‘ಮತಾಂಧರು ಸುಧಾರಿಸದಿದ್ದರೆ ಈ ಸಭೆಯ ಮೂಲಕ ಖಂಡಿಸಬೇಕಾಗಬಹುದು – ನ್ಯಾಯವಾದಿ ಅಮೃತೇಶ ಎನ್.ಪಿ., ಬೆಂಗಳೂರು ಉಚ್ಚ ನ್ಯಾಯಾಲಯ

ಮಂಗಳೂರಿನಲ್ಲಿ ವಿರೋಧದ ನಡುವೆಯೂ ಯಶಸ್ವಿಯಾಗಿ ಸಂಪನ್ನಗೊಂಡ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಮಂಗಳೂರಿನಲ್ಲಿ ನೆರವೇರಿದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ವೇದಿಕೆಯಲ್ಲಿ ಆಸೀನರಾದ (ಎಡದಿಂದ) ಸೌ. ಲಕ್ಷ್ಮೀ ಪೈ, ನ್ಯಾಯವಾದಿ ಅಮೃತೇಶ ಎನ್.ಪಿ, ಶ್ರೀ. ದಿನೇಶ ಜೈನ್ ಹಾಗೂ ಶ್ರೀ. ಗುರುಪ್ರಸಾದ ಗೌಡ

‘ಮತಾಂಧರು ಇನ್ನೂ ಸುಧಾರಿಸಿಕೊಳ್ಳದಿದ್ದರೆ ಈ ಸಭೆಯ ಮುಖಾಂತರ ಸಂಘಟನೆಯನ್ನು ಖಂಡಿಸಬೇಕಾಗಬಹುದು. ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಮುಖಾಂತರ ನಾವು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನುಬದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಎಲ್ಲ ಹಿಂದೂಗಳು ಹಿಂದುತ್ವದ ಅಡಿಯಲ್ಲಿ ಒಟ್ಟಾಗುವುದು ಇಂದು ಅತ್ಯಗತ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಕರೆ ನೀಡಿದರು. ಅವರು ೧೨ ಮಾರ್ಚ್ ೨೦೨೩ ರ ಸಾಯಂಕಾಲ ೫ ಗಂಟೆಗೆ ಮಂಗಳೂರಿನ ಕದ್ರಿ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಈ ಸಭೆಯ ವೇದಿಕೆಯ ಮೇಲೆ ಸಾಮಾಜಿಕ ಹೋರಾಟಗಾರ ಶ್ರೀ. ದಿನೇಶ ಜೈನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಹಾಗೂ ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಉಪಸ್ಥಿತರಿದ್ದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ  ಪೂ. ರಮಾನಂದ ಗೌಡ, ಸನಾತನದ ಸಂತರಾದ ಪೂ. ವಿನಾಯಕ ಕರ್ವೆ ಹಾಗೂ ಪೂ. ರಾಧಾ ಪ್ರಭು ಹಾಗೂ ಸನಾತನದ ಮೊದಲನೆಯ ಬಾಲಕಸಂತರಾದ ಪೂ. ಭಾರ್ಗವರಾಮ ಪ್ರಭು ಇವರ ದಿವ್ಯ ಉಪಸ್ಥಿತಿಯಿತ್ತು. ಈ ಸಭೆಯಲ್ಲಿ ೧ ಸಾವಿರಕ್ಕೂ ಹೆಚ್ಚು ಹಿಂದೂಗಳು ಭಾಗವಹಿಸಿದರು. ಅಲ್ಲದೇ ಆನ್‌ಲೈನ್ ಮೂಲಕ ೨,೫೦೦ ಕ್ಕೂ ಹೆಚ್ಚು ಹಿಂದೂಗಳು ಈ ಸಭೆಯನ್ನು ವೀಕ್ಷಿಸಿದ್ದಾರೆ.

‘ಎಲ್ಲ ಹಿಂದೂಗಳು ಕೇವಲ ಜನ್ಮ ಹಿಂದೂಗಳಲ್ಲ, ಕರ್ಮ ಹಿಂದೂಗಳಾಗಬೇಕಾಗಿದೆ – ಶ್ರೀ. ದಿನೇಶ ಜೈನ್

ಎಲ್ಲ ಹಿಂದೂಗಳು ಜಾತಿ, ಮತ, ಸಂಪ್ರದಾಯ, ಸಂಘಟನೆಗಳ ಹೆಸರನ್ನು ಮರೆತು, ಏಕಮನಸ್ಕರಾಗಿ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಒಟ್ಟಾಗಬೇಕಾಗಿದೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಯಾವುದೇ ರಾಜಕೀಯ ಪಕ್ಷದಿಂದ ಸಾಧ್ಯವಿಲ್ಲ, ಸಂಘಟಿತ ಹಿಂದೂಗಳೇ ಈ ಮಹಾನ್ ಕಾರ್ಯವನ್ನು ಮಾಡಬಲ್ಲರು, ಅದಕ್ಕಾಗಿ ಎಲ್ಲಾ ಹಿಂದೂಗಳು ಕೇವಲ ಜನ್ಮ ಹಿಂದುಗಳಲ್ಲ; ಕರ್ಮಹಿಂದೂಗಳಾಗಬೇಕಾಗಿದೆ.

ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು :  ಕದ್ರಿ ವಾರ್ಡ್‌ನ ನಗರ ಪಾಲಿಕೆ ಸದಸ್ಯ ಶ್ರೀ. ಮನೋಹರ್ ಶೆಟ್ಟಿ, ಪದವು ಸೆಂಟ್ರಲ್ ವಾರ್ಡನ  ನಗರಸಭಾ ಸದಸ್ಯ ಶ್ರೀ. ಕಿಶೋರ್ ಕೊಟ್ಟಾರಿ, ಯೋಗಗುರು ಶ್ರೀ. ಜಗದೀಶ, ಡಾ. ಆಶಾ ಜ್ಯೋತಿ ರೈ, ಹಿಂದೂ ಯುವ ಸೇನೆಯ ಶ್ರೀ. ಭಾಸ್ಕರಚಂದ್ರ ಶೆಟ್ಟಿ, ಉದ್ಯಮಿ ಶ್ರೀ. ಗಣೇಶ ಬಾಳಿಗ, ಹಿಂದೂ ಜಾಗರಣ ವೇದಿಕೆ ಸುರತ್ಕಲ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವೇಶ್ವರಿ, ಸ್ಪಂದನ ಸಂಘಟನೆ ಸುರತ್ಕಲ್, ವೀರಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ, ವಿಶ್ವ ಹಿಂದೂ ಪರಿಷತ್ ಬೆಂಗ್ರೆ, ಕೇಸರಿ ತತ್ವ ಬಳಗ ಸುರತ್ಕಲ್, ತುಳುನಾಡ ಸೇನೆಯ ಸೌ. ಜ್ಯೋತಿ ಮುಂತಾದ ಗಣ್ಯರ ಹಾಗೂ ಸಂಘಟನೆಗಳ ಉಪಸ್ಥಿತಿ ಇತ್ತು.