ಪಾಕಿಸ್ತಾನದಲ್ಲಿ ಉಚಿತ ಧಾನ್ಯ ಪಡೆಯಲು ನಡೆದ ಕಾಲ್ತುಳಿತದಲ್ಲಿ ೪ ವೃದ್ಧರ ಸಾವು !

ಇಸ್ಲಾಮಾಬಾದ್ (ಪಾಕಿಸ್ತಾನ) – ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲಿ ಆಹಾರದ ಕೊರತೆ ಎದುರಾಗಿದೆ. ಇದರಿಂದಾಗಿ ಸರಕಾರದಿಂದ ಉಚಿತ ಧಾನ್ಯ ನೀಡಲಾಗುತ್ತಿದೆ; ಆದರೆ ಈ ಧಾನ್ಯ ತೆಗೆದುಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಇದೆರೀತಿ ಪಂಜಾಬ್‌ನಲ್ಲಿ ಉಚಿತ ಧಾನ್ಯವನ್ನು ತೆಗೆದುಕೊಳ್ಳುತ್ತಿದ್ದಾಗ ಉಂಟಾದ ಕಾಲ್ತುಳಿತದಲ್ಲಿ ೪ ಹಿರಿಯ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಮೂರ್ಛೆ ಹೋಗಿದ್ದಾರೆ. ಒಂದು ಕಡೆ ನಾಗರಿಕರನ್ನು ಸಾಲಿನಲ್ಲಿ ನಿಲ್ಲಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ನಾಗರಿಕರು ಸರಕಾರಿ ವಿತರಣಾ ಕೇಂದ್ರಗಳು ಅನಾನೂಕೂಲಕರವಾಗಿದ್ದು, ಕಡಿಮೆ ಆಹಾರ ಧಾನ್ಯಗಳು ಸಿಗುತ್ತಿವೆ ಎಂದು ಆರೋಪಿಸಿದರು.