ಲಂಡನನಲ್ಲಿ ರಾಯಭಾರಿ ಕಚೇರಿಯ ಮೇಲಿನ ಇಳಿಸಿದ್ದ ಭಾರತೀಯ ಧ್ವಜ ಪ್ರಕರಣ
ಅಮೃತಸರ (ಪಂಜಾಬ) – ಲಂಡನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ರಾಷ್ಟ್ರಧ್ವಜ ಇಳಿಸಿ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಖಲಿಸ್ತಾನಿ ಅವತಾರ ಸಿಂಹ ಖಾಂಡಾನನ್ನು ಬಂಧಿಸಿದ್ದಾರೆ. ಖಾಂಡಾನು ನಿಷೇಧಿತ ‘ಬಬ್ಬರ ಖಾಲಸ ಇಂಟರ್ನ್ಯಾಷನಲ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದಾನೆ. ಜೊತೆಗೆ ಆತ ‘ಖಲಿಸ್ತಾನಿ ಲಿಬರೇಶನ್ ಫೋರ್ಸ್’ಗೆ ಸಂಬಂಧ ಹೊಂದಿರುವ ಕುವಂತ ಸಿಂಹ ಖುರಾಣಾನ ಮಗನಾಗಿದ್ದಾನೆ. ಖಾಂಡಾ ಇವನು ಪಾಕಿಸ್ತಾನದಲ್ಲಿ ಅಡಗಿರುವ ‘ಖಲಿಸ್ತಾನ ಲಿಬ್ರೇಶನ್ ಫೋರ್ಸ್’ನ ಮುಖ್ಯ ಸದಸ್ಯನಾಗಿರುವ ಪರಮಜೀತ ಸಿಂಹ ಪಮ್ಮಾ ಇವನ ಆಪ್ತನಾಗಿದ್ದಾನೆ. ಪಮ್ಮಾನ ಆದೇಶದಂತೆ ಅವತಾರ ಸಿಂಹ ಚಟುವಟಿಕೆ ಮಾಡುತ್ತಾನೆ.
READ: Avtar Singh Khanda, who targeted Indian mission in UK, ‘groomed’ Amritpal
@78vbhatiahttps://t.co/OJvl6qY4Fd— Express Punjab (@iepunjab) March 22, 2023
ಪಮ್ಮಾನ ಹೇಳಿಕೆಯ ಮೇರೆಗೆ ಖಾಂಡಾನು ಅಮೃತಪಾಲ ಸಿಂಹನನ್ನು ಪಂಜಾಬದಲ್ಲಿನ ಖಲಿಸ್ತಾನಿ ಚಳವಳಿಗಾಗಿ ಸಿದ್ಧಗೊಳಿಸಿದನು. ಅದರ ನಂತರ ಜಾರ್ಜಿಯಾದಲ್ಲಿ ಅಮೃತಪಾಲ ಸಿಂಹ ಇವನಿಗೆ ತರಬೇತಿ ನೀಡಲಾಯಿತು. ಈ ತರಬೇತಿಗಾಗಿ ‘ಸಿಖ್ ಫಾರ್ ಜಸ್ಟಿಸ್’ನ ಮುಖಂಡ ಗುರುಪತವಂತ ಸಿಂಹ ಪನ್ನು ಇವನ ಬೆಂಬಲ ಕೂಡ ದೊರೆಯಿತು. ಅವನು ಇತರರ ಎದುರು ತನ್ನನ್ನು ತಾನು ಧಾರ್ಮಿಕ ಗುರು ಎಂದು ತೋರಿಸಲು ಸಾಧ್ಯವಾಗಬಹುದು ಎಂದು ಅಮೃತಪಾಲನು ಇಲ್ಲಿ ಸಿಖ್ಕ ಧರ್ಮದಲ್ಲಿನ ಅವಶ್ಯಕ ವಿಷಯ ತಿಳಿದುಕೊಂಡನು. ಶ್ರೀ ಗುರು ಗ್ರಂಥ ಸಾಹಿಬ್ ಬಗ್ಗೆ ಜ್ಞಾನ ಪಡೆದನು.