ಜನರ ಭಾವನೆಗಳನ್ನು ನೋಯಿಸಬಾರದು; ಆದ್ದರಿಂದ, ಕುತುಬ್ ಮಿನಾರ್ ಪ್ರದೇಶದಲ್ಲಿರುವ ದೇವರ ವಿಗ್ರಹಗಳನ್ನು ಸರಿಯಾಗಿ ಇಡಬೇಕು !

ದೆಹಲಿ ನ್ಯಾಯಾಲಯದಿಂದ ಭಾರತೀಯ ಪುರಾತತ್ವ ಇಲಾಖೆಗೆ ಆದೇಶ !

ಕುತುಬ್ ಮಿನಾರ್ ಪ್ರದೇಶದಲ್ಲಿರುವ ದೇವರ ವಿಗ್ರಹಗಳು (ಛಾಯಾಚಿತ್ರದ ಮೇಲೆ ಕ್ಲಿಕ್ ಮಾಡಿ)

ನವದೆಹಲಿ – ಕುತುಬ್ ಮಿನಾರ್ ಪ್ರದೇಶದಲ್ಲಿರುವ ಹಿಂದೂ ದೇವತೆಗಳ ವಿಗ್ರಹಗಳು ಅವಮಾನಕರ ಸ್ಥಿತಿಯಲ್ಲಿವೆ. ಎಂದು ಹಿಂದೂ ಪಕ್ಷವು ಇಲ್ಲಿನ ಸಾಕೇತ್ ನ್ಯಾಯಾಲಯಕ್ಕೆ ತಿಳಿಸಿದ ನಂತರ, ನ್ಯಾಯಾಲಯವು ‘ಜನರ ಭಾವನೆಗಳನ್ನು ನೋಯಿಸಬಾರದು; ಹಾಗಾಗಿ ಮೂರ್ತಿಗಳನ್ನು ಸರಿಯಾಗಿ ಇಡಬೇಕು’, ಎಂದು ಭಾರತೀಯ ಪುರಾತತ್ವ ಇಲಾಖೆಗೆ ಆದೇಶ ನೀಡಿದೆ. ಈ ಸಂದರ್ಬದಲ್ಲಿ ಅರ್ಜಿಯ ಮುಂದಿನ ವಿಚಾರಣೆ ಏಪ್ರಿಲ್ ೨೪ ರಂದು ನಡೆಯಲಿದೆ.

೧. ಹಿಂದೂ ಪಕ್ಷದ ನ್ಯಾಯವಾದಿ (ಪೂ.) ಹರಿಶಂಕರ ಜೈನ್ ಇವರು, ೨೭ ಜೈನ ಮತ್ತು ಹಿಂದೂ ದೇವಸ್ಥಾನಗಳನ್ನು ಕೆಡವಿ ಕುತುಬ್ ಮಿನಾರ್ ನಿರ್ಮಿಸಲಾಗಿದೆ, ಹಾಗಾಗಿಯೇ ಇಲ್ಲಿ ಪೂಜೆ ಸಲ್ಲಿಸುವ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದು ನ್ಯಾಯಾಲಯಕ್ಕೆ ಹೇಳಿದರು.

೨. ಈ ಕುರಿತು ನ್ಯಾಯಾಲಯವು, ‘ನೀವು ಈಗಿರುವ ಕಟ್ಟಡವನ್ನು ಕೆಡವಲು ಬಯಸುವಿರಾ ?’ ಇದನ್ನು ಉದ್ದೇಶಿಸಿ ನ್ಯಾಯವಾದಿ (ಪೂ.) ಜೈನ್ ಇವರು, “ಯಾವುದೇ ಕಟ್ಟಡವನ್ನು ಕೆಡವಲು ನಾವು ನಿರೀಕ್ಷಿಸುವುದಿಲ್ಲ” . ಹಿಂದೂ ಧರ್ಮದ ಪ್ರಕಾರ, ದೇವಸ್ಥಾನದಲ್ಲಿ ದೇವತೆಗಳನ್ನು ಪ್ರತಿಷ್ಠಾಪಿಸಿದರೆ, ಅದು ಯಾವಾಗಲೂ ದೇವಸ್ಥಾನವಾಗಿ ಉಳಿಯುತ್ತದೆ. ಅದಕ್ಕಾಗಿಯೇ ನಾವು ಈ ಪ್ರದೇಶದಲ್ಲಿ ಪೂಜೆ ಮಾಡುವ ನಮ್ಮ ಹಿಂದಿನ ಹಕ್ಕನ್ನು ಕೇಳುತಿದ್ದೇವೆ.’’ ಎಂದು ಹೇಳಿದರು.

೩. ನ್ಯಾಯಾಲಯವು, ‘ಇಲ್ಲಿ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂಬುದಕ್ಕೆ ನಿಮ್ಮ ಬಳಿ ಏನು ಸಾಕ್ಷಿ ಇದೆಯೇ’ ? ಎಂದು ಕೇಳಿದೆ. ಈ ಬಗ್ಗೆ ಪೂ. ಜೈನ್ ಇವರು ಇಲ್ಲಿ ಕಬ್ಬಿಣದ ಕಂಬವಿದೆ ಅದರ ಮೇಲೆ ಸಂಸ್ಕೃತ ಶ್ಲೋಕಗಳನ್ನು ಬರೆಯಲಾಗಿದೆ. ಕಬ್ಬಿಣದ ಕಂಬವು ವಿಷ್ಣುವಿನ ಧ್ವಜವಾಗಿದೆ. ಇಂದಿಗೂ ಕುತುಬ್ ಮಿನಾರ್ ಪ್ರದೇಶದಲ್ಲಿ ದೇವತೆಗಳ ವಿಗ್ರಹಗಳಿವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದನ್ನು ನ್ಯಾಯಾಲಯವು ಏಕೆ ಹೇಳಬೇಕಾಗುತ್ತದೆ ? ಪುರಾತತ್ವ ಇಲಾಖೆಗೆ ಇದು ಏಕೆ ಗಮನಕ್ಕೆ ಬರುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಸದಾ ತುಳಿಯುವ ಪುರಾತತ್ವ ಇಲಾಖೆಯನ್ನು ವಿಸರ್ಜಿಸಿ !