ಓಮನನಲ್ಲಿ ಹಿಂದೂ ಮಹಿಳೆಯ ಬಹಿರಂಗ ಮತಾಂತರಗೊಳಿಸಿದ ಝಾಕೀರ ನಾಯ್ಕ್

ಭಾರತದಲ್ಲಿ ಮುಸಲ್ಮಾನರ ಮೇಲೆ ಅತ್ಯಾಚಾರಾಗುತ್ತಿದೆ ಎಂಬ ಆರೋಪ !

ಮಸ್ಕತ (ಓಮಾನ) – ಧಾರ್ಮಿಕ ದ್ವೇಷ ಹರಡಿಸುವುದು, ಆರ್ಥಿಕ ದುರುಪಯೋಗಕ್ಕೆ ಸಂಬಂಧಿಸಿದಂತೆ ಭಾರತದಿಂದ ಪರಾರಿಯಾಗಿರುವ ಮತ್ತು ಜಿಹಾದಿ ಭಯೋತ್ಪಾದಕರಿಗೆ ಆದರ್ಶನಾಗಿರುವ ಝಾಕಿರ್ ನಾಯ್ಕ್ ಒಮಾನ್‌ನಲ್ಲಿ ಓರ್ವ ಹಿಂದೂ ಮಹಿಳೆಯನ್ನು ಸಾರ್ವಜನಿಕವಾಗಿ ಮತಾಂತರ ಮಾಡಿದ ಘಟನೆ ಬೆಳಕಿಗೆ ಬಂದಿದೆ.

೧. ಮತಾಂತರ ಮಾಡುವಾಗ ಝಾಕಿರ್‌ನು ಈ ಮಹಿಳೆಗೆ, ದೇವರು ಒಬ್ಬನೇ ಎಂದು ನೀವು ನಂಬುತ್ತೀರಾ ? ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಆರಾಧಿಸಬಾರದು ಎಂದು ನೀವು ನಂಬುತ್ತೀರಾ ? ವಿಗ್ರಹಾರಾಧನೆ ತಪ್ಪು ? ಪ್ರವಾದಿ ಮುಹಮ್ಮದ್‌ನು ಕೊನೆಯ ಪ್ರವಾದಿ ? ಎಂದು ಮಹಿಳೆಗೆ ಪ್ರಶ್ನಿಸಿದಾಗ ಮಹಿಳೆಯು ಈ ಪ್ರಶ್ನೆಗಳಿಗೆ ಹೌದು ಎಂದು ಉತ್ತರಿಸಿದ್ದಳು. ಈ ಮಹಿಳೆಯು ಮತಾಂತರಗೊಂಡ ನಂತರ ಝಾಕಿರ್, ಈಗ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಇಸ್ಲಾಂಗೆ ಮತಾಂತರಿಸುವ ಮಾಧ್ಯಮವಾಗಬೇಕು ಎಂದು ಹೇಳಿದ್ದ.

2. ಝಾಕಿರ್, ಭಾರತದ ಬಹುಸಂಖ್ಯಾತ ಹಿಂದೂಗಳು ನನ್ನನ್ನು ಪ್ರೀತಿಸುತ್ತಾರೆ. ಹಾಗಾಗಿಯೇ ನನ್ನ ಉಪನ್ಯಾಸಗಳನ್ನು ಕೇಳಲು ಸಾವಿರಾರು ಜನ ಬರುತ್ತಾರೆ. ಮತದ ರಾಜಕೀಯದಿಂದ ನನ್ನನ್ನು ಗುರಿ ಮಾಡಲಾಗುತ್ತಿದೆ. ಭಾರತದಲ್ಲಿ ಮುಸಲ್ಮಾನರ ಮೇಲೆ ಅತ್ಯಾಚಾರವಾಗುತ್ತಿದೆ. ಎಂದು ಹೇಳಿದ್ದಾನೆ.

ಝಾಕಿರ್‌ನನ್ನು ಮರಳಿ ಕರೆತರಲು ಭಾರತ ಸರಕಾರದ ಪ್ರಯತ್ನ !

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ ಬಾಗಚಿ ಇವರು, ಝಾಕಿರ್ ನಾಯ್ಕ್ ನನ್ನು ಭಾರತಕ್ಕೆ ಕರೆತರಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಆತ ಭಾರತದಿಂದ ಪರಾರಿಯಾದ ಆರೋಪಿಯಾಗಿದ್ದಾನೆ. ಈ ಪ್ರಕರಣ ಒಮನ್ ಸರಕಾರಕ್ಕೆ ವಿಷಯ ಪ್ರಸ್ತಾಪಿಸಿ ಝಾಕಿರ್ ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.