ಉತ್ತರಪ್ರದೇಶದಲ್ಲಿನ ಮತಾಂಧರಿಂದ ಅಪ್ರಾಪ್ತ ಹುಡುಗಿಯ ಅಪಹರಣ ಮತ್ತು ಬಲಾತ್ಕಾರ

ಕಾಮುಕ ಮತಾಂಧರು !

ಬದಾಯು (ಉತ್ತರ ಪ್ರದೇಶ) – ಇಲ್ಲಿ ೪ ಮತಾಂಧ ಯುವಕರು ಒಬ್ಬ ಹಿಂದೂ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಬಲತ್ಕಾರ ಮಾಡಿದ್ದಾರೆ. ಸಂತ್ರಸ್ತ ಹುಡುಗಿಯನ್ನು ಅಪಹರಿಸುವ ಮೊದಲು ಆಕೆಯ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಇಸರಾರ, ಆರಿಫ್ ಮತ್ತು ತಸ್ಲೀಮ್ ಮೂವರನ್ನು ಬಂಧಿಸಿದ್ದಾರೆ, ಹಾಗೂ ನಾಲ್ಕನೆಯ ಆರೋಪಿ ಅರ್ಬಾಸ್ ಪರಾರಿಯಾಗಿದ್ದಾನೆ. ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.

ಬದಾಯು ಜಿಲ್ಲೆಯಲ್ಲಿನ ಬಿಸೋಲಿಯ ಒಂದು ಗ್ರಾಮದಲ್ಲಿ ವಾಸಿಸುವ ಅಪ್ರಾಪ್ತ ಸಂತ್ರಸ್ತ ಹುಡುಗಿಯು ತನ್ನ ತಾಯಿ ಜೊತೆ ಹೊರಗೆ ಹೋಗಿದ್ದಳು. ಆರೋಪಿ ಇಸರಾರ, ಆರಿಫ್ ಮತ್ತು ತಸ್ಲೀಮ್ ಮತ್ತು ಅಬರಾರ ಅವರು ಅವರನ್ನು ಹಿಂಬಾಲಿಸಿದರು. ಗ್ರಾಮದ ಹೊಲದ ಬಳಿ ತಲುಪುತ್ತಲೇ ನಾಲ್ವರು ಹುಡುಗಿಯನ್ನು ಚುಡಾಯಿಸಿದನ್ನು ಆಕೆಯ ತಾಯಿ ವಿರೋಧಿಸಿದಾಗ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿ ಪ್ರಜ್ಞೆ ತಪ್ಪಿಸಿದರು. ಆರೋಪಿಗಳು ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಕುಟುಂಬದವರಿಗೆ ಘಟನೆಯ ಮಾಹಿತಿ ದೊರೆಯುತ್ತದೆ ಅವರು ಗ್ರಾಮಸ್ಥರ ಜೊತೆಗೆ ಘಟನಾಸ್ಥಳಕ್ಕೆ ಓಡಿ ಬಂದು ಆರೋಪಿಗಳನ್ನು ಪೊಲೀಸರವಶಕ್ಕೆ ನೀಡಿದರು. ಅರಬಾಜ ಪರಾರಿಯಾಗಿದ್ದಾನೆ, ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.