ಲಂಡನನಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ !

ಭಾರತೀಯ ರಾಷ್ಟ್ರಧ್ವಜ ಇಳಿಸಿ ಖಲಿಸ್ತಾನಿ ಧ್ವಜ ಹಾರಿಸುವ ಪ್ರಯತ್ನವನ್ನು ಭಾರತೀಯ ಅಧಿಕಾರಿಗಳು ವಿಫಲಗೊಳಿಸಿದರು !

ಲಂಡನ (ಬ್ರಿಟನ) – ಲಂಡನ್ ನಲ್ಲಿ ಖಲಿಸ್ತಾನಿಗಳಿಂದ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿದ್ದಾರೆ. ಅವರು ರಾಯಭಾರಿ ಕಚೇರಿಯಲ್ಲಿನ ಭಾರತದ ರಾಷ್ಟ್ರಧ್ವಜ ಇಳಿಸಿ ಖಲಿಸ್ತಾನಿ ಧ್ವಜ ಹಾರಿಸಲು ಪ್ರಯತ್ನ ಮಾಡಿದರು. ಖಲಿಸ್ತಾನವಾದಿಗಳು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡಿದರು. ಆ ಸಮಯದಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಓರ್ವ ಅಧಿಕಾರಿ ಧೈರ್ಯ ತೋರಿಸಿ ಖಲಿಸ್ತಾನಿಗಳಿಗೆ ವಿರೋಧಿಸಿದರು ಮತ್ತು ಖಲಿಸ್ತಾನಿ ಧ್ವಜ ಹಾರಿಸಲು ಪ್ರಯತ್ನ ಮಾಡುತ್ತಿದ್ದ ಯುವಕನಿಂದ ಖಲಿಸ್ತಾನಿ ಧ್ವಜ ಕಸಿದುಕೊಂಡು ಎಸೆದರು. ಈ ಘಟನೆಯ ನಂತರ ಖಲಿಸ್ತಾನಿಯರಿಗೆ ಪ್ರತ್ಯುತ್ತರ ನೀಡುತ್ತಾ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಭವ್ಯ ತ್ರಿವರ್ಣ ಧ್ವಜ ಹಾರಿಸಿದರು. ‘ವಾರಿಸ ಪಂಜಾಬ ದೇ’ (ಪಂಜಾಬನ ವಾರಸದಾರ) ಸಂಘಟನೆಯ ಮುಖ್ಯಸ್ಥ ಖಲಿಸ್ತಾನಿ ಅಮೃತಪಾಲ ಸಿಂಹ ಇವನ ಮೇಲೆ ಭಾರತದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಾಚರಣೆಯಿಂದ ಖಲಿಸ್ತಾನಿ ಬೆಂಬಲಿಗರಲ್ಲಿ ದಿಗಿಲು ಉಂಟಾಗಿದೆ. ಲಂಡನ್ ನಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲಿನ ದಾಳಿಯು ಆ ಘಟನೆಯ ನಿಷೇಧದ ಭಾಗವಾಗಿದೆ.

೧. ಲಂಡನ ಪೊಲೀಸರು, ಈ ದಾಳಿಯಲ್ಲಿ ೨ ಭದ್ರತಾ ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

೨. ಲಂಡನ್ ನ ಮಹಾಪೌರ ಸಾಧಿಕ ಖಾನ್ ಇವರು ಟ್ವೀಟ್ ಮಾಡಿ, ಈ ರೀತಿಯ ಕೃತ್ಯಗಳಿಗೆ ನಮ್ಮ ನಗರದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

೩. ಭಾರತದಲ್ಲಿನ ಬ್ರಿಟನ್ ನ ರಾಯಭಾರಿ ಅಲೆಕ್ಸ್ ಎಲಿಸ್ ಇವರು ಈ ಘಟನೆ ಖೇದಕರ ಎಂದು ಹೇಳಿದ್ದಾರೆ.

(ಸೌಜನ್ಯ : Oneindia Kannada)

ಬ್ರಿಟನ್ ರಾಯಭಾರಿಯ ಬಳಿ ಭಾರತ ಸರಕಾರದಿಂದ ಸ್ಪಷ್ಟೀಕರಣ ಕೇಳಿದೆ !

ಭಾರತೀಯ ವಿದೇಶಾಂಗ ಸಚಿವಾಲಯವು ಭಾರತದಲ್ಲಿನ ಬ್ರಿಟನ್ ನ ರಾಯಭಾರಿಗಳಲ್ಲಿ ಲಂಡನನಲ್ಲಿನ ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯು ಈ ಕುರಿತು ಒಂದು ಮನವಿಯನ್ನು ಪ್ರಸಾರ ಮಾಡಿದ್ದು ಅದರಲ್ಲಿ, ಭಾರತೀಯ ರಾಯಭಾರ ಕಚೇರಿಯ ಪರಿಸರದಲ್ಲಿ ಈ ಘಟನೆ ನಡೆದಾಗ ಭದ್ರತಾ ಸಿಬ್ಬಂದಿ ಅಲ್ಲಿ ಉಪಸ್ಥಿತ ಇರಲಿಲ್ಲ. ಈ ಬಗ್ಗೆ ಬ್ರಿಟನ್ ನ ರಾಯಭಾರಿ ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದೆ.

ಬ್ರಿಟನ್ ಸರಕಾರ ಭದ್ರತೆಯ ಬಗ್ಗೆ ಗಾಂಭೀರ್ಯತೆಯಿಂದ ನೋಡಲಿದೆ !

ಬ್ರಿಟಿಷ ಸರಕಾರ ಲಂಡನ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಭದ್ರತೆಯ ಅಂಶಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ, ಎಂದು ಬ್ರಿಟನ್ ನ ಓರ್ವ ಹಿರಿಯ ಅಧಿಕಾರಿ ಹೇಳಿದ್ದಾರೆ. ರಾಯಭಾರಿ ಕಚೇರಿಯಲ್ಲಿನ ದಾಳಿ ಮತ್ತು ದಾಂದಲೆ ಖಂಡನೀಯ ಮತ್ತು ಆಸ್ವೀಕಾರ ಎಂದು ಅಧಿಕಾರಿ ಹೇಳಿದ್ದಾರೆ.

ಸಂಪಾದಕರ ನಿಲುವು

ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ, ಅಮೇರಿಕ ಮುಂತಾದ ದೇಶಗಳಲ್ಲಿ ಖಲಿಸ್ತಾನಿಗಳು ಭಾರತೀಯ ರಾಯಭಾರಿ ಕಚೇರಿ ಮತ್ತು ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ಮಾಡುತ್ತಿರುವುದು ಆ ದೇಶಗಳಿಂದ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಕಾಣುತ್ತಿಲ್ಲ. ಈಗ ಭಾರತ ಸರಕಾರ ಹಾಗೂ ಭಾರತೀಯರೇ ಈ ದೇಶಗಳ ವಿರುದ್ಧ ಕಠೋರ ಆಗುವುದು ಅವಶ್ಯಕವಾಗಿದೆ !