ಕುಡಿಯುವುದಕ್ಕಿಂತ ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು. ಬಿಸಿಲಿನಿಂದ ಬಂದ ಕೂಡಲೇ ನೀರನ್ನು ಕುಡಿಯದೇ ೫-೧೦ ನಿಮಿಷ   ಶಾಂತವಾಗಿ ಕುಳಿತುಕೊಂಡು ನಂತರ ನೀರು ಕುಡಿಯಬೇಕು.

೩. ಸಕ್ಕರೆಯಿರುವ ಪಾನಿಯಗಳನ್ನು ಕುಡಿಯಬಹುದು; ಆದರೆ ಹೆಚ್ಚು ಸಕ್ಕರೆಯಿರುವ ಪಾನೀಯಗಳು ಜೀರ್ಣವಾಗಲು ಜಡವಾಗಿರುವುದರಿಂದ, ಅವುಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಕುಡಿಯಬೇಕು. ಸಾಧ್ಯವಿದ್ದರೆ ಪ್ರತಿದಿನದ ಆಹಾರದಲ್ಲಿ ಮಜ್ಜಿಗೆ ಅಥವಾ ಪಾನಕಗಳು ಇರಬೇಕು.

೪. ಹೊರಗಿನ ತಿಂಡಿ-ತಿನಿಸುಗಳನ್ನು ತಿನ್ನಬಾರದು.

೫. ಸಡಿಲು, ತಿಳಿ ಬಣ್ಣದ ಮತ್ತು ತೂಕದಲ್ಲಿ ಹಗುರಾದ (ಆದಷ್ಟು ಹತ್ತಿಯ ನೂಲಿನ) ವಸ್ತ್ರಗಳನ್ನು ಉಪಯೋಗಿಸಬೇಕು.

೬. ಬಿಸಿಲಿನ ದಿನಗಳಲ್ಲಿ ಹೆಚ್ಚು ಬೆವರು ಬರುವುದರಿಂದ ಬೇಗನೆ ದಣಿವಾಗುತ್ತದೆ. ಹಾಗಾಗಿ ಸ್ವಲ್ಪ ಕಡಿಮೆ ವ್ಯಾಯಾಮ ಮಾಡಬೇಕು.

೭. ತುಂಬಾ ಬಿಸಿಲಿರುವಾಗ ಮನೆಯಲ್ಲಿ ಅಥವಾ ನೆರಳಿರುವ ಜಾಗದಲ್ಲಿ ನಿಲ್ಲಬೇಕು.

೮. ವಾತಾವರಣ ತಂಪಿರಲು ಕೂಲರ್‌ನ ಸೌಲಭ್ಯವಿದ್ದರೆ, ದಿನದಲ್ಲಿ ಕೆಲವು ಗಂಟೆ ಕೂಲರನ್ನು ಉಪಯೋಗಿಸಬಹುದು.

೯. ಸಾಧ್ಯವಿದ್ದಷ್ಟು ಬೆಳಗ್ಗೆ ೧೦ ರ ಒಳಗೆ ಮತ್ತು ಮಧ್ಯಾಹ್ನ ೪ ರ ನಂತರ ಮನೆಯಿಂದ ಹೊರಗೆ ಹೋಗಬೇಕು. ‘ಬಿಸಿಲಿನ ಶಾಖ ತಾಗಬಾರದೆಂದು ಹೊರಗೆ ಹೋಗುವಾಗ ಸಾಧ್ಯವಿದ್ದರೆ ಕಣ್ಣುಗಳಿಗೆ ‘ಗಾಗಲ್’ ಹಾಕಬೇಕು, ಛತ್ರಿ ಅಥವಾ ತಲೆಯ ಸುತ್ತಲೂ ನೆರಳು ಬೀಳುವಂತಹ ಟೊಪ್ಪಿಗೆ ಉಪಯೋಗಿಸ ಬೇಕು. ಟೊಪ್ಪಿಗೆ ಇಲ್ಲದಿದ್ದರೆ ತಲೆಗೆ ಮತ್ತು ಕಿವಿಗಳ ಮೇಲೆ ದೊಡ್ಡ ಬಿಳಿ ಬಣ್ಣದ ಕೈವಸ್ತ್ರವನ್ನು ಕಟ್ಟಿಕೊಳ್ಳಬೇಕು.

೧೦. ಕೆಲವರಿಗೆ ಅಧ್ಯಾತ್ಮ ಪ್ರಸಾರದ ಸೇವೆ ಅಥವಾ ಬೇರೆ ಕಾರಣಗಳಿಂದ ಹೊರಗೆ ಹೋಗಬೇಕಾಗುತ್ತದೆ ಅಥವಾ ಪ್ರವಾಸ ಮಾಡಬೇಕಾಗುತ್ತದೆ. ‘ಉಷ್ಣತೆಯ ತೊಂದರೆಯಾಗಬಾರದೆಂದು’, ಪುರುಷರು ಜೇಬಿನಲ್ಲಿ ಮತ್ತು ಸ್ತ್ರೀಯರು ತಮ್ಮ ಪರ್ಸನಲ್ಲಿ ಈರುಳ್ಳಿ ಯನ್ನು ಇಡಬೇಕು. ಈರುಳ್ಳಿ ಶರೀರದಲ್ಲಿನ ಉಷ್ಣತೆಯನ್ನು ಸೆಳೆಯುವುದರಿಂದ ೩-೪ ದಿನಗಳಾದ ಮೇಲೆ ಅದು ಒಣಗುತ್ತದೆ. ಒಣಗಿದ ಈರುಳ್ಳಿ ಎಸೆದು ಹೊಸ ಈರುಳ್ಳಿಯನ್ನು ಇಟ್ಟುಕೊಳ್ಳಬೇಕು.

೧೧. ಜಾಗರಣೆ ಮಾಡುವುದರಿಂದ ಶರೀರದಲ್ಲಿನ ಪಿತ್ತ ಮತ್ತು ವಾತ ಈ ದೋಷಗಳು ಹೆಚ್ಚಾಗುತ್ತವೆ. ಆದುದರಿಂದ ಹೆಚ್ಚು ಜಾಗರಣೆ ಮಾಡಬಾರದು. (ಈ ಕಾಳಜಿಯನ್ನು ಎಲ್ಲ ಋತು ಗಳಲ್ಲಿ ತೆಗೆದುಕೊಳ್ಳುವುದು ಆವಶ್ಯಕವಾಗಿದೆ.)

೧ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹಾಗೂ ೬೫ ವರ್ಷಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು ಮೇಲಿನ ಅಂಶಗಳ ಆಧಾರದಲ್ಲಿ ಹೆಚ್ಚು ಕಾಳಜಿ ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೩.೨೦೨೩)