ವ್ಯಕ್ತಿಯ ಮುಖದ ಮೇಲಿನ ಬದಲಾಗುವ ಹಾವಭಾವಗಳಿಗನುಸಾರ ಅವರಿಂದ ಪ್ರಕ್ಷೇಪಿಸುವ ಸ್ಪಂದನಗಳಲ್ಲಿಯೂ ಬದಲಾವಣೆಯಾಗುವುದು

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

“ವ್ಯಕ್ತಿಯ ಸ್ಪಂದನಗಳು ಮೂಲದಲ್ಲಿ ಅವರ ಆಧ್ಯಾತ್ಮಿಕ ಮಟ್ಟ, ಅವರಿಗೆ ಆಧ್ಯಾತ್ಮಿಕ ತೊಂದರೆಗಳು ಇರುವುದು ಅಥವಾ ಇಲ್ಲದಿರುವುದು, ಅವರ ಸಾಧನೆ ಇತ್ಯಾದಿ ಅನೇಕ ಘಟಕಗಳನ್ನು ಅವಲಂಬಿಸಿರುತ್ತದೆ. ವ್ಯಕ್ತಿಯ ಮುಖ, ವಿಶೇಷವಾಗಿ ಅವರ ಕಣ್ಣುಗಳಲ್ಲಿನ ಭಾವಗಳು ಅವರ ಮನಸ್ಸಿನ ಕನ್ನಡಿ ಆಗಿರುತ್ತವೆ. ಅವರ ಮನಸ್ಸಿನಲ್ಲಿನ ವಿಚಾರಗಳ ಪ್ರತಿಬಿಂಬವು ಅವರ ಮುಖದ ಹಾವಭಾವದ ರೂಪದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಉದಾ. ವ್ಯಕ್ತಿಗೆ ಸಿಟ್ಟು ಬಂದರೆ ಅವರ ಮುಖದ ಮೇಲೆ ಕೋಪ ಕಾಣಿಸುತ್ತದೆ, ಹಾಗೆಯೇ ಅವರ ಕಣ್ಣುಗಳಿಂದ ಅವರ ಮನಸ್ಸಿನಲ್ಲಿನ ಸಿಟ್ಟು ವ್ಯಕ್ತವಾಗುತ್ತದೆ. ತದ್ವಿರುದ್ಧ ವ್ಯಕ್ತಿಯು ಆನಂದದಿಂದಿದ್ದರೆ ಅವರ ಮುಖದಲ್ಲಿ ಆನಂದ ಕಾಣಿಸುತ್ತದೆ ಮತ್ತು ಕಣ್ಣುಗಳಿಂದ ಸಹ ಆನಂದವು ವ್ಯಕ್ತವಾಗುತ್ತದೆ.

ಸೌ. ಮಧುರಾ ಧನಂಜಯ ಕರ್ವೆ

‘ವ್ಯಕ್ತಿಯ ಮುಖದ ಮೇಲಿನ ಹಾವಭಾವ ಬದಲಾದರೆ, ಅವರಿಂದ ಪ್ರಕ್ಷೇಪಿಸುವ ಸ್ಪಂದನಗಳಲ್ಲಿ ಯಾವ ಬದಲಾವಣೆಯಾಗುತ್ತದೆ ?, ಎಂಬುದನ್ನು ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಒಂದು ಪರೀಕ್ಷಣೆಯನ್ನು ಮಾಡಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

ಕು. ಸೋನಲ್ ಜೋಶಿ (ಆನಂದದ ಹಾವಭಾವವಿಲ್ಲದ)
ಕು. ಸೋನಲ್ ಜೋಶಿ (ಆನಂದದ ಹಾವಭಾವವಿರುವ)

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ 

ಈ ಪ್ರಯೋಗದಲ್ಲಿ ಆಧ್ಯಾತ್ಮಿಕ ತೊಂದರೆ ಇರುವ ಇಬ್ಬರು ಸಾಧಕಿಯರು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಇಬ್ಬರು ಸಾಧಕಿಯರ ಆನಂದದ ಹಾವಭಾವ ಇರದ ಮತ್ತು ಆನಂದದ ಹಾವಭಾವ ಇರುವ ಛಾಯಾಚಿತ್ರಗಳನ್ನು ತೆಗೆದು ‘ಯು.ಎ.ಎಸ್. ಉಪಕರಣದಿಂದ ಅವುಗಳ ಪರೀಕ್ಷಣೆಯನ್ನು ಮಾಡಲಾಯಿತು.

೧ ಅ. ಆಧ್ಯಾತ್ಮಿಕ ತೊಂದರೆ ಇರುವ ಮತ್ತು ತೊಂದರೆ ಇಲ್ಲದ ಸಾಧಕಿಯರ ಆನಂದದ ಹಾವಭಾವವಿರುವ ಛಾಯಾಚಿತ್ರಗಳಿಂದ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಣೆಯಾಗುವುದು : ಈ ನಾಲ್ಕೂ ಸಾಧಕಿಯರ ಆನಂದದ ಹಾವಭಾವ ಇಲ್ಲದ ಛಾಯಾಚಿತ್ರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಮತ್ತು ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಗಳು ಕಂಡು ಬಂದವು. ತದ್ವಿರುದ್ಧ ಅವರ ಆನಂದದ ಹಾವಭಾವ ಇರುವ ಛಾಯಾಚಿತ್ರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.

ಇದು ಮುಂದೆ ಕೊಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ವ್ಯಕ್ತಿಯ ಮನಸ್ಸಿನ ಸ್ಥಿತಿಯಲ್ಲಿ ಬದಲಾವಣೆಯಾದರೆ ಅವರ ಮುಖದ ಮೇಲಿನ ಹಾವಭಾವವು ತಾನಾಗಿಯೇ ಬದಲಾವಣೆಯಾಗುತ್ತದೆ : ದೈನಂದಿನ ಜೀವನದಲ್ಲಿ ವ್ಯಕ್ತಿಗೆ ಪ್ರತಿದಿನ ವಿವಿಧ ಪ್ರಸಂಗಗಳನ್ನು ಅಥವಾ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಕಠಿಣ ಪ್ರಸಂಗಗಳಲ್ಲಿ ಅವರಿಗೆ ಸ್ಥಿರವಾಗಿರಲು ಸಾಧ್ಯವಾಗದಿರುವುದರಿಂದ ಅವರು ದುಃಖಿ ಅಥವಾ ನಿರುತ್ಸಾಹಿಯಾಗುತ್ತಾರೆ. ತದ್ವಿರುದ್ಧ ಕೆಲವು ಸುಖದಾಯಕ ಪ್ರಸಂಗಗಳು ಘಟಿಸಿದರೆ, ಅವರಿಗೆ ಆನಂದವಾಗುತ್ತದೆ. ಸ್ವಲ್ಪದರಲ್ಲಿ ಹೇಗೆ ಅವರ ಮನಸ್ಸಿನ ಸ್ಥಿತಿ ಬದಲಾಗುತ್ತದೆಯೋ, ಹಾಗೆ ಅವರ ಮುಖದ ಮೇಲಿನ ಹಾವಭಾವಗಳೂ ತಾನಾಗಿಯೇ ಬದಲಾಗುತ್ತವೆ. ಅವರ  ಬದಲಾದ ಹಾವಭಾವಗಳಿಗನುಸಾರ ಅವರಿಂದ ವಾತಾವರಣದಲ್ಲಿ ಅಂತಹ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಅವರಿಂದ ಪ್ರಕ್ಷೇಪಿಸುವ ಒಳ್ಳೆಯ ಅಥವಾ ತೊಂದರೆದಾಯಕ ಸ್ಪಂದನಗಳ ಪರಿಣಾಮ ಅವರ ಸುತ್ತಮುತ್ತಲೂ ಆಗುತ್ತದೆ, ಉದಾ. ಯಾವುದಾದರೊಬ್ಬ ದುಃಖಿ ಅಥವಾ ನಿರುತ್ಸಾಹಿ ವ್ಯಕ್ತಿಯ ಕಡೆಗೆ ನೋಡಿದರೆ ನಮ್ಮ ಮನಸ್ಸಿಗೆ ಒಳ್ಳೆಯದೆನಿಸುವುದಿಲ್ಲ. ತದ್ವಿರುದ್ಧ ಉತ್ಸಾಹಿ ಅಥವಾ ಆನಂದಿ ವ್ಯಕ್ತಿಯನ್ನು ನೋಡಿದಾಗ ನಮಗೆ ಒಳ್ಳೆಯದೆನಿಸುತ್ತದೆ.

೨ ಆ. ಸತತವಾಗಿ ಆನಂದದಲ್ಲಿ ಇರುವುದರ ಮಹತ್ವವನ್ನು ಗಮನದಲ್ಲಿಡಿ ! : ವ್ಯಕ್ತಿಯ ಸ್ಪಂದನಗಳು ಅವರ ಛಾಯಾಚಿತ್ರದಿಂದ ಪ್ರಕ್ಷೇಪಿಸುತ್ತವೆ. ಯಾವಾಗಲೂ ‘ಕ್ಯಾಮೆರಾದಿಂದ (ಛಾಯಾಚಿತ್ರಕದಿಂದ) ಛಾಯಾಚಿತ್ರವನ್ನು ತೆಗೆಯುವ ವ್ಯಕ್ತಿ ನಮ್ಮ ಛಾಯಾಚಿತ್ರ ವನ್ನು ತೆಗೆಯುವ ಮೊದಲು, ‘ಸ್ಮೈಲ್ ಪ್ಲೀಸ್, ಅಂದರೆ ‘ದಯವಿಟ್ಟು ನಗುಮುಖವಿರಲಿ, ಎಂದು ಹೇಳುತ್ತಾನೆ, ಇದನ್ನು ನಾವು ಬಹಳಷ್ಟು ಸಲ ಅನುಭವಿಸಿದ್ದೇವೆ. ನಾವು ಒಳ್ಳೆಯ ಸ್ಮೈಲ್ ಕೊಟ್ಟರೆ (ನಕ್ಕರೆ) ತಕ್ಷಣವೇ, ಅವರು ನಮ್ಮ ನಗುಮುಖದ ಛಾಯಾಚಿತ್ರವನ್ನು ತೆಗೆಯುತ್ತಾರೆ. ನಮ್ಮ ನಗುಮುಖದ ಛಾಯಾ ಚಿತ್ರದ ಕಡೆಗೆ ನೋಡಿ ನಮಗೆ, ಹಾಗೆಯೇ ಅದನ್ನು ನೋಡುವವರಿಗೂ ಆನಂದವಾಗುತ್ತದೆ. ಪರೀಕ್ಷಣೆಯಲ್ಲಿನ ಸಾಧಕಿಯರ ಆನಂದದ ಹಾವಭಾವವಿಲ್ಲದ ಛಾಯಾಚಿತ್ರಗಳ ತುಲನೆಯಲ್ಲಿ ಅವರ ಆನಂದದ ಹಾವಭಾವವಿರುವ ಛಾಯಾಚಿತ್ರಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಮಾಣ ಬಹಳ ಹೆಚ್ಚು ಮತ್ತು ನಕಾರಾತ್ಮಕ ಊರ್ಜೆಯ ಪ್ರಮಾಣ ಬಹಳ ಕಡಿಮೆ ಇದೆ. ಇದರಿಂದ ಕೇವಲ ನಗುವ ಮುದ್ರೆಯನ್ನು ಮಾಡಿದರೂ ವ್ಯಕ್ತಿಯ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ಕಡಿಮೆಯಾಗಿ ಅವರ ಸಾತ್ತ್ವಿಕತೆ ಹೆಚ್ಚಾಗುತ್ತದೆ, ಹೀಗಿರುವಾಗ ಜೀವನದಲ್ಲಿ ನಿಜವಾದ ಆನಂದ ಸಿಕ್ಕರೆ ಎಷ್ಟು ಲಾಭವಾಗುತ್ತಿರಬಹುದು !

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೯.೧.೨೦೨೩)

ವಿ-ಅಂಚೆ : [email protected]

ಆನಂದ ಸಿಗಬೇಕು, ಎಂಬ ಇಚ್ಛೆ ಏಕೆ ಆಗುತ್ತದೆ ?

ಆನಂದವು ಜೀವದ ಮತ್ತು ಜಗತ್ತಿನ ಸ್ಥಾಯೀಭಾವ, ಸ್ವಭಾವ, ಸ್ವಧರ್ಮವಾಗಿದೆ; ಆದುದರಿಂದ ಜೀವದ ಸ್ವಾಭಾವಿಕ ಪ್ರವೃತ್ತಿ ಮೂಲ ಸ್ವರೂಪದ ಕಡೆಗೆ ಹೋಗುವುದರ ಕಡೆ, ಅಂದರೆ ಆನಂದವನ್ನು ಪಡೆಯುವುದರ ಕಡೆ ಮತ್ತು ಮೂಲ ಸ್ವರೂಪದಲ್ಲಿ ಹೋದ ಮೇಲೆ ಬರುವ ಆನಂದದ ಅನುಭೂತಿಯನ್ನು ಉಳಿಸಿಕೊಳ್ಳುವುದರ ಕಡೆ ಇರುತ್ತದೆ.

(ಆಧಾರ : ಸನಾತನದ ಗ್ರಂಥ ‘ಆನಂದಪ್ರಾಪ್ತಿಗಾಗಿ ಅಧ್ಯಾತ್ಮ (ಸುಖ, ದುಃಖ ಮತ್ತು ಆನಂದ ಇವುಗಳ ಶಾಸ್ತ್ರೀಯ ವಿಶ್ಲೇಷಣೆ))

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಅನುಭೂತಿ : ಅನುಭೂತಿಗಳಿಂದ ದೇವರ ಮೇಲಿನ/ಸಾಧನೆಯ ಮೇಲಿನ ಉಪಾಸಕನ ಶ್ರದ್ಧೆಯು ಹೆಚ್ಚಾಗಿ ಅವನ ಸಾಧನೆಯಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ.