ಖಲಿಸ್ತಾನದ ನಿಜವಾದ ಶತ್ರು ಭಾರತವಲ್ಲ, ಪಾಕಿಸ್ತಾನ ! – ‘ದಲ ಖಾಲಸಾ’ ಸಂಘಟನೆಯ ಸಂಸ್ಥಾಪಕ ಹಾಗೂ ಮಾಜಿ ಖಲಿಸ್ತಾನಿ ನೇತಾರ ಜಸವಂತ ಸಿಂಹ ಠೆಕೆದಾರ

‘ದಲ ಖಾಲಸಾ’ ಸಂಘಟನೆಯ ಸಂಸ್ಥಾಪಕ ಹಾಗೂ ಮಾಜಿ ಖಲಿಸ್ತಾನಿ ನೇತಾರ ಜಸವಂತ ಸಿಂಹ ಠೆಕೆದಾರರ ಸ್ಪಷ್ಟೋಕ್ತಿ !

ನವದೆಹಲಿ – ‘ವಾರಿಸ ದೆ ಪಂಜಾಬ’ (ಪಂಜಾಬಿನ ವಾರಸುದಾರ) ಎಂಬ ಸಂಘಟನೆಯ ಪ್ರಮುಖ ಅಮೃತಪಾಲಸಿಂಹ ಖಲಿಸ್ತಾನಿಯಲ್ಲ. ಅವನಿಗೆ ಖಲಿಸ್ತಾನದ ಬಗ್ಗೆ ಏನೂ ತಿಳಿದಿಲ್ಲ; ಆದರೆ ಅವನು ಖಲಿಸ್ತಾನದ ಹೆಸರಿನಲ್ಲಿ ಬಹಳ ಹಣ ಗಳಿಸಿದ್ದಾನೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಅಮೃತಪಾಲನನ್ನು ತನ್ನ ಆಯುಧವನ್ನಾಗಿ ಬಳಸುತ್ತಿದೆ. ಆದರೆ ಅದು ಈ ಆಯುಧವನ್ನು ಶಾಶ್ವತವಾಗಿ ಬಳಸುವುದಿಲ್ಲ. ಅದರಿಂದ ಉಪಯೋಗವಿಲ್ಲದಾಗ ಇತರ ಯಾರದ್ದಾದರೂ ಕೈಹಿಡಿಯುವುದು. ಖಲಿಸ್ತಾನದ ಸ್ಥಾಪನೆಯಾದರೆ ಖಲಿಸ್ತಾನದ ಮುಂದಿನ ಗುರಿ ಲಾಹೋರ ಆಗಿರಲಿದೆ ಎಂಬುದು ಪಾಕಿಸ್ತಾನಕ್ಕೂ ತಿಳಿದಿದೆ. ಆದುದರಿಂದ ಖಲಿಸ್ತಾನವಾಗಲು ಪಾಕಿಸ್ತಾನವು ಎಂದಿಗೂ ಬಿಡುವುದಿಲ್ಲ. ಆದುದರಿಂದ ಖಲಿಸ್ತಾನದ ನಿಜವಾದ ಶತ್ರು ಭಾರತವಲ್ಲ, ಪಾಕಿಸ್ತಾನವಾಗಿದೆ, ಎಂದು ‘ದಲ ಖಾಲಸಾ’ ಸಂಘಟನೆಯ ಸಂಸ್ಥಾಪಕ ಹಾಗೂ ಮಾಜಿ ಖಲಿಸ್ತಾನಿ ನೇತಾರನಾದ ಜಸವಂತಸಿಂಹನು ಒಂದು ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ.

ಆಮ ಆದಮಿ ಪಕ್ಷದ ಅಸಮರ್ಥತೆ !

ಜಸವಂತ ಸಿಂಹರು ಪಂಜಾಬಿನಲ್ಲಿರುವ ಆಮ ಆದಮಿ ಪಕ್ಷದ ಸರಕಾರಕ್ಕೆ ಅಸಮರ್ಥವೆಂದು ಹೇಳಿದೆ. ಅವರು ಆಪ್‌ ಖಲಿಸ್ತಾನ ಸಮರ್ಥಕರ ಬಗ್ಗೆ ಮೃದುಧೊರಣೆಗಳನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಅವರು ಇದರಿಂದಾಗಿಯೇ ಖಲಿಸ್ತಾನಿ ಚಳುವಳಿಯು ಪುನಃ ಸಕ್ರೀಯವಾಗಿದೆ ಎಂದು ಹೇಳಿದರು.

ಖಲಿಸ್ತಾನಕ್ಕಾಗಿ ಜನಮತ ಸಂಗ್ರಹವೆಂಬ ಷಡ್ಯಂತ್ರ !

ಜಸವಂತಸಿಂಹರು ಖಲಿಸ್ತಾನಕ್ಕಾಗಿ ಜನಮತ ಸಂಗ್ರಹ ಎಂಬುದು ಒಂದು ಷಡ್ಯಂತ್ರವಾಗಿದೆ. ಅವರು ಮಾತನಾಡುತ್ತ, ನಿರ್ಬಂಧ ಹೇರಲಾದ ಕೆಲವು ಸಂಘಟನೆಗಳು ನಾಸ್ತಿಕವಾಗಿವೆ. ಪಂಜಾಬಿನಿಂದ ಇಂತಹ ಜನಮತ ಸಂಗ್ರಹದ ಬೇಡಿಕೆ ಮಾಡಲಾಗಿದೆ. ಒಂದು ನಿರ್ಬಂಧಿತ ಸಂಘಟನೆಯು ಐ.ಎಸ್‌.ಐ.ನ ನಿರ್ದೇಶನದ ಅಡಿಯಲ್ಲಿ ಈ ಮನವಿ ಮಾಡುತ್ತಿದೆ. ಒಂದು ಪಕ್ಷದಲ್ಲಿ ಭಾರತೀಯ ಪಾಸಪೋರ್ಟ ಇರುವ ನಾಗರೀಕನು ಇಂತಹ ಮನವಿಗಳನ್ನು ಮಾಡುತ್ತಿದ್ದರೆ ಒಪ್ಪಬಹುದು, ಆದರೆ ಕೆನಡಾ, ಬ್ರಿಟನ, ಅಮೇರಿಕಾ ಇತ್ಯಾದಿ ದೇಶಗಳ ನಾಗರೀಕರಾಗಿದ್ದವರು ಹಾಗೂ ಅದೇ ದೇಶದಲ್ಲಿ ಮತದಾನ ಮಾಡುವವರಿಗೆ ಇಂತಹ ಮನವಿ ಮಾಡುವ ಯಾವುದೇ ಅಧಿಕಾರವಿಲ್ಲ.

ಖಲಿಸ್ತಾನಿಗಳ ಕೆಲವು ಮನವಿಗಳನ್ನು ಒಪ್ಪಿದರೆ ಚಳುವಳಿ ನಿಲ್ಲುವುದು !

ಜಸವಂತಸಿಂಹರವರು ಮಾತನಾಡುತ್ತ, ಸರಕಾರವು ಖಲಿಸ್ತಾನ ನೇತಾರರ ಕೆಲವು ಬೇಡಿಕೆಗಳನ್ನು ಒಪ್ಪಿದರೆ ಚಳುವಳಿ ಮುಕ್ತಾಯಗೊಳ್ಳುವುದು. ಸಿಖ್ಖ ರಾಜಕೀಯ ಕೈದಿಗಳ ಬಿಡುಗಡೆ, ಕಲಮು ೨೫ ಬಿ ೨ನ ತೆರವು ಇತ್ಯಾದಿ ಬೇಡಿಕೆಗಳನ್ನು ಒಪ್ಪಿದರೆ ಈ ಚಳುವಳಿಯು ನಿಧಾನವಾಗಿ ದುರ್ಬಲಗೊಳ್ಳುವುದು. ಈ ಬೇಡಿಕೆಗಳನ್ನು ಒಪ್ಪಿದರೆ ದೇಶಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ಪ್ರಧಾನಿ ಮೋದಿಯವರು ಸಿಖ್ಖರಿಗಾಗಿ ಬಹಳಷ್ಟು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ !

ಜಸವಂತಸಿಂಹ ಠೆಕೆದಾರರು ಮುಂದುವರಿದು, ಪ್ರಧಾನಿ ಮೋದಿಯವರು ಸಿಖ್ಖರಿಗಾಗಿ ಬಹಳಷ್ಟು ಮಾಡಿದ್ದಾರೆ. ಅವರು ಸಿಖ್ಖರನ್ನು ಗೌರವಿಸುತ್ತಾರೆ ಹಾಗೂ ಸಿಖ್ಖರಿಗಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಅವರು ಕರ್ತಾರಪೂರ ಕಾರಿಡಾರ (ಸುಸಜ್ಜ ಮಾರ್ಗ) ತೆರೆದಿದ್ದಾರೆ. ಗುರು ಗೋವಿಂದ ಸಿಂಹರ ಇಬ್ಬರು ಮಕ್ಕಳ ಹೆಸರಿನಲ್ಲಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ, ಎಂದು ಹೇಳಿದರು.