ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲದಿಂದ ತಿರಸ್ಕಾರ !

ನವ ದೆಹಲಿ – ಭೋಪಾಲ್ ದಲ್ಲಿ ೧೯೮೪ ರಲ್ಲಿ ನಡೆದ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಿರುವ ಅರ್ಜಿಯ ನಿರ್ಣಯದ ಬಗ್ಗೆ ಪುನರ್ವಿಚಾರ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ೨೦೧೦ ರಲ್ಲಿ ಈ ಅರ್ಜಿ ದಾಖಲಿಸಲಾಗಿತ್ತು. ೧೯೮೯ ರಲ್ಲಿ ಸಂವಿಧಾನಿಕ ನ್ಯಾಯಾಲಯವು ಈ ಕುರಿತಾದ ನಿರ್ಣಯ ನೀಡುವಾಗ ಸಂತ್ರಸ್ತರಿಗೆ ೭೨೫ ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಆದೇಶ ನೀಡಿತ್ತು. ಇದರ ಬಗ್ಗೆ ಹೆಚ್ಚುವರಿ ೬೭೫ ಕೋಟಿ ೯೬ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅರ್ಜಿಯನ್ನು ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಕೇಂದ್ರ ಸರಕಾರವು ೨೦೧೦ ರಲ್ಲಿ ದಾಖಲಿಸಿತ್ತು. ಅನಿಲ ದುರಂತದ ವಿರುದ್ಧ ಸಂವಿಧಾನಿಕ ನ್ಯಾಯಾಲಯದ ಮುಂದೆ ಜವಾಬ್ದಾರಿರುವ ಡಾವು ಕೆಮಿಕಲ್ಸ್ ಈ ಕಂಪನಿಯು ನ್ಯಾಯಾಲಯವು ಹೇಳಿರುವ ಹಣಕ್ಕಿಂತಲೂ ಒಂದು ರೂಪಾಯಿ ಕೂಡ ಹೆಚ್ಚಾಗಿ ನೀಡಲು ನಿರಾಕರಿತ್ತು.

೧. 5 ನ್ಯಾಯಮೂರ್ತಿಗಳ ಪೀಠವು ಅರ್ಜಿಯನ್ನು ತಿರಸ್ಕರಿಸುತ್ತಾ, ತೀರ್ಪಿನ ಎರಡು ದಶಕಗಳ ನಂತರ ಅರ್ಜಿಯ ಮಹತ್ವ ಉಳಿಯುವುದಿಲ್ಲ. ೨ ದಶಕಗಳ ನಂತರ ಇದರ ಬಗ್ಗೆ ಅಂಶಗಳನ್ನು ಪ್ರಸ್ತಾಪಿಸಿರುವುದರ ಬಗ್ಗೆ ನಮಗೆ ಅಸಮಾಧಾನವಿದೆ.

೨. ಕೇಂದ್ರ ಸರಕಾರ, ಯಾವ ಸಮಯದಲ್ಲಿ ನ್ಯಾಯಾಲಯವು ಪರಿಹಾರ ನೀಡಲು ಒಪ್ಪಿತೋ, ಆಗ ಸಂತ್ರಸ್ತರ ಸಂಖ್ಯೆ ೨ ಲಕ್ಷ ೫ ಸಾವಿರ ಇತ್ತು, ಆದರೆ ನಂತರ ಇದರಲ್ಲಿ ಹೆಚ್ಚಳವಾಗಿ ಅದು ೫ ಲಕ್ಷ ೭೪ ಸಾವಿರದಷ್ಟು ಆಗಿತ್ತು. ಆದ್ದರಿಂದ ನಷ್ಟ ಪರಿಹಾರದ ಹಣ ಹೆಚ್ಚಿಸಿ ನೀಡಲು ಒತ್ತಾಯಿಸಲಾಗಿತ್ತು ಎಂದು ದಾವೆ ಮಾಡಿದೆ.

(ಸೌಜನ್ಯ : DNA NEWS)