ಪೃಥ್ವಿಗೆ ಬಂದು ಏಲಿಯನ್ಸ್ ನಿಂದ ಬೇಹುಗಾರಿಕೆ ! – ಅಮೇರಿಕಾದಿಂದ ಎಚ್ಚರಿಕೆ

(ಏಲಿಯನ್ಸ್ ಎಂದರೆ ಇತರ ಗ್ರಹಗಳಲ್ಲಿನ ಜೀವ)

ವಾಷಿಂಗ್ಟನ್ – ಅಮೇರಿಕಾ ಅಜ್ಞಾತ ‘ಹಾರುವ ತಟ್ಟೆಗಳು’ (ಇತರ ಗ್ರಹವಾಸಿಗಳ ವಿಮಾನ) ಈ ಸಿದ್ಧಾಂತದ ಬಗ್ಗೆ ನಂಬಿಕೆ ಇಟ್ಟುಕೊಂಡಿದೆ. ಏಲಿಯನ್ಸ್ ಅಸ್ತಿತ್ವದಲ್ಲಿದ್ದು ಅವು ಸೂರ್ಯ ಮಂಡಲದಲ್ಲಿ ಇವೆ ಎಂದು ಅಮೇರಿಕಾಗ ವಿಶ್ವಾಸವಿದೆ. ಇದರ ಬಗ್ಗೆ ಸಂಶೋಧನೆ ನಡೆಸಲು ಅಮೇರಿಕಾ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ. ಈಗ ಅಮೆರಿಕಾದ ರಕ್ಷಣಾ ಸಚಿವಾಲಯ ‘ಪೆಂಟಗಾನ್’ ಎಚ್ಚರಿಕೆ ನೀಡಿದೆ. ಅದರಲ್ಲಿ ಏಲಿಯನ್ಸ್ ಅವರ ಗೂಡಾಚಾರಿಗಳನ್ನು ಪೃಥ್ವಿಗೆ ಕಳಿಸುತ್ತಿರುವುದು ಅಧಿಕೃತವಾಗಿ ಹೇಳುತ್ತಿದ್ದಾರೆ.

೧. ಪೇಂಟಿಗಾನ್ ಎಚ್ಚರಿಕೆಯಲ್ಲಿ, ಸೂರ್ಯ ಮಂಡಲದಲ್ಲಿನ ಇತರ ಗ್ರಹಗಳ ಶೋಧಕಾರ್ಯ ಮಾಡುವ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಯಾವ ರೀತಿ ಉಪಕರಣಗಳು ಬಳಸುತ್ತದೆ, ಅದೇ ರೀತಿ ಏಲಿಯನ್ಸ್ ‘ಮದರಶಿಪ’ನ (ಮುಖ್ಯ ಹಾಗೂ ದೊಡ್ಡ ವಿಮಾನ) ಉಪಯೋಗಿಸುತ್ತದೆ. ಪೆಂಟಾಗಾನ್ ನ ಅಧಿಕಾರಿಗಳು, ಏಲಿಯನ್ಸ್ ನಮ್ಮ ಸೂರ್ಯ ಮಂಡಲದಲ್ಲಿ ಇರಬಹುದು ಮತ್ತು ಪೃಥ್ವಿಯ ಬಗ್ಗೆ ರಹಸ್ಯ ಮಾಹಿತಿ ಕಳುಹಿಸುತ್ತಿರಬಹುದು ಎಂದು ಹೇಳಿದೆ.

ಪೆಂಟಗಾನ್ ನಿಂದ ಹೆಚ್ಚಿರುವ ಕಳವಳ !

೨೦೨೨ ರಲ್ಲಿ ಪೆಂಟಗಾನ್ ನ ‘ಆಲ್ ಡೋಮೆನ್ ಅನೋಮಲಿ ರೀಝ್ಯೋಲ್ಯೂಷನ್ ಆಫೀಸ್’ ನ ಸ್ಥಾಪನೆ ಮಾಡಿದ್ದು. ‘ಆಲ್ ಡೋಮೆನ್ ಅನೋಮಲಿ ರೀಝ್ಯೋಲ್ಯೂಷನ್ ಆಫೀಸ್’ ನ ಮುಖ್ಯ ಉದ್ದೇಶ ‘ಅಜ್ಞಾತ ವಿಷಯಗಳ ಟ್ಯ್ರಾಕಿಂಗ್ ಮಾಡುವುದಾಗಿದೆ’. ಆ ವಸ್ತು ಆಕಾಶದಲ್ಲಿರಲಿ, ಹೊರಗಿನ ಪರಿಸರದಲ್ಲಿರಲಿ ಅಥವಾ ನೀರಿನಾಡಿಯಲ್ಲಿರಲಿ. ನಾಸಾದಂತೆ ಏಲಿಯನ್ ಮದರಶಿಪ ಕೂಡ ಕೆಲಸ ಮಾಡುತ್ತದೆ, ಎಂದು ‘ಆಲ್ ಡೋಮೆನ್ ಅನೋಮಲಿ ರೀಝ್ಯೋಲ್ಯೂಷನ್ ಆಫೀಸ್’ನ ನಿರ್ದೇಶಕ ಸೀನ್ ಕಿರ್ಕಪೆಟ್ರಿಕ ಇವರು ಹೇಳಿದರು.

ಮದರಶಿಪನ ದಾವೆ

‘ಹಾರುವ ತಟ್ಟೆ’ಗಳ ಬಗ್ಗೆ ಅಮೇರಿಕಾದ ರಕ್ಷಣಾ ಸಚಿವಾಲಯ ಪೆಂಟೆಗಾನ್ ಅನೇಕ ವರ್ಷಗಳಿಂದ ಸಂಶೋಧನೆ ನಡೆಸುತ್ತಿದೆ. ಅದರ ಒಂದು ಸಂಶೋಧಕರ ಗುಂಪು ಮದರಶಿಪ ಬಗ್ಗೆ ದಾವೆ ಮಾಡುತ್ತಿದೆ. ಪೆಂಟಗಾನ್ ‘ಹಾರುವ ತಟ್ಟೆಗಳ’ ಇಲಾಖೆಯ ಮುಖ್ಯಸ್ಥರ ಅಭಿಪ್ರಾಯ ಸೌರಮಂಡಲದಲ್ಲಿ ಒಂದು ಮದರಶಿಪ ಇರಬಹುದು. ಅಲ್ಲಿಯೇ ಏಲಿಯನ್ಸ್ ವಾಸ ಮಾಡುತ್ತಿರಬಹುದು ಎಂದು ಹೇಳಿದೆ.

‘ಹಾರುವ ತಟ್ಟೆಗಳು’ ಪೃಥ್ವಿಯಲ್ಲಿ ಬೇಹುಗಾರಿಕೆ ಮಾಡಬಹುದು !

‘ಆಲ್ ಡೋಮೆನ್ ಅನೋಮಲಿ ರೀಝ್ಯೋಲ್ಯೂಷನ್ ಆಫೀಸ್’ ನ ಸಂಚಾಲಕ ಸೀನ್ ಕಿರ್ಕಪೆಟ್ರಿಕ ಇವರು, ಅಂತರಿಕ್ಷದಲ್ಲಿನ ಒಂದು ಕೃತ್ರಿಮ ವಸ್ತು ಪೃಥ್ವಿಯ ಹತ್ತಿರ ಬಂದ ನಂತರ ವಿವಿಧ ರೀತಿಯ ಮಾಹಿತಿ ಒಗ್ಗೂಡಿಸಿ ತೆಗೆದುಕೊಂಡು ಹೋಗಬಹುದು. ಈ ಚಿಕ್ಕ ವಸ್ತುವಿಗೆ ವಿಜ್ಞಾನಿಗಳು ‘ಓಮು ಅಮುವ’ ಎಂದು ಹೆಸರು ನೀಡಿದ್ದಾರೆ ಎಮದು ಬರೆದಿದ್ದಾರೆ.

ಆಶ್ಚರ್ಯಕರ ವಿಡಿಯೋ ವೈರಲ್ !

ಕೆಲವು ದಿನಗಳ ಹಿಂದೆ ಒಂದು ಪವಾಡ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಇದರಲ್ಲಿ ಉದ್ದ, ತೆಳ್ಳಗೆ, ಪೆನ್ಸಿಲ್ ಆಕಾರದ ‘ಓಮುಆಮುವ’ ದ ಸಂಶೋಧನೆ ನಡೆಸಿದೆ. ಇದು ಒಂದು ಅಜ್ಞಾತ ಬಾಹ್ಯಾಕಾಶ ವಸ್ತುವಾಗಿತ್ತು. ಅನೇಕ ವಿಜ್ಞಾನಿಗಳಿಗೆ, ಇದು ‘ಹಾರುವ ತಟ್ಟೆಗಳು’ ಇರಬಹುದು ಎಂದು ಅನಿಸಿದೆ. ಇದರ ಕುರಿತು ಸಂಶೋಧನೆ ಮುಂದುವರೆಸಿದ್ದರು. ಕೆಲವು ದಿನಗಳ ಹಿಂದೆ ಕೆನಡಾದ ಆಕಾಶದಲ್ಲಿ ಏಲಿಯನ್ಸ್ ಪ್ರಯಾಣ ಮಾಡಿರುವ ದಾವೆ ಮಾಡಿತ್ತು. ಇದರ ಕುರಿತಾದ ಒಂದು ವಿಡಿಯೋ ತಯಾರಿಸಲಾಗಿತ್ತು.

(ಸೌಜನ್ಯ -Astro Cowboy’s Universe)