ಪಾಕಿಸ್ತಾನ ಜಮ್ಮು-ಕಾಶ್ಮೀರವನ್ನು ತನ್ನ ನಕ್ಷೆಯಲ್ಲಿ ತೋರಿಸಿದ್ದರಿಂದ ಭಾರತ ಪಾಕಿಸ್ತಾನವನ್ನು ಸಭೆಯಿಂದ ಹೊರಗಟ್ಟಿತು !

ನವ ದೆಹಲಿಯಲ್ಲಿ ಶಾಂಘೈ ಮಹಾಮಂಡಳಿಯ ಸಭೆಯಲ್ಲಿನ ಘಟನೆ !

ನವ ದೆಹಲಿ – ಪಾಕಿಸ್ತಾನವು ಭಾರತದ ತಪ್ಪಾದ ನಕ್ಷೆ ತೋರಿಸಿರುವುದರಿಂದ ಭಾರತವು ಶಾಂಘೈ ಮಹಾ ಮಂಡಳದ ಸಭೆಯಿಂದ ಪಾಕಿಸ್ತಾನವನ್ನು ಹೊರಹೋಗುವಂತೆ ಹೇಳಿತು. ಈ ಮಹಾಮಂಡಳದ ಹೋಸ್ಟಿಂಗ್ ಭಾರತದ ಬಳಿ ಇದೆ. ಈ ಮಹಾಮಂಡಳದ ‘ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್’, ಈ ಸಂಸ್ಥೆಯಿಂದ ಈ ಸಭೆಯ ಆಯೋಜನೆ ಮಾಡಲಾಗಿತ್ತು.

ಈ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಮಂಡಳಿಯೂ ಉಪಸ್ಥಿತವಿತ್ತು. ಈ ಸಭೆಯ ಸಮಯದಲ್ಲಿ ಪಾಕಿಸ್ತಾನದ ನಕ್ಷೆಯಲ್ಲಿ ಜಮ್ಮು ಕಾಶ್ಮೀರದ ಭಾಗ ತೋರಿಸಲಾಗಿತ್ತು. ಈ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿ, ‘ಈ ಸಭೆಯಲ್ಲಿ ಭಾಗವಹಿಸುವುದಿದ್ದರೆ, ಯೋಗ್ಯವಾದ ನಕ್ಷೆ ತೋರಿಸಿ ಇಲ್ಲದಿದ್ದರೇ ಸಭೆಯಿಂದ ಹೊರ ಹೋಗಿ’, ಎಂದು ಚಾಟಿ ಬೀಸಿತು. ಅದರ ನಂತರ ಪಾಕಿಸ್ತಾನ ಈ ಸಭೆಯಿಂದ ಹೊರ ನಡೆಯಿತು.

ಸಂಪಾದಕರ ನಿಲುವು

* ಸಭೆಗಾಗಿ ಭಾರತಕ್ಕೆ ಬರುವಾಗ ಕೂಡ ಈ ರೀತಿಯ ಧೈರ್ಯ ಮಾಡುವ ಪಾಕಿಸ್ತಾನವನ್ನು ಕೇವಲ ಸಭೆಯಿಂದ ಅಷ್ಟೇ ಅಲ್ಲದೆ ಅದನ್ನು ಮಹಾಮಂಡಳದ ಸದಸ್ಯಸ್ಥಾನದಿಂದ ಕೂಡ ಹೊರಹಾಕಬೇಕು !