ಯೋಗ ಋಷಿ ರಾಮದೇವ ಬಾಬಾ ಇವರಿಂದ ಹಿಂದೂ ಯುವಕ-ಯುವತಿಯರಿಗಾಗಿ ಸನ್ಯಾಸ ಮಹೋತ್ಸವದ ಆಯೋಜನೆ !

೧೨ ನೇ ತರಗತಿಯಿಂದ ಪದವಿಯ ವರೆಗಿನ ಯುವಕರು ಅರ್ಜಿ ಸಲ್ಲಿಸಬಹುದು !

ಹರಿದ್ವಾರ (ಉತ್ತರಾಖಂಡ) – ಯೋಗ ಋಷಿ ರಾಮದೇವ ಬಾಬಾ ಇವರು ಬರುವ ಮಾರ್ಚ್ ೨೨ ರಿಂದ ಮಾರ್ಚ್ ೩೦ ರ ವರೆಗಿನ (ಶ್ರೀ ರಾಮನವಮಿ) ಸಮಯದಲ್ಲಿ ಸನ್ಯಾಸ ಮಹೋತ್ಸವದ ಆಯೋಜನೆ ಮಾಡಿದ್ದಾರೆ. ಇದರಲ್ಲಿ ಯಾರಿಗೆ ಸನ್ಯಾಸ ಸ್ವೀಕರಿಸುವುದಿದೆ, ಅವರು ಅರ್ಜಿ ಸಲ್ಲಿಸಬಹುದು. ‘ಯಾವ ಯುವಕ-ಯುವತಿಯರಿಗೆ ಭಿಕ್ಷುಗಳಾಗುವುದಿದೆ, ಅವರು ಯಾವ ಷರತ್ತು ಪೂರ್ಣಗೊಳಿಸಬೇಕು, ಅದಕ್ಕಾಗಿ ಸನ್ಯಾಸ ಮಹೋತ್ಸವದ ಆಯೋಜನೆ ಮಾಡಲಾಗುವುದು. ಅದಕ್ಕಾಗಿ ೧೨ ನೇ ತರಗತಿ ಉತ್ತೀರ್ಣರಾಗಿರುವ, ಪದವೀಧರರು ಮತ್ತು ಸ್ನಾತಕೋತ್ತರ ಯುವಕರು ಅರ್ಜಿ ಸಲ್ಲಿಸಬಹುದು, ಎಂದು ಯೋಗ ಋಷಿ ರಾಮದೇವ ಬಾಬಾ ಇವರು ಹೇಳಿದ್ದಾರೆ. ಇದರ ಸಂದರ್ಭದಲ್ಲಿ ದೈನಿಕದಲ್ಲಿ ಜಾಹೀರಾತು ಕೂಡ ನೀಡಲಾಗಿದೆ.

ಇದರ ಸಂದರ್ಭದಲ್ಲಿ ರಾಮದೇವ ಬಾಬಾ ಇವರು ಒಂದು ಪೋಸ್ಟ್ ಕೂಡ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, ಯಾವುದೇ ಜಾತಿ ಮತ್ತು ಸಮುದಾಯದಲ್ಲಿ ಹುಟ್ಟಿರುವ ಓರ್ವ ಸಾಮಾನ್ಯ ವ್ಯಕ್ತಿ ದೊಡ್ಡ ಕ್ರಾಂತಿ ಮಾಡಬಹುದು. ಕೇವಲ ಅವರು ಪರಾಕ್ರಮಿ ಮತ್ತು ಕಠಿಣ ಪ್ರಯತ್ನ ಮಾಡುವವರಾಗಿರಬೇಕು. ಯುವಕರು ಪತಂಜಲಿಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ತಮ್ಮಲ್ಲಿ ಮಹಾನ ಋಷಿಮುನಿಗಳ ಹಾಗೆ ವ್ಯಕ್ತಿತ್ವವನ್ನು ರೂಪಿಸಬೇಕು. ಸನ್ಯಾಸಿ ಯುವಕರು ಸನಾತನ ಧರ್ಮಕ್ಕೆ ಸಮರ್ಪಿತವಾಗಿರುತ್ತಾರೆ. ಯಾವುದೇ ಜಾತಿ ಮತ್ತು ಪ್ರಾಂತದಲ್ಲಿನ ಪೋಷಕರು ತಮ್ಮ ಬುದ್ಧಿವಂತ ಮಕ್ಕಳು ಹೆಸರುವಾಸಿಯಾಗಲು ಅವರಿಗೆ ಶಿಕ್ಷಣ ಮತ್ತು ದೀಕ್ಷೆ ನೀಡಿ ಕಳಿಸಬಹುದು. ಈ ಮಕ್ಕಳು ಸನಾತನ ಧರ್ಮಕ್ಕೆ ಏಕನಿಷ್ಠವಾಗಿರುವರು ಎಂದು ಹೇಳಿದರು.