ನವದೆಹಲಿ – ಅಲಹಾಬಾದ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಪರಿಸರದಲ್ಲಿರುವ ಮಸೀದಿಯನ್ನು 2017 ರಲ್ಲೇ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಸೂಕ್ತವಾಗಿದೆಯೆಂದು ತಿಳಿಸಿ ಮಸೀದಿಯನ್ನು ತೆರವುಗೊಳಿಸುವಂತೆ ಮತ್ತು ಅವರಿಗೆ ಪರ್ಯಾಯ ಭೂಮಿಯನ್ನು ನೀಡುವಂತೆ ರಾಜ್ಯ ಸರಕಾರವನ್ನು ಕೋರಲು ವಕ್ಫ ಬೋರ್ಡಿಗೆ ಅನುಮತಿ ನೀಡಿದೆ. ` 3 ತಿಂಗಳಿನ ಒಳಗೆ ಮಸೀದಿಯನ್ನು ತೆರವುಗೊಳಿಸಬೇಕು ಇಲ್ಲವಾದರೆ ಅದನ್ನು ತೆರವುಗೊಳಿಸಲಾಗುವುದು’ ಎಂದೂ ಸಹ ನ್ಯಾಯಾಲಯವು ವಕ್ಫ ಬೋರ್ಡಗೆ ಹೇಳಿದೆ. ಮಸೀದಿ 1950 ರಿಂದ ಈ ಸ್ಥಳದಲ್ಲಿದ್ದು, ನ್ಯಾಯಾಲಯವನ್ನು ವಿಸ್ತರಿಸುವಾಗ ಅದನ್ನು ತೆರವುಗೊಳಿಸುವಾಗ ವಕ್ಫ ಬೋರ್ಡ ವಿರೋಧಿಸಿತ್ತು. ಈ ಮಸೀದಿ `ಮಸೀದಿ ಹೈಕೋರ್ಟ’ ಹೆಸರಿನಿಂದ ಗುರುತಿಸಲ್ಪಡುತ್ತದೆ.
(ಸೌಜನ್ಯ: NEWS 18)