ನವದೆಹಲಿ – ಹಿಂದೂ ಧರ್ಮದಲ್ಲಿ ಬೇರೆ ಬೇರೆ ಹಬ್ಬಗಳ ಸಮಯದಲ್ಲಿ, ವ್ರತಗಳ ಸಮಯದಲ್ಲಿ ಅಥವಾ ಇತರ ಸಮಯದಲ್ಲಿ ಉಪವಾಸ ಮಾಡಲಾಗುತ್ತದೆ. ಮುಸಲ್ಮಾನರಲ್ಲಿ ಕೂಡ ರಮಜಾನ್ ಸಮಯದಲ್ಲಿ ಉಪವಾಸ ಮಾಡಲಾಗುತ್ತದೆ. ಉಪವಾಸದಿಂದ ಶರೀರಕ್ಕೆ ಅನೇಕ ಲಾಭವಾಗುತ್ತದೆ, ಎಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ‘ಹಾರ್ವರ್ಡ್ ಮೆಡಿಕಲ್ ಸ್ಕೂಲ್’ ನ ಡಾಕ್ಟರ ಮತ್ತು ವಿಜ್ಞಾನಿಗಳು, ಉಪವಾಸದಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆ ಆಗುತ್ತದೆ, ನಂತರ ಶರೀರದಲ್ಲಿನ ಮೊದಲಿನಿಂದಲೂ ಇರುವ ಕೊಬ್ಬು ಅದನ್ನು ಶಕ್ತಿ ಉಪಯೋಗಿಸಲು ಆರಂಭಿಸುತ್ತದೆ. ಅದರ ಸಹಾಯದಿಂದ ಶರೀರದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶ ಕಡಿಮೆ ಆಗುತ್ತದೆ. ಇದರಿಂದ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ ಎಂಬ ತೀರ್ಮಾನಕ್ಕೆ ಬಂದರು.
ವಿಜ್ಞಾನಿಗಳು, ಉಪವಾಸ ಮಾಡುವಾಗ ಯಾವಾಗ ಮತ್ತು ಎಷ್ಟು ತಿನ್ನಬೇಕು ? ಇದರ ಮೇಲೆ ನಿಯಂತ್ರಣ ಇಡಬೇಕಾಗಬಹುದು. ದಿನದಲ್ಲಿ ಕೆಲವು ಸಮಯ ತಿನ್ನಬೇಕು ಮತ್ತು ಕೆಲವು ಸಮಯ ಉಪವಾಸವಿರಬೇಕು, ಯಾವುದೇ ಉಪವಾಸ ಮಾಡುವಾಗ ವೈದ್ಯರ ಸಲಹೆ ಪಡೆಯಬೇಕು, ಎಂದು ಕೂಡ ಅವರು ಹೇಳಿದ್ದಾರೆ.
* ವಿಜ್ಞಾನಿಗಳ ಗಮನಕ್ಕೆ ಬಂದಿರುವ ಉಪವಾಸದ ಲಾಭಗಳು
* ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
* ಹೃದಯದ ಗತಿ ಯೋಗ್ಯವಾಗಿರುತ್ತದೆ.
* ಇನ್ಸುಲಿನ್ ನಿಯಂತ್ರಣದಲ್ಲಿರುತ್ತದೆ.
* ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
* ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ.
* ಬೇಡವಾದ ಕೊಬ್ಬು ಕರಗಲು ಸಹಾಯವಾಗುತ್ತದೆ.
* ಜ್ಞಾಪಕ ಶಕ್ತಿ ಸುಧಾರಿಸುತ್ತದೆ.