ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಲ್ಲಿ ಮನವಿ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ ಇವರಿಂದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೆ ಮನವಿ

ಮುಂಬಯಿ, ಮಾರ್ಚ್ ೨೩ (ವಾರ್ತೆ) – ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಕೋಟ್ಯಾಂತರ ರೂಪಾಯಿಯ ಭ್ರಷ್ಟಾಚಾರದ ಪ್ರಕರಣ ಮುಚ್ಚಿ ಹಾಕುವ ಸರಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಹಾಗೂ ದೇವಸ್ಥಾನದಲ್ಲಿ ಭ್ರಷ್ಟಾಚಾರ ನಡೆಸಿದ ತಪ್ಪಿತಸ್ತರ ಮೇಲೆ ದೂರು ದಾಖಲಿಸಿ ತನಿಖಾ ಇಲಾಖೆಯಿಂದ (‘ಸಿ ಐಡಿ’ಯ) ವರದಿಯ ಪ್ರಕಾರ ದೂರು ದಾಖಲಿಸಬೇಕು, ಈ ಬೇಡಿಕೆಗಳ ಮನವಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ರಾಜ್ಯದ ಸಂಘಟಕ ಶ್ರೀ. ಸುನಿಲ ಘನವಟ ಇವರು ಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೆ ನೀಡಿದರು. ಈ ಸಮಯದಲ್ಲಿ ಮುಖ್ಯಮಂತ್ರಿಗಳ ಜೊತೆ ಶಿವಸೇನೆಯ ಪಕ್ಷದ ಪ್ರತೋದ ಭಾರತಶೇಠ ಗೊಗಾವಲೆ, ಮಾಜಿ ಸಚಿವ ಮಹಾದೇವ ಜಾನಕರ ಇವರು ಸಹ ಉಪಸ್ಥಿತರಿದ್ದರು. ಈ ಪ್ರಕರಣದ ಗಾಂಭೀರ್ಯ ಗಮನಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಈ ಪ್ರಕರಣದ ಎಲ್ಲ ಮಾಹಿತಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೆ ಮನವಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ (ಎಡಬದಿಗೆ), (ಬಲಬದಿಗೆ) ಶಿವಸೇನೆಯ ಪಕ್ಷದ ಪ್ರತೋದ ಭಾರತಶೇಠ ಗೊಗಾವಲೆ

ಈ ಸಮಯದಲ್ಲಿ ಖಾಸಗಿ ಬಸ್ಸಿನ ಸ್ಥಳೀಯ ಟಿಕೆಟ್ ಮಾರಾಟಗಾರರು ಹಾಗೂ ಆನ್ಲೈನ್ ನಲ್ಲಿ ನಿಯಮ ಉಲ್ಲಂಘಿಸಿ ಹೆಚ್ಚಿನ ಬೆಲೆಯ ಟಿಕೆಟದರ ನಿಯಂತ್ರಣ ಮಾಡಬೇಕು, ಈ ಬೇಡಿಕೆಯ ಮನವಿ ಕೂಡ ನೀಡಿದರು. ಇದರ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.