ಆಸ್ಟ್ರೇಲಿಯಾ ಪೊಲೀಸರಿಂದ ಈಗ ಖಲಿಸ್ತಾನಿಗಳ ವಿರುದ್ಧ ಕ್ರಮಕ್ಕೆ ಪ್ರಾರಂಭ !

ನವ ದೆಹಲಿ – ಆಸ್ಟ್ರೇಲಿಯಾದ ಮೆಲ್ ಬರ್ನನಲ್ಲಿ ಖಲಿಸ್ತಾನಿ ಸಾರ್ವಜನಿಕ ಮತದಾನದ ಹೆಸರಿನಲ್ಲಿ ನಡೆದ ಹಿಂಸಾಚಾರದ ಪ್ರಕರಣದಲ್ಲಿ ಈಗ ವಿಕ್ಟೋರಿಯಾ ಪೊಲೀಸರು ಕ್ರಮ ಕೈಕೊಳ್ಳಲು ಪ್ರಾರಂಭಿಸಿದ್ದಾರೆ. 2 ತಿಂಗಳ ಹಳೆಯ ಪ್ರಕರಣದಲ್ಲಿ ವಿಕಟ್ರೋರಿಯಾ ಪೊಲೀಸರು ಹಟಾತ್ತಾಗಿ ಖಲಿಸ್ತಾನಿಯರ ಛಾಯಾಚಿತ್ರಗಳನ್ನು ಪ್ರಸಾರ ಮಾಡಿ ಅವರ ಗುರುತು ಕಂಡು ಹಿಡಿಯಲು ಜನರ ಸಹಾಯವನ್ನು ಕೋರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಸ್ಟ್ರೇಲಿಯನ್ ಪ್ರಧಾನಮಂತ್ರಿಗಳಿಗೆ ಭಾರತ ವಿರೋಧಿ ಹಿಂಸಾಚಾರದ ವಿಷಯವನ್ನು ಮಂಡಿಸಿದ ಬಳಿಕ ಈ ಕ್ರಮವನ್ನು ಕೈಕೊಳ್ಳಲಾಗುತ್ತಿದೆ. ವಿಕ್ಟೋರಿಯಾ ಪೊಲೀಸರು ಸಾರ್ವಜನಿಕರಿಗೆ ‘ಜನೇವರಿ 29 ರಂದು ಹಿಂಸಾಚಾರ ನಡೆಸಿದ 6 ಜನರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಿರಿ’, ಎಂದು ಕರೆ ನೀಡಿದ್ದಾರೆ.