ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವಿದ್ಯಾರ್ಥಿನಿ ಮತ್ತು ಶಿಕ್ಷಕಿಯರಿಗೆ ಹಿಜಾಬ್ ಅನಿವಾರ್ಯ !

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುಲು ಉಪಯೋಗಿಸುವ ವಸ್ತ್ರ)

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ರಕರ್ತರಿಂದ ವಿರೋಧ

ಇಸ್ಲಾಮಾಬಾದ – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿ ಶಾಲೆಯಲ್ಲಿನ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಹಿಜಾಬ್ ಧರಿಸುವುದು ಅನಿವಾರ್ಯಗೊಳಿಸಿದೆ.

‘ಗ್ಲೋಬಲ್ ಸಿಟಿಝನ್ಸ್’ ಈ ಸ್ವಯಂ ಸೇವಕ ಸಂಸ್ಥೆಯ ಅಭಿಪ್ರಾಯದ ಪ್ರಕಾರ, ‘ಈ ನಿರ್ಧಾರದಿಂದಾಗಿ ಹಿಂದುಳಿದ ಕ್ಷೇತ್ರದಲ್ಲಿನ ಹುಡುಗಿಯರ ಮೇಲೆ ಶಿಕ್ಷಣದ ಬಗ್ಗೆ ಇನ್ನೂ ಹೆಚ್ಚು ಕೆಟ್ಟ ಪರಿಣಾಮ ಬೀರಬಹುದು.’ ‘ಹಿಜಾಬ್ ಧರಿಸದೆ ಬರುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು’, ಸರಕಾರ ಹೇಳಿದೆ. ಈ ನಿರ್ಧಾರದ ಬಗ್ಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

೧. ‘ಪಾಕಿಸ್ತಾನಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಸ್ತಿತ್ವವೇ ಮುಗಿಸುವುದಿದೆ, ಅದಕ್ಕಾಗಿ ಪಾಕಿಸ್ತಾನ ಸರಕಾರವು ಅದನ್ನು ಇಸ್ಲಾಮಿಕರಣ ಮಾಡುವ ಪ್ರಯತ್ನ ಮಾಡುತ್ತಿದೆ. ಇದರದೇ ಒಂದು ಭಾಗವೆಂದು ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಹಿಜಾಬ್ ಧರಿಸುವುದು ಅನಿವಾರ್ಯಗೊಳಿಸಿದೆ’, ಎಂದು ಕೆಲವು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯವಾಗಿದೆ.

೨. ‘ಪಾಕಿಸ್ತಾನವ ಆಕ್ರಮಿತ ಕಾಶ್ಮೀರದ ವಂಶಜರ ಮತ್ತು ಭಾಷೆಯ ಅಸ್ತಿತ್ವ ಮುಗಿಸುವ ಪ್ರಯತ್ನ ಮಾಡುತ್ತಿದ್ದು ಅದನ್ನು ತಡೆಯುವುದಕ್ಕಾಗಿ ಸ್ಥಳೀಯ ಜನರು ಬಲವಾಗಿ ವಿರೋಧ ಮಾಡುವ ಅವಶ್ಯಕತೆ ಇದೆ’, ಎಂದು ಸ್ಥಳೀಯರ ಹೇಳಿಕೆಯಾಗಿದೆ.

೩. ಒಂದು ಪ್ರಸಾರ ಮಾಧ್ಯಮದ ವಾರ್ತೆಯ ಪ್ರಕಾರ, ಮಾರ್ಚ್ ೧ ರಿಂದ ಪಾಕಿಸ್ತಾನದಲ್ಲಿ ಮೊದಲ ಡಿಜಿಟಲ್ ಜನಗಣತಿ ಪ್ರಾರಂಭವಾಗಿದೆ. ಈ ಹಿಂದೆ ಪಾಕಿಸ್ತಾನ ಸರಕಾರದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ‘ಡಿಜಿಟಲ್’ ಗುರುತಿನ ಚೀಟಿ ನೀಡಿದ್ದರು. ಈ ಗುರುತಿನ ಚೀಟಿಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜನರಿಗೆ ‘ಜಮ್ಮು-ಕಾಶ್ಮೀರದ ಮಾಜಿ ನಾಗರಿಕರು’ ಎಂದು ಗುರುತು ನೀಡಲಾಗಿತ್ತು. ಈ ಗುರುತು ಈಗ ಅಳಿಸಲಾಗಿದೆ.

೪. ಹಿಂದಿನ ಜನಗಣತಿಯ ದಾಖಲೆಯಲ್ಲಿ ಸ್ಥಳೀಯ ಭಾಷೆಯ ಬಗ್ಗೆ ಇಲಾಖೆ ಇತ್ತು. ಆ ಇಲಾಖೆ ಈಗ ತೆಗೆದುಹಾಕಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರ ಸ್ವಾತಂತ್ರ್ಯದ ಗುರುತು ಅಳಿಸುವುದಕ್ಕಾಗಿ ಪಾಕಿಸ್ತಾನ ಸರಕಾರದಿಂದ ಈ ಚಟುವಟಿಕೆ ನಡೆಸಲಾಗುತ್ತಿದೆ.