ಇಸ್ರೈಲ್ ಸರಕಾರ ಜನರ ವಿರೋಧವನ್ನು ಲೆಕ್ಕಿಸದೇ ನ್ಯಾಯವ್ಯವಸ್ಥೆಗೆ ಸಂಬಂಧಿಸಿದ ಕಾನೂನಿಗೆ ಅನುಮೋದನೆ

ಈಗ ನೇತನ್ಯಾಹೂ ಇವರ ವಿರುದ್ಧದ ಮೊಕದ್ದಮೆ ನಡೆಯುವ ವರೆಗೆ ಹುದ್ದೆಯಲ್ಲಿ ಮುಂದುವರಿಯಬಹುದು

(ಎಡದಲ್ಲಿ) ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹೂ

ತೆಲ್ ಅವಿವ – ನ್ಯಾಯ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಕಾಯಿದೆಯನ್ನು ಇಸ್ರೈಲ್ ನ ನ್ಯಾಯ ಮಂಡಳಿಯು ಮಾರ್ಚ 23 ರಂದು 61 ಸದಸ್ಯರ ವಿರುದ್ಧ 47 ಮತಗಳಿಂದ ಅನುಮೋದಿಸಿದೆ. ಈ ಕಾಯಿದೆಯಿಂದ ಈಗ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹೂ ಇವರಿಗೆ ಅವರ ವಿರುದ್ಧದ ಭ್ರಷ್ಟಾಚಾರ ಮೊಕದ್ದಮೆ ನಡೆಯುವವರೆಗೆ ಹುದ್ದೆಯಲ್ಲಿ ಮುಂದುವರಿಯಬಹುದಾಗಿದೆ. ಈ ಕಾಯಿದೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ನೇತನ್ಯಾಹು ಸರಕಾರವು ಈ ವಿರೋಧವನ್ನು ಲೆಕ್ಕಿಸದೇ ಕಾನೂನು ಜಾರಿಗೊಳಿಸಿದೆ. ಪ್ರಧಾನಮಂತ್ರಿಯಾದ ಬಳಿಕ ನೇತನ್ಯಾಹು ಇವರು ತಮ್ಮ ಹುದ್ದೆಗೆ ಅಡ್ಡಿಯಾಗಿದ್ದ ಕಾಯಿದೆಯನ್ನು ಬದಲಾಯಿಸುವ ಘೋಷಣೆ ಮಾಡಿದ್ದರು.

`ನೇತನ್ಯಾಹು ಸರಕಾರದ ಹೊಸ ಧೋರಣೆ ದೇಶದ ಪ್ರಜಾಪ್ರಭುತ್ವಗಳ ಮೌಲ್ಯವನ್ನು ನಷ್ಟಗೊಳಿಸುವಂತಹದ್ದಾಗಿದೆ’, ಎಂದು ಇಸ್ರೈಲ್ ಪ್ರಜಾಪ್ರಭುತ್ವವಾದಿ ಮುಖಂಡರು ಟೀಕಿಸಿದ್ದಾರೆ.