ಕಿಶನಗಂಜ(ಬಿಹಾರ)ನಲ್ಲಿ ಬೆಂಕಿಯಿಂದಾಗಿ ದೇವಸ್ಥಾನ ಸುಟ್ಟು ಭಸ್ಮ !

  • ಅಪರಿಚಿತರು ಬೆಂಕಿ ಹಚ್ಚಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ

  • ಪೊಲೀಸರು ಈ ಘಟನೆಯ ಯೋಗ್ಯ ತನಿಖೆ ಮಾಡಿ ಸತ್ಯವನ್ನು ಜನರ ಮುಂದಿಡಬೇಕು !

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಕಿಶನಗಂಜ (ಬಿಹಾರ) – ಬಗಲಬಾಡಿ ಗ್ರಾಮದ ಪಂಚಾಯತ ಮಸ್ತಾನ ಚೌಕದಲ್ಲಿರುವ ಶ್ರೀ ಹನುಮಾನ ದೇವಸ್ಥಾನಕ್ಕೆ ಬೆಂಕಿ ತಗುಲಿತ್ತು. ಇದರಲ್ಲಿ ದೇವತೆಗಳ ವಿಗ್ರಹಗಳೊಂದಿಗೆ ದೇವಸ್ಥಾನವೂ ಸುಟ್ಟು ಭಸ್ಮವಾಗಿವೆ. ದೇವಸ್ಥಾನದಲ್ಲಿರುವ ಶಿವಲಿಂಗ ಹಾಗೂ ಇತರ ವಿಗ್ರಹಗಳಿಗೆ ಹಾನಿಯಾಗಿದೆ. ಈ ಬೆಂಕಿಯಿಂದಾಗಿ ದೇವಸ್ಥಾನದ ಅಕ್ಕಪಕ್ಕದ 3 ದೇವಸ್ಥಾನಗಳೂ ಸುಟ್ಟು ಭಸ್ಮವಾಗಿವೆ. ದೇವಸ್ಥಾನದ ಗೋಡೆಗಳಿಗೂ ಹಾನಿಯಾಗಿದೆ. ಸ್ಥಳೀಯ ಗ್ರಾಮಸ್ಥರು ಹಾಗೂ ಪೊಲೀಸರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ದೇವಸ್ಥಾನವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಇದರಿಂದಾಗಿ ಇಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡುತ್ತ ರಸ್ತೆ ತಡೆ’ ನಡೆಸಿದರು. ಇದರೊಂದಿಗೆ ದೇವಸ್ಥಾನವನ್ನು ಸರಕಾರಿ ವೆಚ್ಚದಲ್ಲಿ ಪುನರ್ಸ್ಥಾಪಿಸಬೇಕು, ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನಕ್ಕೆ ಸಿಸಿಟಿವಿ ಅಳವಡಿಸಬೇಕು ಎಂದು ಮನವಿ ಮಾಡಲಾಯಿತು.

(ಸೌಜನ್ಯ :TIMES NOW Navbharat )